Yathindra Siddaramaiah: ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲೇ ಅವರ ಪುತ್ರ ಯತೀಂದ್ರಗೆ ಗ್ರಾಮಸ್ಥರ ಘೇರಾವ್; ಇಲ್ಲಿದೆ ಸಚಿತ್ರ ವರದಿ-mysuru news muddubeeranahundi villagers laid a gherao on cm siddramaiah son yathindra in varuna constituency rgs ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yathindra Siddaramaiah: ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲೇ ಅವರ ಪುತ್ರ ಯತೀಂದ್ರಗೆ ಗ್ರಾಮಸ್ಥರ ಘೇರಾವ್; ಇಲ್ಲಿದೆ ಸಚಿತ್ರ ವರದಿ

Yathindra Siddaramaiah: ಸಿಎಂ ಸಿದ್ದರಾಮಯ್ಯ ಸ್ವಕ್ಷೇತ್ರ ವರುಣಾದಲ್ಲೇ ಅವರ ಪುತ್ರ ಯತೀಂದ್ರಗೆ ಗ್ರಾಮಸ್ಥರ ಘೇರಾವ್; ಇಲ್ಲಿದೆ ಸಚಿತ್ರ ವರದಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಅವರ ಪುತ್ರ ಡಾ.ಯತೀಂದ್ರಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಿನ್ನೆ (ಮಾ.7) ಸಂಜೆ ನಡೆದಿದೆ. ಗ್ರಾಮಸ್ಥರ ಆಕ್ರೋಶಕ್ಕೇನು ಕಾರಣ, ಇಲ್ಲಿದೆ ಅದರ ವಿವರ. (ಚಿತ್ರ ವರದಿ- ರಂಗಸ್ವಾಮಿ, ಮೈಸೂರು)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಅವರ ಪುತ್ರ ಯತೀಂದ್ರ ನಿನ್ನೆ ಸಂಜೆ (ಮಾರ್ಚ್ 7) ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾದರು. ಮುದ್ದುಬೀರನಹುಂಡಿಯಲ್ಲಿ ಈ ಘಟನೆ ನಡೆದಿದ್ದು ಅದರ ಚಿತ್ರನೋಟ ಇಲ್ಲಿದೆ.  
icon

(1 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರ ವರುಣಾದಲ್ಲಿ ಅವರ ಪುತ್ರ ಯತೀಂದ್ರ ನಿನ್ನೆ ಸಂಜೆ (ಮಾರ್ಚ್ 7) ಗ್ರಾಮಸ್ಥರ ಆಕ್ರೋಶಕ್ಕೆ ಗುರಿಯಾದರು. ಮುದ್ದುಬೀರನಹುಂಡಿಯಲ್ಲಿ ಈ ಘಟನೆ ನಡೆದಿದ್ದು ಅದರ ಚಿತ್ರನೋಟ ಇಲ್ಲಿದೆ.  

ವರುಣಾ ವಿಧಾನಸಭಾ ಕ್ಷೇತ್ರದ ಮುದ್ದುಬೀರನಹುಂಡಿಗೆ ಕುಂದುಕೊರತೆ ಸಭೆ ನಡೆಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ ಹೋಗಿದ್ದರು. ಆಗ ಅಲ್ಲಿ ಡಾ.ಯತೀಂದ್ರ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಡೆದಿದೆ.
icon

(2 / 7)

ವರುಣಾ ವಿಧಾನಸಭಾ ಕ್ಷೇತ್ರದ ಮುದ್ದುಬೀರನಹುಂಡಿಗೆ ಕುಂದುಕೊರತೆ ಸಭೆ ನಡೆಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಯತೀಂದ್ರ ಸಿದ್ದರಾಮಯ್ಯ ಹೋಗಿದ್ದರು. ಆಗ ಅಲ್ಲಿ ಡಾ.ಯತೀಂದ್ರ ಅವರಿಗೆ ಗ್ರಾಮಸ್ಥರು ಘೇರಾವ್ ಹಾಕಿದ ಘಟನೆ ನಡೆದಿದೆ.(Video Grab image)

ತಮ್ಮ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಈ ಸಂದರ್ಭದಲ್ಲಿ ಕುಪಿತಗೊಂಡ ಗ್ರಾಮಸ್ಥರು, ಒಂದು ಹಂತದಲ್ಲಿ ಡಾ ಯತೀಂದ್ರರನ್ನು ಎಳೆದಾಡಲು ಮುಂದಾದ ಪ್ರಸಂಗವೂ ನಡೆದಿದೆ. 
icon

(3 / 7)

ತಮ್ಮ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌. ಈ ಸಂದರ್ಭದಲ್ಲಿ ಕುಪಿತಗೊಂಡ ಗ್ರಾಮಸ್ಥರು, ಒಂದು ಹಂತದಲ್ಲಿ ಡಾ ಯತೀಂದ್ರರನ್ನು ಎಳೆದಾಡಲು ಮುಂದಾದ ಪ್ರಸಂಗವೂ ನಡೆದಿದೆ. (Video Grab image)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
icon

(4 / 7)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)

ಗ್ರಾಮಸ್ಥರ ಮಧ್ಯೆ ಸಿಲುಕಿದ ಯತೀಂದ್ರ ಪರದಾಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತು ಮಧ್ಯೆ ಪ್ರವೇಶಿಸಿದ ಪೊಲೀಸರ ಮಾತಿಗೂ ಬಗ್ಗದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
icon

(5 / 7)

ಗ್ರಾಮಸ್ಥರ ಮಧ್ಯೆ ಸಿಲುಕಿದ ಯತೀಂದ್ರ ಪರದಾಡಿದ್ದಾರೆ. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತು ಮಧ್ಯೆ ಪ್ರವೇಶಿಸಿದ ಪೊಲೀಸರ ಮಾತಿಗೂ ಬಗ್ಗದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.(Video Grab image)

ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಫುಲ್ ಗರಂ ಆಗಿದ್ದ ಗ್ರಾಮಸ್ಥರು, ಮಾಜಿ ಶಾಸಕ ಡಾ ಯತೀಂದ್ರ ವಿರುದ್ದ ಸಿಟ್ಟು ಹೊರಹಾಕಿದ್ದಾರೆ. ಅವರು ಸ್ಥಳದಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ಮತ್ತೆ ಮುತ್ತಿಗೆ ಹಾಕಿದರು. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಗ್ರಾಮಕ್ಕೆ ಭೇಟಿ‌ ನೀಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಜೊತೆ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.
icon

(6 / 7)

ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ಫುಲ್ ಗರಂ ಆಗಿದ್ದ ಗ್ರಾಮಸ್ಥರು, ಮಾಜಿ ಶಾಸಕ ಡಾ ಯತೀಂದ್ರ ವಿರುದ್ದ ಸಿಟ್ಟು ಹೊರಹಾಕಿದ್ದಾರೆ. ಅವರು ಸ್ಥಳದಿಂದ ಹೊರಗೆ ಹೋಗಲು ಪ್ರಯತ್ನಿಸಿದಾಗ ಮತ್ತೆ ಮುತ್ತಿಗೆ ಹಾಕಿದರು. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಗ್ರಾಮಕ್ಕೆ ಭೇಟಿ‌ ನೀಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಜೊತೆ ತೀವ್ರ ಮಾತಿನ ಚಕಮಕಿ ನಡೆಸಿದ್ದಾರೆ.(Video Grab image)

ನಮಗೆ ಯಾವುದೇ ಗ್ಯಾರಂಟಿ ಯೋಜನೆಗಳು ಬೇಡ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಿ ಸಾಕು ಎಂದು ಡಾ.ಯತೀಂದ್ರ ಅವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಷ್ಟಾದ ಬಳಿಕ ಡಾ.ಯತೀಂದ್ರ ಅಲ್ಲಿಂದ ಪೊಲೀಸ್ ರಕ್ಷಣೆಯಲ್ಲಿ ಅಲ್ಲಿಂದ ಹಿಂದಿರುಗಿದ್ದಾರೆ.
icon

(7 / 7)

ನಮಗೆ ಯಾವುದೇ ಗ್ಯಾರಂಟಿ ಯೋಜನೆಗಳು ಬೇಡ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಡಿ ಸಾಕು ಎಂದು ಡಾ.ಯತೀಂದ್ರ ಅವರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಷ್ಟಾದ ಬಳಿಕ ಡಾ.ಯತೀಂದ್ರ ಅಲ್ಲಿಂದ ಪೊಲೀಸ್ ರಕ್ಷಣೆಯಲ್ಲಿ ಅಲ್ಲಿಂದ ಹಿಂದಿರುಗಿದ್ದಾರೆ.(Video Grab image)


ಇತರ ಗ್ಯಾಲರಿಗಳು