ಈ ವಾರ ಮರು ಬಿಡುಗಡೆಯಾಗಲಿದೆ ದರ್ಶನ್ ಅಭಿನಯದ ‘ನಮ್ಮ ಪ್ರೀತಿಯ ರಾಮು’ - ಕನ್ನಡದಲ್ಲೇ 4 ಹೊಸ ಸಿನಿಮಾ ತೆರೆಗೆ
- ಇದೇ ಶುಕ್ರವಾರ (ಫೆ 14) ಕನ್ನಡದ 4 ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಜತೆಗೆ ನಟ ದರ್ಶನ್ ಅಭಿನಯದ ಹಿಟ್ ಸಿನಿಮಾ ‘ನಮ್ಮ ಪ್ರೀತಿಯ ರಾಮು’ ಕೂಡ ಬಿಡುಗಡೆಯಾಗಲಿದೆ.
- ಇದೇ ಶುಕ್ರವಾರ (ಫೆ 14) ಕನ್ನಡದ 4 ಹೊಸ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಜತೆಗೆ ನಟ ದರ್ಶನ್ ಅಭಿನಯದ ಹಿಟ್ ಸಿನಿಮಾ ‘ನಮ್ಮ ಪ್ರೀತಿಯ ರಾಮು’ ಕೂಡ ಬಿಡುಗಡೆಯಾಗಲಿದೆ.
(1 / 8)
ಈ ವಾರ ಕನ್ನಡದಲ್ಲೇ ಐದು ಸಿನಿಮಾ ತೆರೆಕಾಣಲಿದೆ. ನಟ ದರ್ಶನ್ ಅಭಿನಯದ “ನನ್ನ ಪ್ರೀತಿಯ ರಾಮು” ಸಿನಿಮಾ ಮರು ಬಿಡುಗಡೆಯಾಗುತ್ತಿದೆ.
(2 / 8)
2003 ನವೆಂಬರ್ 14ರಂದು ಬಿಡುಗಡೆಯಾಗಿದ್ದ ‘ನಮ್ಮ ಪ್ರೀತಿಯ ರಾಮು’ ಮತ್ತೆ ಬಿಡುಗಡೆಯಾಗುತ್ತಿದೆ. ಇದೇ ಶುಕ್ರವಾರ ನೀವು ಮತ್ತೆ ತೆರೆಮೇಲೆ ನಿಮ್ಮ ರಾಮುವನ್ನು ನೋಡಬಹುದು. ದರ್ಶನ್ ಅಭಿಮಾನಿಗಳಿಗೂ ಇದು ಖುಷಿಯ ಸಂಗತಿಯಾಗಿದೆ.
(3 / 8)
ಭುವನಂ ಗಗನಂ ಸಿನಿಮಾದ ಕೂಡ ಇದೇ ಶುಕ್ರವಾರ ಫೆಬ್ರವರಿ 14ರಂದು ಬಿಡುಗಡೆಯಾಗಲಿದೆ. ಎರಡು ಮುಗ್ದ ಮನಸ್ಸುಗಳ ಪಯಣದ ಕಥೆ ಇದಾಗಿದ್ದು, ಗಿರೀಶ್ ಮೂಲಿಮನಿ ಸಿನಿಮಾಗೆ ಕಥೆ ಬರೆದಿದ್ದಾರೆ.
(4 / 8)
ಲೂಸ್ ಮಾದ ಯೋಗಿ ಅಭಿನಯದ ಸಿದ್ಲಿಂಗು 2 ಸಿನಿಮಾ (ಫೆ 14) ಬಿಡುಗಡೆಯಾಗಲಿದೆ. ವಿಜಯಪ್ರಸಾದ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
(5 / 8)
ಜಸ್ಟಿಸ್ (ಫೆ 14) ಬಿಡುಗಡೆಯಾಗಲಿದೆ. ಹೊಸ ಕಲಾವಿದರು ಹೊಸ ಪ್ರಯತ್ನದೊಂದಿಗೆ ನಿಮ್ಮೆದುರು ಬರಲಿದ್ದಾರೆ. ನಮ್ಮ ನೆಲದ ಕಾನೂನು ಮತ್ತು ಅದರಲ್ಲಿರುವ ಲೂಪ್ ಹೋಲ್ಸ್, ಜತೆಗೆ ಕಾನೂನಿನ ಒಳಿತು ಕೆಡುಕುಗಳನ್ನು ತೋರಿಸುವ ಸಿನಿಮಾ ಇದಾಗಿದೆ.
(6 / 8)
ರಾಜು ಜೇಮ್ಸ್ ಬಾಂಡ್ (ಫೆ 14) ಬಿಡುಗಡೆಯಾಗಲಿದೆ. ದೀಪಕ್ ಮಧುವನಹಳ್ಳಿ ಈ ಸಿನಿಮಾ ನಿರ್ದೇಶಿಸಿದ್ದಾರೆ. 'ಫಸ್ಟ್ ರ್‍ಯಾಂಕ್' ರಾಜು ಖ್ಯಾತಿಯ ನಟ ಗುರುನಂದನ್ ಈ ಸಿನಿಮಾದಲ್ಲಿ ಹೀರೋ.
(7 / 8)
ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಸಿನಿಮಾ (ಫೆ 14) ಬಿಡುಗಡೆಯಾಗಲಿದೆ. ಇದು ಸಿನಿಪ್ರಿಯರಲ್ಲಿ ನಿರೀಕ್ಷೆ ಮೂಡಿಸಿದ ಸಿನಿಮಾ ಆಗಿದೆ.
ಇತರ ಗ್ಯಾಲರಿಗಳು