Mysore Palaces: ಮೈಸೂರಿನಲ್ಲಿ ಈಗಲೂ ಪಾರಂಪರಿಕ ಕಟ್ಟಡಗಳ ಬಳಕೆ, ಹೀಗಿವೆ ರಾಜರ ಕಾಲದ ಅರಮನೆಗಳು photos
- Karnataka Heriteage ಮೈಸೂರು ಪಾರಂಪರಿಕ ಕಟ್ಟಡಗಳ ತವರು. ಕೆಲವು ಅರಮನೆಗಳ ರೂಪದಲ್ಲಿದ್ದರೆ, ಇನ್ನಷ್ಟು ಸಾರ್ವಜನಿಕ ಕಟ್ಟಡಗಳು. ಮೈಸೂರಿನಲ್ಲಿಯೇ ನೂರಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳು ಘೋಷಿತ ಪಟ್ಟಿಯಲ್ಲಿವೆ. ಇದರಲ್ಲಿ ಬಹುತೇಕ ಬಳಕೆಯಲ್ಲಿವೆ. ಪ್ರಮುಖ ಪಾರಂಪರಿಕ ಕಟ್ಟಡಗಳ ನೋಟ ಇಲ್ಲಿದೆ.
- Karnataka Heriteage ಮೈಸೂರು ಪಾರಂಪರಿಕ ಕಟ್ಟಡಗಳ ತವರು. ಕೆಲವು ಅರಮನೆಗಳ ರೂಪದಲ್ಲಿದ್ದರೆ, ಇನ್ನಷ್ಟು ಸಾರ್ವಜನಿಕ ಕಟ್ಟಡಗಳು. ಮೈಸೂರಿನಲ್ಲಿಯೇ ನೂರಕ್ಕೂ ಅಧಿಕ ಪಾರಂಪರಿಕ ಕಟ್ಟಡಗಳು ಘೋಷಿತ ಪಟ್ಟಿಯಲ್ಲಿವೆ. ಇದರಲ್ಲಿ ಬಹುತೇಕ ಬಳಕೆಯಲ್ಲಿವೆ. ಪ್ರಮುಖ ಪಾರಂಪರಿಕ ಕಟ್ಟಡಗಳ ನೋಟ ಇಲ್ಲಿದೆ.
(1 / 10)
ಮೈಸೂರು ಅರಮನೆ.ಅಂಬಾ ವಿಲಾಸ ಅರಮನೆ ಎಂತಲೂ ಕರೆಯಲಾಗುತ್ತದೆ. ಹಳೆ ಅರಮನೆಗೆ ಬೆಂಕಿ ಬಿದ್ದ ನಂತರ ಇದನ್ನು ನಿರ್ಮಿಸಲಾಯಿತು. ಈಗ ಪ್ರಮುಖ ಪ್ರವಾಸಿ ತಾಣವಿದು.
(2 / 10)
ಮೈಸೂರಿಗೆ ಬರುವ ಅತಿಥಿಗಳಿಗೆಂದೇ ಮಹಾರಾಜರು ನಿರ್ಮಿಸಿದ್ದ ಕಟ್ಟಡ ಲಲಿತ್ ಮಹಲ್. ಈಗ ಇದು ಹೊಟೇಲ್ ಆಗಿ ಮಾರ್ಪಟ್ಟಿದೆ. ಜಂಗಲ್ ರೆಸಾರ್ಟ್ ಅವರ ನಿರ್ವಹಣೆಯಲ್ಲಿರುವ ಲಲಿತಮಹಲ್ ದೇಶದ ಪ್ರಮುಖ ಹೊಟೇಲ್‌ಗಳಲ್ಲಿ ಒಂದು.
(3 / 10)
ಮೈಸೂರಿನ ಚಲುವಾಂಬ ಅರಮನೆ,. ಇದೂ ಕೂಡ ಮಹಾರಾಜರ ಅರಮನೆಯೇ. ಈಗ ಇದು ಕೇಂದ್ರ ಆಹಾರ ಸಂಶೋಧನಾಲಯ( CFTRI) ವಾಗಿ ಬದಲಾಗಿದೆ.
(4 / 10)
ಮೈಸೂರಿನ ಮೃಗಾಲಯಕ್ಕೆ ಹೊಂದಿಕೊಂಡಂತೆ ಇರುವ ಪ್ರಮುಖ ಅರಮನೆಯಿದು. ಇದನ್ನು ಮಹಾರಾಜರ ಬೇಸಿಗೆ ಅರಮನೆ ಎಂತಲೂ ಕರೆಯಲಾಗುತ್ತದೆ.
(5 / 10)
ಮೈಸೂರಿನಲ್ಲಿ ಮಹಾರಾಜರು ಬಳಸುತ್ತಿದ್ದ ಅರಮನೆಗಳಲ್ಲಿ ಒಂದು ಜಗನ್ಮೋಹನ ಅರಮನೆ. ಇದು ಈಗ ಜಗನ್ಮೋಹನ ಕಲಾ ಗ್ಯಾಲರಿಯಾಗಿ ಹಾಗೂ ಕಾರ್ಯಕ್ರಮ ನಡೆಸುವ ವೇದಿಕೆಯಾಗಿ ಬಳಕೆಯಾಗುತ್ತಿದೆ.
(6 / 10)
ಮೈಸೂರಿನ ಮಾನಸಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮಿ ಅರಮನೆಯಿದು. ಇದು ಮಹಾರಾಜರ ಅರಮನೆಯೇ. ಈಗ ಜನಪದ ವಸ್ತು ಸಂಗ್ರಹಾಲಯವಾಗಿ ಬಳಕೆಯಾಗಿತ್ತಿದೆ.
(8 / 10)
ಮೈಸೂರಿನ ಶಿಕ್ಷಣ ಕೇಂದ್ರಗಳಲ್ಲಿ ಮಹಾರಾಜ ಕಾಲೇಜು ಪ್ರಮುಖವಾದದ್ದು. ಇಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಈಗಲೂ ಕರ್ನಾಟಕದ ಪ್ರಮುಖ ಶಿಕ್ಷಣ ಕೇಂದ್ರವಿದು.
(9 / 10)
ಮೈಸೂರು ಭಾಗದವರಿಗೆ ಆರೋಗ್ಯ ನೀಡಲೆಂದು ಮಹಾರಾಜರು ನಿರ್ಮಿಸಿದ್ದ ಕಟ್ಟಡವಿದು. ಇದು ಕೃಷ್ಣರಾಜೇಂದ್ರ ಆಸ್ಪತ್ರೆ. ಮೈಸೂರು ಮಾತ್ರವಲ್ಲದೇ ಮಂಡ್ಯ, ಕೊಡಗು, ಹಾಸನ,. ಚಾಮರಾಜನಗರ ದವರಿಗೂ ಆರೋಗ್ಯ ನೀಡುವ ಪ್ರಮುಖ ಕೇಂದ್ರ.
ಇತರ ಗ್ಯಾಲರಿಗಳು