ಮದುವೆಯಾದ ಒಂದು ವರ್ಷದಲ್ಲಿ ಗುಡ್ ನ್ಯೂಸ್ ನೀಡಿದ ನಟಿ ಕೌಸ್ತುಭ ಮಣಿ; ಮೊದಲ ಮಗುವಿನ ನಿರೀಕ್ಷೆಯಲ್ಲಿ ನನ್ನರಸಿ ರಾಧೆ
ರಾಮಚಾರಿ 2.0 ಸಿನಿಮಾ, ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕೌಸ್ತುಭ ಮಣಿ ಮನೆಯಲ್ಲಿ ಸಂಭ್ರಮ ಮೂಡಿದೆ. ಏಕೆಂದರೆ, ನಟಿ ಕೌಸ್ತುಭ ಮಣಿ ಮತ್ತು ಸಿದ್ಧಾಂತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಉಪೇಂದ್ರ, ಶಿವರಾಜ್ ಕುಮಾರ್, ರಾಜ್ ಬಿ ಶೆಟ್ಟಿ ನಟನೆಯ ಸದ್ಯದಲ್ಲಿಯೇ ರಿಲೀಸ್ ಆಗಲಿರುವ 45 ಸಿನಿಮಾದಲ್ಲಿಯೂ ಈಕೆ ನಟಿಸಿದ್ದಾರೆ.
(1 / 10)
ನಟಿ ಕೌಸ್ತುಭ ಮಣಿ ಮನೆಯಲ್ಲಿ ಸಂಭ್ರಮ ಮೂಡಿದೆ. ಏಕೆಂದರೆ, ನಟಿ ಕೌಸ್ತುಭ ಮಣಿ ಮತ್ತು ಸಿದ್ಧಾಂತ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಮ್ಮಿಂಗ್ ಸೂನ್, ಶೀಘ್ರದಲ್ಲಿ ಆಗಮಿಸಲಿದೆ ಎಂಬದು ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ನಟಿ ಕೌಸ್ತುಭ ಮಣಿ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಒಂದು ಮಗುವಿನ ಉಡುಗೆ, ಪುಟಾಣಿ ಚಪ್ಪಲಿಗಳು ಸೇರಿದಂತೆ ಮಗುವನ್ನು ಸ್ವಾಗತಿಸುವ ಫೋಟೋವನ್ನು ಹಾಕಿದ್ದಾರೆ.
(2 / 10)
"ಮೊನ್ನೆಮೊನ್ನೆಯಷ್ಟೇ ಮದುವೆಯಾದ ಹಾಗೆ ಇದೆ" ಎಂದೆಲ್ಲ ಆತ್ಮೀಯರು ಕಾಮೆಂಟ್ ಮಾಡಿದ್ದಾರೆ. ನಟಿಗೆ ಅಭಿಮಾನಿಗಳು, ಆಪ್ತರು ಅಭಿನಂದನೆಗಳ ಮಹಾಪೂರ ಹರಿಸಿದ್ದಾರೆ.
(3 / 10)
ಕಳೆದ ವರ್ಷ ಸಿದ್ಧಾಂತ್ ಮತ್ತು ಕೌಸ್ತುಭ ಮಣಿ ಮದುವೆಯಾಗಿದ್ದರು. ಆಪ್ತರು, ಬಂಧು ಬಳಗದ ನಡುವೆ ಅದ್ಧೂರಿಯಾಗಿ ಇವರು ವಿವಾಹವಾಗಿದ್ದರು.
(4 / 10)
ಕಳೆದ ವರ್ಷ ಏಪ್ರಿಲ್ 26ರಂದು ನನ್ನರಸಿ ರಾಧೆ ಧಾರಾವಾಹಿ ನಟಿ ಕೌಸ್ತುಭ ಮಣಿ ವಿವಾಹ ನಡೆದಿತ್ತು. ಇವರು ನನ್ನರಸಿ ರಾಧೆ ಧಾರಾವಾಹಿಯಲ್ಲಿ ನಾಯಕಿ ಇಂಚರಾ ಪಾತ್ರದ ಮೂಲಕ ಕಲರ್ಸ್ ಕನ್ನಡ ಸೀರಿಯಲ್ ವೀಕ್ಷಕರ ಮನೆಮಾತಾಗಿದ್ದರು.
(5 / 10)
ಈ ಸೀರಿಯಲ್ ಮುಗಿದ ಬಳಿಕ ಸಿದ್ಧಾಂತ್ ಸತೀಶ್ ಜತೆ ಇವರ ವಿವಾಹವಾಗಿತ್ತು. ಇವರಿಬ್ಬರದ್ದು ಆರೇಂಜ್ಡ್ ಮ್ಯಾರೇಜ್.
(6 / 10)
ನನ್ನರಸಿ ರಾಧೆ ಮಾತ್ರವಲ್ಲದೆ ಗೌರಿ ಶಂಕರ ಸೀರಿಯಲ್‌ನಲ್ಲಿಯೂ ಇವರು ನಟಿಸುತ್ತಿದ್ದರು. ಆದರೆ, ಈ ಸೀರಿಯಲ್‌ನಿಂದ ಹೊರಬಂದಿದ್ದರು.
(9 / 10)
ಇವರೊಂದಿಗೆ ಚಂದನಾ ರಾಘವೇಂದ್ರ, ವಿಜಯ್ ಚೆಂಡೂರ್, ಸ್ಪರ್ಶ ರೇಖಾ ಮುಂತಾದವರು ನಟಿಸಿದ್ದರು. ಈ ಸಿನಿಮಾವು 2023ರಲ್ಲಿ ಬಿಡುಗಡೆಯಾಗಿತ್ತು.
ಇತರ ಗ್ಯಾಲರಿಗಳು