ಜಾತ್ರೆಯಲ್ಲಿ ಕಂಡ ಜನಸ್ತೋಮ, ತಾಯಿ ಹಕ್ಕಿ ಮಮತೆ, ಛಾಯಾಗ್ರಾಹಕ ಅನುರಾಗ್ ಬಸವರಾಜ್ ಚಿತ್ರಗಳಿಗೆ ಅಂತರಾಷ್ಟ್ರೀಯ ಮನ್ನಣೆ photos
- Photography ಛಾಯಾಗ್ರಹಣ ಸುಲಭದ ಕಲೆಯಲ್ಲ.ಅದಕ್ಕೆ ಆ ಕ್ಷಣವನ್ನು ಸೆರೆ ಹಿಡಿಯುವ ಚಾಣಾಕ್ಷತೆ ಬೇಕು.ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಅನುರಾಗ್ ಬಸವರಾಜ್( Anurag Basavaraj) ಸೆರೆ ಹಿಡಿದ ಮೂರು ವಿಭಿನ್ನ ಛಾಯಾಚಿತ್ರಗಳಿಗೆ ಅಂತರಾಷ್ಟ್ರೀಯ ಬಹುಮಾನ ಲಭಿಸಿವೆ.
- Photography ಛಾಯಾಗ್ರಹಣ ಸುಲಭದ ಕಲೆಯಲ್ಲ.ಅದಕ್ಕೆ ಆ ಕ್ಷಣವನ್ನು ಸೆರೆ ಹಿಡಿಯುವ ಚಾಣಾಕ್ಷತೆ ಬೇಕು.ಮೈಸೂರಿನ ಹಿರಿಯ ಪತ್ರಿಕಾ ಛಾಯಾಗ್ರಾಹಕ ಅನುರಾಗ್ ಬಸವರಾಜ್( Anurag Basavaraj) ಸೆರೆ ಹಿಡಿದ ಮೂರು ವಿಭಿನ್ನ ಛಾಯಾಚಿತ್ರಗಳಿಗೆ ಅಂತರಾಷ್ಟ್ರೀಯ ಬಹುಮಾನ ಲಭಿಸಿವೆ.
(1 / 9)
ಮೈಸೂರಿನ ಹಿರಿಯ ಪತ್ರಿಕಾ ಹಾಗೂ ವನ್ಯಜೀವಿ ಛಾಯಾಗ್ರಾಹಕ ಅನುರಾಗ್ ಬಸವರಾಜ್ (ಎಂ.ಎಸ್. ಬಸವಣ್ಣ) ಅವರಿಗೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳು ಆಯೋಜಿಸಿದ್ದ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಗಳಲ್ಲಿ ಮೂರು ಚಿನ್ನದ ಪದಕ, 1 ಕಂಚಿನ ಪದಕ ಹಾಗೂ 3 ಹಾನರೆಬಲ್ ಮೆನ್ಶನ್ ಪ್ರಶಸ್ತಿಗಳು ಲಭಿಸಿದೆ.
(2 / 9)
ಫೋಟೋಗ್ರಫಿಕ್ ಸೊಸೈಟಿ ಆಫ್ ಅಮೆರಿಕ (ಪಿಎಸ್ಎ) ಸಂಸ್ಥೆಯು ಆಯೋಜಿಸಿದ್ದ ಫೋಟೋಮೇನಿಯಾ ಸರ್ಕ್ಯೂಟ್- 2024 ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರವಾಸ ಛಾಯಾಚಿತ್ರ ವಿಭಾಗದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಛಾಯಾಚಿತ್ರಕ್ಕೆ ಪಿಎಸ್ಎ ಚಿನ್ನದ ಪದಕ ಲಭಿಸಿದೆ.
(3 / 9)
ಕೊಲ್ಕತ್ತಾದಲ್ಲಿ ಎಪಿಜೆ ನ್ಯಾಷನಲ್ ಸಲೂನ್ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಫೋಟೋ ಜರ್ನಲಿಸಂ ವಿಭಾಗದಲ್ಲಿ ಕಿಚ್ಚು ಹಾಯಿಸುವ ಚಿತ್ರಕ್ಕೆ ಎಪಿಜೆ ಚಿನ್ನದ ಪದಕ ಲಭಿಸಿದೆ.
(4 / 9)
ಹಳೆ ಮೈಸೂರು ಭಾಗದ ವಿಭಿನ್ನ ರೈತ ಸಂಸ್ಕೃತಿಯಾದ ಕಿಚ್ಚು ಹಾಯಿಸುವ ಚಟುವಟಿಕೆ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈದನ್ನು ಬಸವರಾಜು ವಿಭಿನ್ನವಾಗಿ ಸೆರೆ ಹಿಡಿದು ಗಮನ ಸೆಳೆದಿದ್ದಾರೆ.
(5 / 9)
ಪಶ್ಚಿಮ ಬಂಗಾಳದಲ್ಲಿ ಪೀಕಾಕ್ ಇಂಟರ್ನ್ಯಾಷನಲ್ ಸಲೂನ್ ಸಂಸ್ಥೆ ನಡೆಸಿದ ಲೈಟ್ಸ್ ಆಫ್ ನೇಚರ್ 2024 ಸ್ಪರ್ಧೆಯಲ್ಲಿ ಮರಿಯೊಂದಕ್ಕೆ ಆಹಾರ ಉಣಿಸುತ್ತಿರುವ ರಿವರ್ಟನ್ ಪಕ್ಷಿಯ ಚಿತ್ರಕ್ಕೆ ಸರ್ಟಿಫಿಕ್ ಆಫ್ ಅವಾರ್ಡ್ ಲಭಿಸಿದೆ.
(6 / 9)
ಹುಲಿಯೊಂದು ಹಂದಿಯನ್ನು ಅಟ್ಟಿಸುತ್ತಿರುವ ಚಿತ್ರಕ್ಕೆ ಎಪಿಜೆ ಕಂಚಿನ ಪದಕ ಬಂದಿದೆ. ಇದು ಮಾತ್ರವಲ್ಲದೆ ವಿವಿಧ ಚಿತ್ರಗಳಿಗೆ ವಿವಿಧ ಸಂಸ್ಥೆಗಳಿಂದ 3 ಹಾನರೆಬಲ್ ಮೆನ್ಶನ್ ಲಭಿಸಿದೆ.
(8 / 9)
ಬಸವರಾಜು ಅವರು ಬರೀ ಸುದ್ದಿಚಿತ್ರಗಳು ಮಾತ್ರವಲ್ಲದೇ ವನ್ಯಜೀವಿಗಳ ವಿಭಿನ್ನ ಹಾವ ಭಾವದ ಚಿತ್ರ ಹಾಗೂ ಕ್ಷಣಗಳನ್ನು ಸೆರೆ ಹಿಡಿದಿದ್ದಾರೆ. ಈ ಹಿಂದೆಯೂ ಅವರ ಚಿತ್ರಗಳಿಗೆ ಬಹುಮಾನಗಳು ಬಂದಿವೆ.
ಇತರ ಗ್ಯಾಲರಿಗಳು