Mysuru Rains: ಮೈಸೂರಲ್ಲಿ ಮುಂಗಾರು ಮಳೆಯ ನೋಟದ ನಡುವೆ ಮೋಡಗಳ ಓಟ photos
- Mysuru weather ಮೈಸೂರಿನಲ್ಲಿ ಮಳೆಯ ನೋಟ ಚೆನ್ನಾಗಿದೆ. ಈಗಾಗಲೇ ಕೆಲ ದಿನಗಳಿಂದ ಮಳೆ ಸುರಿಯುತ್ತಿದ್ದು, ಮುಂಗಾರು ಪ್ರವೇಶದ ಮುನ್ಸೂಚನೆ ಸಿಕ್ಕಿದೆ. ಇದರ ನಡುವೆ ಮೋಡಗಳ ಓಟದ ಚಿತ್ರಣವೂ ಮಧ್ಯಾಹ್ನದ ನಂತರ ಗಮನ ಸೆಳೆಯುತ್ತದೆ.
- ಚಿತ್ರಗಳು: ರವಿಕೀರ್ತಿಗೌಡ, ಅವಿನಾಶ್ ದಮ್ನಳ್ಳಿ

(1 / 6)
ಮೈಸೂರಿನ ಚಾಮುಂಡಿಬೆಟ್ಟದ ಸುತ್ತಲೂ ಮಧ್ಯಾಹ್ನವಾಗುತ್ತಲೇ ಮೋಡಗಳು ಕವಿಯ ತೊಡಗುತ್ತವೆ. ಕೆಲವೇ ಹೊತ್ತಿನಲ್ಲಿ ಬಿಳಿ ನೊರೆಯ ಮೋಡಗಳೆಲ್ಲಾ ಕಪ್ಪಾಗಿಯೇ ಬಿಡುತ್ತವೆ.
(2 / 6)
ಕೆಲವೇ ಹೊತ್ತಿನಲ್ಲಿ ಚಾಮುಂಡಿಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಮೋಡ ಮುಸುಕಿದ ವಾತಾವರಣ. ಭಾರೀ ಮಳೆ ಸುರಿಯುವ ಮುನ್ಸೂಚನೆ.
(3 / 6)
ಮಳೆ ಬರುವ ಮುನ್ನ ಮೋಡಗಳ ಓಡಾಟವನ್ನು ನೋಡುವುದೇ ಚಂದ. ಲಗುಬಗೆಯಲ್ಲಿ ಓಡುವ ಮೋಡಗಳು ಕೆಲ ಹೊತ್ತು ನಿಂತೇ ಬಿಡುತ್ತವೆ.
(4 / 6)
ಮುಂದೆ ಮಳೆಯ ಕಾಲ. ಮೈಸೂರಿನ ರಾಮಕೃಷ್ಣನಗರದ ರಾಮಕೃಷ್ಣ ಪರಮಹಂಸ ವೃತ್ತದ ಸುತ್ತಲೂ ಮೋಡಗಳ ನರ್ತನ ಹಾಗೂ ಮಳೆಯೋ ಮಳೆ.
(5 / 6)
ಮೈಸೂರಿನ ಹಲವು ಬಡಾವಣೆಗಳಲ್ಲಿ ಮೋಡಗಳ ಮಿಲನದ ನಂತರ ಎಡಬಿಡದೇ ಸುರಿವ ಮಳೆಯ ಸಮಯ, ಸಂಜೆಯ ರಾಗಕೆ ಬಾನು ಕೆಂಪಾಗಿದೆ ಅಲ್ಲಲ್ಲ. ಕಪ್ಪಾಗಿದೆ ಎನ್ನುವ ಹಾಡಿನ ಅನುರಣನ.
ಇತರ ಗ್ಯಾಲರಿಗಳು