Naga Panchami 2024: ನಾಗಪಂಚಮಿಯಿಂದ ಈ 4 ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ, ರೂಪುಗೊಳ್ಳುತ್ತಿದೆ 3 ಯೋಗ
- NagaPanchami 2024: ಈ ವರ್ಷ ನಾಗಪಂಚಮಿಯನ್ನು ಆಗಸ್ಟ್ 9ಕ್ಕೆ ಆಚರಿಸಲಾಗುತ್ತಿದೆ. ಈ ದಿನ ಮೂರು ಯೋಗಗಳು ರೂಪುಗೊಳ್ಳಲಿವೆ. ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಆ ರಾಶಿಗಳು ಯಾವವು ಮತ್ತು ಯಾವ ಯೋಗಗಳು ರೂಪುಗೊಳ್ಳುತ್ತದೆ ಎಂದು ತಿಳಿದುಕೊಳ್ಳೋಣ.
- NagaPanchami 2024: ಈ ವರ್ಷ ನಾಗಪಂಚಮಿಯನ್ನು ಆಗಸ್ಟ್ 9ಕ್ಕೆ ಆಚರಿಸಲಾಗುತ್ತಿದೆ. ಈ ದಿನ ಮೂರು ಯೋಗಗಳು ರೂಪುಗೊಳ್ಳಲಿವೆ. ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಅದೃಷ್ಟ ಖುಲಾಯಿಸಲಿದೆ. ಆ ರಾಶಿಗಳು ಯಾವವು ಮತ್ತು ಯಾವ ಯೋಗಗಳು ರೂಪುಗೊಳ್ಳುತ್ತದೆ ಎಂದು ತಿಳಿದುಕೊಳ್ಳೋಣ.
(1 / 7)
ಶ್ರಾವಣ ಮಾಸದಲ್ಲಿ ಬರುವ ನಾಗಪಂಚಮಿಯನ್ನು ಬಹಳ ಶ್ರದ್ಧಾ–ಭಕ್ತಿಯಿಂದ ಆಚರಿಸಲಾಗುತ್ತದೆ. ಮಹಾಭಾರತ, ನಾರದ ಪುರಾಣ ಮತ್ತು ಸ್ಕಂದ ಪುರಾಣಗಳಂತಹ ಗ್ರಂಥಗಳು ನಾಗಗಳ ದೇವರಾದ ನಾಗರಾಜನ ಆರಾಧನೆಯನ್ನು ಉಲ್ಲೇಖಿಸುತ್ತವೆ.
(2 / 7)
ನಾಗ ಪಂಚಮಿಯಂದು ನಾಗದೇವನನ್ನು ಪೂಜಿಸುವುದರಿಂದ ಭಕ್ತರ ಜೀವನದಲ್ಲಿರುವ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಮನೆಗೆ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಈ ವರ್ಷ ನಾಗ ಪಂಚಮಿಯನ್ನು ಆಗಸ್ಟ್ 9 ರ ಶುಕ್ರವಾರದಂದು ಆಚರಿಸಲಾಗುತ್ತದೆ. ಆರು ವರ್ಷಗಳ ನಂತರ, ನಾಗ ಪಂಚಮಿಯಂದು ಕೆಲವು ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. ನಾಗ ಪಂಚಮಿಯಂದು ಸಿದ್ಧಿ ಯೋಗ, ಅಮೃತ ಸಿದ್ಧಿ ಯೋಗ ಮತ್ತು ರವಿ ಯೋಗ ಒಟ್ಟಿಗೆ ಬರುತ್ತದೆ. ಈ ಯೋಗಗಳಿಂದ ಯಾವ ರಾಶಿಯವರಿಗೆ ಲಾಭವಾಗಲಿದೆ ಎಂದು ತಿಳಿದುಕೊಳ್ಳೋಣ.
(3 / 7)
ಮೇಷ ರಾಶಿ: ನಾಗಪಂಚಮಿಯಂದು ಮೇಷ ರಾಶಿಯ ಜಾತಕ ಬಲಶಾಲಿಯಾಗಲಿದೆ. ಅದೃಷ್ಟವು ಎಲ್ಲಾ ರೀತಿಯಲ್ಲಿಯೂ ಮೇಷ ರಾಶಿಯನ್ನು ಬೆಂಬಲಿಸುತ್ತದೆ. ನೀವು ವಾಣಿಜ್ಯೋದ್ಯಮಿಯಾಗಿದ್ದರೆ, ನೀವು ಪ್ರಾರಂಭಿಸಿದ ಯೋಜನೆಯಲ್ಲಿ ಮಾಡಿದ ಪ್ರಯತ್ನಗಳು ಉತ್ತಮ ಫಲಿತಾಂಶಗಳನ್ನು ಪಡೆಯುತ್ತವೆ. ಮೇಷ ರಾಶಿಯವರು ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿದ್ದರೆ, ಈ ಅವಧಿಯಲ್ಲಿ ನೀವು ಅನಾರೋಗ್ಯದಿಂದ ಚೇತರಿಸಿಕೊಳ್ಳುತ್ತೀರಿ.
(4 / 7)
ಕಟಕ ರಾಶಿ: ನಾಗ ಪಂಚಮಿಯಂದು ರೂಪುಗೊಂಡ ಶುಭಯೋಗವು ಕಟಕ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ, ಕರ್ಕ ರಾಶಿಯವರಿಗೆ ಎಲ್ಲಾ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಿಮ್ಮ ವೃತ್ತಿಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುವ ಅನುಭವಿ ವ್ಯಕ್ತಿಯನ್ನು ನೀವು ಭೇಟಿ ಮಾಡಬಹುದು. ವಿವಾಹ ಸಂಬಂಧಗಳು ಮಧುರವಾಗಿರಲಿದೆ.
(5 / 7)
ಸಿಂಹ ರಾಶಿ: ನಾಗ ಪಂಚಮಿಯಂದು ರೂಪುಗೊಳ್ಳುವ ಉತ್ತಮ ಯೋಗದ ಪ್ರಭಾವದಿಂದ ಉದ್ಯೋಗಸ್ಥರಿಗೆ ಹೊಸ ಉದ್ಯೋಗಾವಕಾಶಗಳು ಲಭ್ಯವಾಗಲಿವೆ. ನಿಮ್ಮನ್ನು ಕಾಡುತ್ತಿದ ದೀರ್ಘಕಾಲದ ಒತ್ತಡವು ನಿಮ್ಮಿಂದ ದೂರ ಹೋಗುವಂತೆ ಮಾಡುತ್ತದೆ. ನ್ಯಾಯಾಲಯದಲ್ಲಿ ನಿಮ್ಮ ಯಾವುದೇ ಕಾನೂನು ಸಮಸ್ಯೆಗಳಿದ್ದರೆ, ಗೆಲವು ನಿಮ್ಮದಾಗಲಿದೆ.
(6 / 7)
ಕುಂಭ ರಾಶಿ: ನಾಗ ಪಂಚಮಿಯಂದು ಉಂಟಾಗುವ 3 ಯೋಗವು ವ್ಯಾಪಾರದಲ್ಲಿ ನಿಮಗೆ ಲಾಭವನ್ನು ತರುತ್ತದೆ. ಕುಂಭ ರಾಶಿಯವರಿಗೆ ವಿದೇಶದಲ್ಲಿ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ನೀವು ಯಾವುದಾದರೂ ಸಾಲ ಪಡೆದಿದ್ದರೆ, ಶೀಘ್ರದಲ್ಲೇ ಅದರಿಂದ ಮುಕ್ತರಾಗುತ್ತೀರಿ.
ಇತರ ಗ್ಯಾಲರಿಗಳು