ನಾಗರಹೊಳೆ ಚಿರತೆಗಿಲ್ಲ ಇನ್ನು ಬಿಸಿಲಿನ ಚಿಂತೆ; ವನ್ಯಜೀವಿ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಕ್ಯಾಮರಾ ಕಣ್ಣಲ್ಲಿ ಚಿರತೆ ಸೆರೆ
ವನ್ಯಜೀವಿಗಳನ್ನು ಕಾಡಲ್ಲಿ ಕಾಣುವುದೇ ಕಷ್ಟ. ಅದರಲ್ಲೂ ಚಿರತೆಯಂತ ನಾಚಿಕೆ ಸ್ವಭಾವದ ಪ್ರಾಣಿ ಸಿಗುವುದು ಅಪರೂಪವೇ. ಒಂದೇ ಚಿರತೆಯ ಭಿನ್ನ ಭಾವ ಭಂಗಿ ಸೆರೆ ಸಿಗುವುದು ಅದೃಷ್ಟವೇ. ಮೈಸೂರಿನ ಛಾಯಾಗ್ರಾಹಕ ಅನುರಾಗ್ ಬಸವರಾಜ್ ಅಂತಹ ಕ್ಷಣ ಸೆರೆ ಹಿಡಿದಿದ್ದಾರೆ.
(1 / 7)
ಈ ಬಾರಿ ಅರಣ್ಯದಲ್ಲಿ ಬಿಸಿಲೂ ಇತ್ತು. ಆಗಾಗ ಮಳೆಯೂ ಬಂದಿತು. ಇದರಿಂದ ಕಾಡಿನ ಬೆಂಕಿ ಬೇಗೆಯಂತೂ ಇರಲಿಲ್ಲ. ಇನ್ನೇನೂ ಮುಂಗಾರು ಪಕ್ಕದ ಕೇರಳದಿಂದ ಪ್ರವೇಸಿಸಲಿದೆ ಎನ್ನುತ್ತಿದೆ ನಾಗರಹೊಳೆ ಈ ಚಿರತೆ.
(2 / 7)
ದಿನದ ಊಟ ಈಗಾಗಲೇ ಆಗಿದೆ. ಕೆಲ ಹೊತ್ತು ಇನ್ನು ನಿದ್ರೆಯ ಸಮಯ. ಇದಕ್ಕೆ ಮರವೇರಿದ್ದೇನೆ. ನೋಡೋಣ ನಿದ್ರೆ ಬರುತ್ತಾ ಅಂತ.
(4 / 7)
ಯಾರೋ ಬಂದ ಹಾಗಾಯಿತು. ಇಲ್ಲಿ ಇದ್ದರೆ ಚೆನ್ನಾಗಿಲ್ಲ. ನೋಡೋಣ ಇನ್ನೊಂದು ಮರ ಹುಡುಕಿಕೊಂಡು ಹೋಗೋಣ ಎನ್ನುತ್ತಾ ಇಳಿಯಲು ಹೊರಟಿತು ಕುತೂಹಲಿ ಚಿರತೆ.
(5 / 7)
ಮರ ಹತ್ತುವುದು ಇಳಿಯವುದು ನನಗೆ ಬಲು ಸಲೀಸು. ಲಗುಬಗೆಯಲ್ಲಿ ಮರ ಹತ್ತಿ ಮೂಲೆಯಲ್ಲೋ ಕುಳಿತು ಬಿಡುವ ನಾನು ಕ್ಷಣ ಮಾತ್ರದಲ್ಲಿ ಅಲ್ಲಿಂದ ಇಳಿದು ಹೊರಟು ಬಿಡುತ್ತೇನೆ,
(6 / 7)
ಹೊರಟೆ , ಓಡಿ ಹೊರಟೆ, ನೋಡೋಣ ಮುಂದಿನ ಇನ್ಯಾವುದರೋ ಮರದಲ್ಲಿ ನಿರುಮ್ಮಳವಾಗಿ ನಿದ್ರೆ ಮಾಡಿಯೇ ತೀರುತ್ತೇನೆ. ಇನ್ನು ಮಳೆಗಾಲ ಶುರುವಾದರೆ ನಿದ್ರೆಗೂ ಈಗಲೇ ಸುರಕ್ಷಿತ ಜಾಗ ಹುಡುಕಿಕೊಳ್ಳಬೇಕಲ್ಲವೇ…
ಇತರ ಗ್ಯಾಲರಿಗಳು