Mysore News:ಮೈಸೂರಿನ ದತ್ತವೆಂಕಟೇಶ್ವರ ಕ್ಷೇತ್ರದಲ್ಲಿ ರಜತ ಮಹೋತ್ಸವ ಸಡಗರ, ತೆಪ್ಪೋತ್ಸವ ಕಣ್ತುಂಬಿಕೊಂಡ ಭಕ್ತರು photos
- ಸಾಂಸ್ಕೃತಿಕ ನಗರಿ ಮೈಸೂರು( Mysuru) ಧಾರ್ಮಿಕ ಕೇಂದ್ರವೂ ಹೌದು. ಗಣಪತಿ ಸಚ್ಚಿದಾನಂದ ಆಶ್ರಮ( Ganapati Sachidananda Ashram)ದಲ್ಲಿನ ದತ್ತ ವೆಂಕಟೇಶ್ವರದಲ್ಲಿ( Datta Venkateshwar) ರಜತ ಮಹೋತ್ಸವ ಸಡಗರ.ಇದರ ಭಾಗವಾಗಿ ನಡೆದ ನಾನಾ ಚಟುವಟಿಕೆಗಳ ಚಿತ್ರನೋಟ ಇಲ್ಲಿದೆ.,
- ಸಾಂಸ್ಕೃತಿಕ ನಗರಿ ಮೈಸೂರು( Mysuru) ಧಾರ್ಮಿಕ ಕೇಂದ್ರವೂ ಹೌದು. ಗಣಪತಿ ಸಚ್ಚಿದಾನಂದ ಆಶ್ರಮ( Ganapati Sachidananda Ashram)ದಲ್ಲಿನ ದತ್ತ ವೆಂಕಟೇಶ್ವರದಲ್ಲಿ( Datta Venkateshwar) ರಜತ ಮಹೋತ್ಸವ ಸಡಗರ.ಇದರ ಭಾಗವಾಗಿ ನಡೆದ ನಾನಾ ಚಟುವಟಿಕೆಗಳ ಚಿತ್ರನೋಟ ಇಲ್ಲಿದೆ.,
(1 / 8)
ಮೈಸೂರು ನಗರದ ನಂಜನಗೂಡು ರಸ್ತೆಯ ವಿಶಾಲ ಜಾಗದಲ್ಲಿ ವಿಶ್ವವಿದ್ಯಾನಿಲಯದಂತೆಯೇ ರೂಪುಗೊಂಡಿರುವ ಗಣಪತಿ ಸಚ್ಚಿದಾನಂದ ಆಶ್ರಮ. ಅಲ್ಲಿನ ದತ್ತವೆಂಕಟೇಶ್ವರ ಕ್ಷೇತ್ರವೀಗ 25 ವರ್ಷ ಪೂರೈಸಿದೆ. ಇದರ ಅಂಗವಾಗಿ ನಾನಾ ಚಟುವಟಿಕೆಗಳು ನಡೆದಿವೆ.
(2 / 8)
ದತ್ತಪೀಠದ ಸಂಸ್ಥಾಪಕರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿಯೇ ನಾನಾ ಚಟುವಟಿಕೆಗಳು ನಡೆದಿವೆ. ಪೂಜೆ ವೇಳೆ ಹಸುವಿಗೆ ಉಪಚಾರ ಮಾಡುವ ಸ್ವಾಮೀಜಿ ಅವರು.
(3 / 8)
ಗಣಪತಿ ಸಚ್ಚಿದಾನಂದ ಆಶ್ರಮದ ಕಿರಿಯ ಸ್ವಾಮೀಜಿ ದತ್ತ ವಿಜಯಾನಂದ ಸ್ವಾಮೀಜಿ ಅವರೂ 25 ವರ್ಷದ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
(4 / 8)
ಮೈಸೂರಿನ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ ಆಯೋಜನೆಗೊಂಡಿರುವ 25 ನೇ ವರ್ಷದ ಕಾರ್ಯಕ್ರಮದಲ್ಲಿ ದೇಶದ ನಾನಾ ವಿದ್ವಾಂಸರನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಪುರಸ್ಕರಿಸಿದರು.
(6 / 8)
ಮೈಸೂರು ಊಟಿ ರಸ್ತೆಯ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದಲ್ಲಿ 25 ನೇ ವಾರ್ಷಿಕೋತ್ಸವ ಸಮಾರಂಭದ ಸಂಭ್ರಮ ಗುರುವಾರವೂ ಇತ್ತು.ವಾರ್ಷಿಕೋತ್ಸವದ ಅಂಗವಾಗಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು ಅದ್ದೂರಿಯಿಂದ ಜರುಗಿವೆ.
(7 / 8)
ವೆಂಕಟೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ಗುರುವಾರ ಸಂಜೆ ನೆರವೇರಿದೆ. ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ಬಣ್ಣದ ದೀಪಗಳು ಹಾಗೂ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ತೆಪ್ಪದಲ್ಲಿ ಶ್ರೀ ವೆಂಕಟೇಶ್ವರನ ಉತ್ಸವಮೂರ್ತಿಯನ್ನ ಸ್ಫಾಪಿಸಿ ಉತ್ಸವ ನಡೆಸಲಾಯಿತು.
ಇತರ ಗ್ಯಾಲರಿಗಳು