ಕನ್ನಡ ಸುದ್ದಿ  /  Photo Gallery  /  Mysuru News Panchamaha Rathotsava Held In Nanjangud Sri Nanjundeshwara Temple On March 22nd Rsm

Mysuru News: ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಅದ್ಧೂರಿಯಾಗಿ ನೆರವೇರಿದ ಪಂಚ ಮಹಾರಥೋತ್ಸವ

Mysuru News:  ರಾಜ್ಯದ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ (ಮಾರ್ಚ್ 22) ಅದ್ಧೂರಿಯಾಗಿ  ಪಂಚ ಮಹಾರಥೋತ್ಸವ ನೆರವೇರಿತು.  ಲಕ್ಷಾಂತರ ಮಂದಿ ಭಕ್ತರು ದೂರದೂರುಗಳಿಂದ ರಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. 

ಶುಕ್ರವಾರ ಬೆಳಗ್ಗೆ 6:30 ರಿಂದ 6:50 ರೊಳಗಿನ ಶುಭ ಮೀನ ಲಗ್ನದಲ್ಲಿ ಈ ಬಾರಿಯ ಪಂಚಮಹಾರಥೋತ್ಸವ ಅದ್ದೂರಿಯಾಗಿ ನೆರವೇರಿತು. ಭಕ್ತರು ದೇವಾಲಯದ ಸುತ್ತ ನೆರೆದು ರಥೋತ್ಸವಕ್ಕೆ ಸಾಕ್ಷಿಯಾದರು. 
icon

(1 / 11)

ದಕ್ಷಿಣಕಾಶಿ ನಂಜನಗೂಡು ಪಂಚ ಮಹಾರಥೋತ್ಸವ ನಡೆಯುವ ಏಕೈಕ ಪುರಾಣ ಪ್ರಸಿದ್ದ ಪುಣ್ಯಕ್ಷೇತ್ರ ಎಂದೇ ಹೆಸರು ಪಡೆದಿದೆ. ಪಂಚಮಹಾರಥೋತ್ಸವದ ವೇಳೆ ಎಲ್ಲಾ ವಿಘ್ನಗಳ ನಿವಾರಕ ಶ್ರೀ ಗಪಣತಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದ ರಥ ಮುಂಚೂಣಿಯಲ್ಲಿ ಸಾಗಿತು. 
icon

(2 / 11)

ಭಕ್ತರು ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದ ಮುಂದೆ ನೆರೆದಿದ್ದರು. ದೇವಸ್ಥಾನದ ಸುತ್ತಲಿನ ರಸ್ತೆಗಳು ಭಕ್ತರ ದಂಡಿನಿಂದ ತುಂಬಿ ಹೋಗಿತ್ತು.  ಭಕ್ತರ ಸಮೂಹ ಶ್ರೀಕಂಠೇಶ್ವರನ ದರ್ಶನಕ್ಕಾಗಿ ಕಾಯುತ್ತಿದ್ದರು. 
icon

(3 / 11)

ರಥೋತ್ಸವದ ಸಮಯದಲ್ಲಿ ಜನರ ದಂಡನ್ನು ನಿಯಂತ್ರಿಸಲು ನಂಜನಗೂಡಿನ ಇತರ ಬೀದಿಗಳು, ದೇವಸ್ಥಾನದ ಬಳಿ ಪೊಲೀಸರನ್ನು ನಿಯೋಜಿಸಲಾಗಿತ್ತು. 
icon

(4 / 11)

ಶ್ರೀ ಗಣಪತಿಯ ಉತ್ಸವ ಮೂರ್ತಿಯನ್ನು ಹಿಂಬಾಲಿಸಿಕೊಂಡು ಶ್ರೀ ಶ್ರೀಕಂಠೇಶ್ವರಸ್ವಾಮಿ, ಪಾರ್ವತಿ ಅಮ್ಮ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಶ್ರೀ ಚಂಡಿಕೇಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದ ರಥಗಳು ಒಂದಾದ ಮೇಲೆ ಒಂದರಂತೆ ಸಾಲು ಸಾಲಾಗಿ ಸಾಗಿದ ದೃಶ್ಯ ನಯನ ಮನೋಹರವೆನಿಸಿತು. 
icon

(5 / 11)

ನಂಜನಗೂಡಿನ ದೇವಸ್ಥಾನದ ಬೀದಿ ಮಾತ್ರವಲ್ಲ, ಪ್ರಮುಖ ರಸ್ತೆಗಳಲ್ಲಿ ಕೂಡಾ ರಥ ಸಾಗಿ ಬಂತು ದೇವಸ್ಥಾನ ಸೇರಿತು. ಈ ಸಮಯದಲ್ಲಿ ಲಕ್ಷಾಂತರ ಜನರು ರಥಗಳ ಮೇಲೆ ಹಣ್ಣು ಜವನವನ್ನು  ಎಸೆದು ಭಕ್ತಿಭಾವ ಮೆರೆದರು. 
icon

(6 / 11)

ಪಂಚ ರಥಗಳಿಗೆ ವಿವಿಧ ಬಣ್ಣದ ಬಾವುಟಗಳನ್ನು ಕಟ್ಟಿ, ವಿವಿಧ ಬಗೆಯ ಹೂವುಗಳು, ತಳಿರು ತೋರಣಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು ರಥದ ಮುಂದೆ, ಪುರೋಹಿತರ ಸಮೂಹ ವೇದ ಮಂತ್ರಗಳನ್ನು ಹೇಳುತ್ತಾ ಸಾಗುತ್ತಿದ್ದರು.
icon

(7 / 11)

ಕಪಿಲಾ ನದಿ ತೀರದಲ್ಲಿ ಜಮಾಯಿಸಿದ್ದ ಸಾವಿರಾರು ಭಕ್ತರು ಕಪಿಲಾ ನದಿಯಲ್ಲಿ ಮಿಂದೆದ್ದು ಪುಣ್ಯ ಸ್ನಾನ ಮಾಡಿದ ಬಳಿಕ ಶ್ರೀಕಂಠೇಶ್ವರ ಸ್ವಾಮಿಯ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದು ಪುನೀತರಾದರು. ಕೆಲವರು ತಲೆಕೂದಲು ಮುಡಿ ಕೊಟ್ಟು ಹರಕೆ ತೀರಿಸಿದರು. 
icon

(8 / 11)

ಶುಕ್ರವಾರ ಜರುಗಿದ ಪಂಚ ಮಹಾರಥೋತ್ಸವ ವೀಕ್ಷಣೆಗಾಗಿ ಬೆಂಗಳೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದರು. 
icon

(9 / 11)

ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಬೃಹತ್ ರಥ ಸುಮಾರು 108 ಅಡಿ ಎತ್ತರವಿದ್ದು 110 ಟನ್ ತೂಕವಿದೆ. ಈ ಬೃಹತ್ ರಥವನ್ನು ಹರ್ಷೋದ್ಗಾರಗಳ ನಡುವೆ ಎಳೆಯುವ ಮೂಲಕ ಭಕ್ತರು ಸಂಭ್ರಮಿಸಿದರು.
icon

(10 / 11)

ಧರ್ಮ, ಆಧ್ಯಾತ್ಮ, ಜ್ಯೋತಿಷ್ಯ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿಗೆ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ವೆಬ್‌ಸೈಟ್‌ಗೆ ಭೇಟಿ ಕೊಡಿ. 
icon

(11 / 11)

ಇತರ ಗ್ಯಾಲರಿಗಳು