Mysore Dasara: ದಸರಾ ಸಿದ್ಧತೆ, ಕಾಡಿನಿಂದ ಮೈಸೂರಿನತ್ತ ಗಜಪಡೆಗಳ ಗಾಂಭೀರ್ಯ ನಡಿಗೆ; ಗಜಪಯಣದ ಸುಂದರ ಚಿತ್ರಗಳು
- ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ಸಿದ್ಧತೆ ಆರಂಭವಾಗಿದ್ದು, ಮೊದಲ ಹಂತವಾಗಿ ಇಂದು ಗಜಪಯಣ ಕಾರ್ಯಕ್ರಮ ನೆರವೇರಿತು. ಅಂಬಾರಿ ಹೊರುವ ಅಭಿಮನ್ಯು ಸಾರಥ್ಯದಲ್ಲಿ ಆನೆಗಳು ಕಾಡಿನಿಂದ ಮೈಸೂರಿನೆಡೆಗೆ ತೆರಳಲು ಸಿದ್ಧವಾದವು. ಗಜಪಯಣದ ಸುಂದರ ದೃಶ್ಯಗಳ ಚಿತ್ರಗಳು ನಿಮಗಾಗಿ.
- ವಿಶ್ವವಿಖ್ಯಾತ ಮೈಸೂರು ದಸರಾ 2024ಕ್ಕೆ ಸಿದ್ಧತೆ ಆರಂಭವಾಗಿದ್ದು, ಮೊದಲ ಹಂತವಾಗಿ ಇಂದು ಗಜಪಯಣ ಕಾರ್ಯಕ್ರಮ ನೆರವೇರಿತು. ಅಂಬಾರಿ ಹೊರುವ ಅಭಿಮನ್ಯು ಸಾರಥ್ಯದಲ್ಲಿ ಆನೆಗಳು ಕಾಡಿನಿಂದ ಮೈಸೂರಿನೆಡೆಗೆ ತೆರಳಲು ಸಿದ್ಧವಾದವು. ಗಜಪಯಣದ ಸುಂದರ ದೃಶ್ಯಗಳ ಚಿತ್ರಗಳು ನಿಮಗಾಗಿ.
(1 / 7)
ಮೈಸೂರು ದಸರಾದ ಪ್ರಮುಖ ಆಕರ್ಷಣೆ ಎಂದರೆ ಚಿನ್ನದ ಅಂಬಾರಿ ಹಾಗೂ ಆನೆಗಳು. ದಸರಾ ಹಬ್ಬದ ಸೊಬಗು ಹೆಚ್ಚಿಸುವ ಆನೆಗಳನ್ನು ನಾಗರಹೊಳೆಯಿಂದ ಕರೆ ತರುವ ಗಜಪಯಣ ಇಂದು ನೆರವೇರಿತು. ಸಿಂಗಾರಗೊಂಡ ಆನೆಗಳನ್ನು ಅದ್ಧೂರಿಯಾಗಿ ಸ್ವಾಗತ ಮಾಡಿ, ಕರೆ ತರಲಾಯಿತು. ಕಾಡಿನಿಂದ ಮೈಸೂರಿನೆಡೆಗೆ ಆನೆಗಳು ಗಾಂಭೀರ್ಯ ನಡಿಗೆಯಿಂದ ಸಾಗಿಬಂದವು,
(2 / 7)
ಆನೆಗಳಿಗೆ ಸಾಂಪ್ರದಾಯಿಕ ವಿಧಾನದಲ್ಲಿ ಪೂಜೆ ಸಲ್ಲಿಸಿ, ಆದರದಿಂದ ಬರ ಮಾಡಿಕೊಳ್ಳಲಾಯಿತು. ಆರತಿ ಬೆಳಗುವ ಮೂಲಕ ಅಭಿಮನ್ಯು ಸಾರಥ್ಯದ ಗಜಪಡೆಯು ನಾಗರಹೊಳೆಯ ಹೆಬ್ಬಾಗಿಲು ದಾಟಿ ಹೊರ ಬಂದವು.
(3 / 7)
ಕಳೆದ ಬಾರಿ ಅಭಿಮನ್ಯು ಅಂಬಾರಿ ಹೊರುವ ಜವಾಬ್ದಾರಿ ಹೊತ್ತಿದ್ದ. ಈ ಬಾರಿಯೂ ಕೂಡ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ಅಭಿಮನ್ಯು ಸಾರಥ್ಯದಲ್ಲಿ ಇತರ ಆನೆಗಳು ದಸರಾ ಸಂಭ್ರಮ ಹೆಚ್ಚಿಸಲಿವೆ.
(4 / 7)
ಮೈಸೂರು- ಕೊಡಗು ಜಿಲ್ಲೆ ಗಡಿ ವೀರನಹೊಸಹಳ್ಳಿ ಬಳಿ ಆನೆಗಳನ್ನು ಅರಣ್ಯ ಇಲಾಖೆ ಹಾಗೂ ದಸರಾ ಸಮಿತಿಯಿಂದ ಬರ ಮಾಡಿಕೊಳ್ಳಲಾಯಿತು. ಈ ವೇಳೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೇರಿ ಹಲವರು ಉಪಸ್ಥಿತರಿದ್ದರು.
(5 / 7)
ದಸರಾ ಗಜಪಯಣಕ್ಕೆ ವಿವಿಧ ಜಾನಪದ ಕಲಾ ಪ್ರಕಾರಗಳು ಮೆರುಗು ನೀಡಿದ್ದವು. ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳ ಪ್ರದರ್ಶನವೂ ಏರ್ಪಟ್ಟಿತ್ತು.
(6 / 7)
ದಸರಾ ಗಜಪಯಣಕ್ಕೆ ವಿವಿಧ ಜಾನಪದ ಕಲಾ ಪ್ರಕಾರಗಳ ಮೆರುಗು ನೀಡಿದ್ದವು. ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಪಟ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾಪ್ರಕಾರಗಳ ಪ್ರದರ್ಶನವೂ ಏರ್ಪಟ್ಟಿತ್ತು. ಗಜಪಯಣ ನೋಡಲು ಕಿಕ್ಕಿರಿದು ಜನ ಸೇರಿದ್ದರು. ಜನರ ಹರ್ಷೋದ್ಗಾರದ ನಡುವೆ ಮೈಸೂರಿನತ್ತ ಹೆಜ್ಜೆ ಹಾಕಿತು ಅಭಿಮನ್ಯು ಅಂಡ್ ಟೀಮ್.
ಇತರ ಗ್ಯಾಲರಿಗಳು