ಸೋದರಿಯರ ಸಿಂದೂರ ಅಳಿಸಿದವರ ನೆಲೆಗಳನ್ನೇ ಗುಡಿಸಿ ಹಾಕಿದ್ದೇವೆ, ಯಾರನ್ನೂ ಬಿಡಲ್ಲ; ಪ್ರಧಾನಿ ಮೋದಿ ಖಡಕ್ ಮಾತು
ಆಪರೇಷನ್ ಸಿಂಧೂರ ಬಳಿಕ ಇದೇ ಮೊದಲ ಬಾರಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಅವರ ಭಾಷಣದ ಪ್ರಮುಖ ಹೈಲೈಟ್ಸ್ ಇಲ್ಲಿದೆ.
(1 / 7)
ದೇಶದ ಎಲ್ಲ ತಾಯಂದಿರು, ಹೆಣ್ಣುಮಕ್ಕಳಿಗೆ ಆಪರೇಷನ್ ಸಿಂದೂರ ಸಮರ್ಪಿತ; ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದ ಮಾತಿದು.
(2 / 7)
ಪಾಕಿಸ್ತಾನದೊಂದಿಗೆ ಮಾತುಕತೆ ನಡೆಯುವುದಿದ್ದರೆ ಅದು ಭಯೋತ್ಪಾದನೆಯ ಬಗ್ಗೆ, ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆಯೇ ನಡೆಯುತ್ತದೆ. ಭಾರತದ ನಿಲುವನ್ನು ಜಗತ್ತು ಅರ್ಥ ಮಾಡಿಕೊಳ್ಳಬೇಕು - ನರೇಂದ್ರ ಮೋದಿ.
(3 / 7)
ಸೋದರಿಯರ ಸಿಂದೂರ ಅಳಿಸಿದವರನ್ನು ಅಳಿಸಿ ಹಾಕಿದ್ದೇವೆ. ಭಯೋತ್ಪಾದಕರಲ್ಲಿ ನಡುಕ ಹುಟ್ಟಿಸಿದ್ದೇವೆ. ನಮ್ಮ ಶಕ್ತಿ ಏನೆಂದು ಜಗತ್ತಿಗೆ ಗೊತ್ತಾಗಿದೆ - ನರೇಂದ್ರ ಮೋದಿ
(4 / 7)
ಕಾರ್ಯಾಚಾರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಆದರೆ ಸಂಘರ್ಷ ನಿಂತಿಲ್ಲ. ಅಣ್ವಸ್ತ್ರದ ಬ್ಲಾಕ್ಮೇಲ್ಗೆ ನಾವು ಬಗ್ಗುವುದಿಲ್ಲ - ನರೇಂದ್ರ ಮೋದಿ
(5 / 7)
ಸಿಂದೂರ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ. ಅವರು ಕನಸಿನಲ್ಲಿಯೂ ಯೋಚಿಸದ ರೀತಿಯಲ್ಲಿ ಪ್ರತಿಕಾರ ತೀರಿಸಿದ್ದೇವೆ - ಪ್ರಧಾನಿ ಮೋದಿ
(6 / 7)
ನಮ್ಮ ಸೋದರಿಯರ ಸಿಂದೂರ ಅಳಿಸಿದವರನ್ನು ಉಳಿಸಲಿಲ್ಲ. ಭಯೋತ್ಪಾದನೆಯ ವಿಶ್ವವಿದ್ಯಾಲಯಗಳನ್ನೇ ನಮ್ಮ ಕ್ಷಿಪಣಿಗಳು ಅಳಿಸಿ ಹಾಕಿದೆವು - ನರೇಂದ್ರ ಮೋದಿ
ಇತರ ಗ್ಯಾಲರಿಗಳು