ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Narasimha Jayanti 2024: ವಿವಿಧ ರೂಪದಲ್ಲಿ ನೆಲೆ ನಿಂತ ಕರ್ನಾಟಕದ ಪ್ರಮುಖ 8 ನರಸಿಂಹ ದೇಗುಲಗಳನ್ನು ಬಲ್ಲಿರಾ Photos

Narasimha Jayanti 2024: ವಿವಿಧ ರೂಪದಲ್ಲಿ ನೆಲೆ ನಿಂತ ಕರ್ನಾಟಕದ ಪ್ರಮುಖ 8 ನರಸಿಂಹ ದೇಗುಲಗಳನ್ನು ಬಲ್ಲಿರಾ photos

  • ಕರ್ನಾಟಕದ ಹಲವು ಭಾಗಗಳಲ್ಲಿ ನರಸಿಂಹದೇಗುಲಗಳಿವೆ. ಪ್ರಮುಖ ಪ್ರವಾಸಿ ಧಾರ್ಮಿಕ ಕ್ಷೇತ್ರಗಳೂ ಹೌದು. ನರಸಿಂಹ ಜಯಂತಿ ಹಿನ್ನೆಲೆಯಲ್ಲಿ ಪ್ರಮುಖ ನರಸಿಂಹ ದೇಗುಲಗಳ ಮಾಹಿತಿ ನೀಡಲಾಗಿದೆ.

ಬೀದರ್ ಪಟ್ಟಣದ ( BIdar) ಬಳಿಯಿರುವ ಝರಣಿ ನರಸಿಂಹ ಗುಹಾಂತರ್ಗತ ದೇವಾಲಯವೆಂದೇ ಪ್ರಸಿದ್ಧ. ಗುಹೆಯಲ್ಲಿರುವ ನರಸಿಂಹ ದೇವರ ದರ್ಶನ ಪಡೆಯಲು ಎದೆಮಟ್ಟದಲ್ಲಿ ಹರಿಯುವ ನೀರಿನಲ್ಲಿ300 ಮೀಟರ್ ನಡೆದುಕೊಂಡು ಹೋಗಬೇಕು. ನೀರು ವರ್ಷ ಪೂರ್ತಿ ನಿರಂತರ ಹರಿಯುತ್ತಿದ್ದು ಗುಹೆಯ ಕೊನೆಯಲ್ಲಿ ಬಂಡೆಯಲ್ಲಿರುವ ಸ್ವಯಂಭೂ ನರಸಿಂಹ ದೇವರು ದರ್ಶನ ಪಡೆಯಬಹುದು. 
icon

(1 / 8)

ಮಂಡ್ಯ ಮೇಲುಕೋಟೆಯಲ್ಲಿರುವ( Melkote) ಯೋಗ ನರಸಿಂಹ ದೇವಾಲಯವು ಈ ಹಿಂದೂ ಧಾರ್ಮಿಕ ಸ್ಥಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ.  1777 ಮೀಟರ್ ಎತ್ತರದಲ್ಲಿ ಬೆಟ್ಟದ ಮೇಲೆ ನಿಂತಿದೆ. ಐತಿಹಾಸಿಕ ದೇವಾಲಯವು ತನ್ನ ವಾಸ್ತುಶಿಲ್ಪದ ಸೌಂದರ್ಯ, ಪ್ರಶಾಂತ ಪರಿಸರ ಮತ್ತು ಧಾರ್ಮಿಕ ಮಹತ್ವದಿಂದಾಗಿ ಭಕ್ತರನ್ನು ಆಕರ್ಷಿಸುತ್ತದೆ.
icon

(2 / 8)

ಶೂರ್ಪಾಲಿ ನರಸಿಂಹಸ್ವಾಮಿಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಶೂರ್ಪಾಲಿ ( Shurpali Bagalkot) ನರಸಿಂಹ ದೇವರು ಪ್ರಸಿದ್ದ. ಕೃಷ್ಣಾ ತೀರದಲ್ಲಿ ನೆಲೆ ನಿಂತಿರುವ ಲಕ್ಷ್ಮೀ ನರಸಿಂಹ ಸ್ವಾಮಿ ದೇವರಿಗೆ ದೇವಾಲಯವನ್ನು ನಿರ್ಮಿಸಿ ನಿತ್ಯ ಪೂಜೆ ನಡೆಸಲಾಗುತ್ತದೆ.  ಶ್ರೀ ಲಕ್ಷ್ಮಿ ನರಸಿಂಹನ ಪುರಾತನ ದೇವಾಲಯವು ಸ್ಕಂದ ಪುರಾಣದಲ್ಲಿ ಉಲ್ಲೇಖಗಳನ್ನು ಹೊಂದಿದೆ. ಪ್ರಧಾನ ದೇವರ ಮುಂದೆ ಅಶ್ವತ್ಥ ವೃಕ್ಷವಿದೆ.ಜಮಖಂಡಿಯಿಂದ 25 ಕಿ.ಮಿ.ದೂರದಲ್ಲಿದೆ ಈ ದೇಗುಲ 
icon

(3 / 8)

ಸಾಲಿಗ್ರಾಮ ಗುರು ನರಸಿಂಹ//ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿರುವ( Udupi Saligrama) ಯೋಗಾನಂದ ಗುರುನರಸಿಂಹ ದೇವಸ್ಥಾನ ಬಹಳ ಪ್ರಸಿದ್ಧವಾಗಿದ್ದು ಆ ಪ್ರದೇಶದ ಜನರೆಲ್ಲ ಈ ದೇವರಿಗೆ ಬಹಳ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಕಪ್ಪು ಶಿಲೆಯ ಈ ವಿಗ್ರಹ ಗಮನ ಸೆಳೆಯುತ್ತದೆ.
icon

(4 / 8)

ಹಂಪಿ ಲಕ್ಷ್ಮೀ ನರಸಿಂಹ//  ಐತಿಹಾಸಿಕ ನಗರಿ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ( Hampi) ಸುಮಾರು 22 ಅಡಿ ಎತ್ತರವಿರುವ ಬೃಹದಾಕಾರದ ಏಕಶಿಲಾ ಲಕ್ಷ್ಮೀ ನರಸಿಂಹ ವಿಗ್ರಹವಿದು. ಸಾಮಾನ್ಯ ವಿಗ್ರಹಗಳಿಗಿಂತ ಭಿನ್ನವಾಗಿರುವ ಮೂಲ ವಿಗ್ರಹ ಯೋಗ ಭಂಗಿಯಲ್ಲಿದ್ದು ತೊಡೆಯ ಮೇಲೆ ಚಿಕ್ಕ ಲಕ್ಷ್ಮಿ ವಿಗ್ರಹವಿದ್ದ ಇತಿಹಾಸವಿದೆ. ಈಗ ಲಕ್ಷ್ಮಿ ವಿಗ್ರಹ ಇಲ್ಲದಿದ್ದರೂ ಬಳಸಿರುವ ಲಕ್ಷ್ಮಿಯ ಕೈಯನ್ನು ಕಾಣಬಹುದು 
icon

(5 / 8)

ತಿ.ನರಸೀಪುರ ಲಕ್ಷ್ಮೀ ಗುಂಜಾ ನರಸಿಂಹಸ್ವಾಮಿ ತಿರುಮಕೂಡಲು( ̧TNarasipur) ನರಸೀಪುರದ ತ್ರಿವೇಣಿ ಸಂಗಮ ಸ್ಥಳದ ಪವಿತ್ರ ತಾಣ. ಮೈಸೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಸಹ ಹರಿಹರರ ಕ್ಷೇತ್ರ. ಕಾವೇರಿ, ಕಪಿಲೆ, ಸ್ಫಟಿಕ ಸರೋವರದ ಸಂಗಮ ಸ್ಥಳ. ಈ ಮೂರರ ಸಂಗಮ ಸ್ಥಳವಾದ್ದರಿಂದಲೇ ಇದಕ್ಕೆ ತ್ರಿಮಕೂಟ, ತಿರುಮ ಕೂಡಲು  ಎಂಬ ಹೆಸರು.  ನದಿಯ ದಡದಲ್ಲಿ ಗುಂಜಾ ನರಸಿಂಹ ನೆಲೆಸಿರುವುದರಿಂದ ಕ್ಷೇತ್ರಕ್ಕೆ ತಿರಮಕೂಡಲು ನರಸೀಪುರ ಎಂಬ ಹೆಸರು ಬಂದಿದೆ
icon

(6 / 8)

ತೊರವಿ ನರಸಿಂಹ//ವಿಜಯಪುರ ನಗರದ ಹೊರಭಾಗದ ತೊರವಿ( Vijayapura) ಗ್ರಾಮದಲ್ಲಿ ತೊರವಿ ನರಸಿಂಹ ದೇವಾಲಯವಿದೆ. ಗುಹೆಯ ರೂಪದಲ್ಲಿ ದೇಗುಲ ಇಲ್ಲಿನ ವಿಶೇಷ.  ಕುಮಾರ ವಾಲ್ಮೀಕಿಯು ಇದೇ ದೇವಾಲಯದಲ್ಲಿ ತೊರವಿ ರಾಮಾಯಣವನ್ನು ಕನ್ನಡದಲ್ಲಿ ರಚಿಸಿದ್ದಾನೆ. ತೊರವಿ ರಾಮಾಯಣ ಕೃತಿಯನ್ನು ದೇವಸ್ಥಾನದ ಒಳ ಆವರಣದಲ್ಲಿ ಪ್ರದರ್ಶನಕ್ಕಿಡಲಾಗಿದ್ದು ಕೃತಿಯಲ್ಲಿನ ಸಾಲುಗಳನ್ನು ದೇವಾಲಯದ ಒಳ ಆವರಣದಲ್ಲಿ ಬರೆಯಲಾಗಿದೆ.
icon

(7 / 8)

ಸಿಬಿ ನರಸಿಂಹ ದೇಗುಲ//ತುಮಕೂರಿನಿಂದ 20 ಕಿಮೀ ದೂರದಲ್ಲಿರುವ ಸೀಬಿಯಲ್ಲಿ (ಸಿಬಿ)( Tumkur CB) ನೆಲೆಗೊಂಡ ನರಸಿಂಹ ದೇಗುಲವಿದು. ಶತಮಾನಗಳ ಇತಿಹಾಸವಿರುವ ಈ ದೇವಸ್ಥಾನ ಭಕ್ತರ ಆಕರ್ಷಣೆಯ ಕೇಂದ್ರವೂ ಹೌದು. 
icon

(8 / 8)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು