ದೆಹಲಿ ಚುನಾವಣೆ: ಎಎಪಿ ಹೀನಾಯ ಸೋಲಿನ ಮರುದಿನವೇ ಸಿಎಂ ಸ್ಥಾನಕ್ಕೆ ಅತಿಶಿ ರಾಜೀನಾಮೆ
- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಲು ಕಂಡಿದೆ. ಹೀಗಾಗಿ ಪಕ್ಷದ ನಾಯಕಿ ಮತ್ತು ವಿಜೇತ ಅಭ್ಯರ್ಥಿ ಅತಿಶಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ಭಾನುವಾರ (ಫೆ.9) ರಾಜೀನಾಮೆ ಹಸ್ತಾಂತರಿಸಿದ್ದಾರೆ.
- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಸೋಲು ಕಂಡಿದೆ. ಹೀಗಾಗಿ ಪಕ್ಷದ ನಾಯಕಿ ಮತ್ತು ವಿಜೇತ ಅಭ್ಯರ್ಥಿ ಅತಿಶಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ಭಾನುವಾರ (ಫೆ.9) ರಾಜೀನಾಮೆ ಹಸ್ತಾಂತರಿಸಿದ್ದಾರೆ.
(1 / 8)
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದು ಬಹುಮತ ಸಾಬೀತುಪಡಿಸಿದೆ. ಕೇವಲ 22 ಕ್ಷೇತ್ರಗಳಲ್ಲಿ ಗೆದ್ದ ಎಎಪಿ ಅಧಿಕಾರ ಕಳೆದುಕೊಂಡಿತು. ಹೀಗಾಗಿ ಅತಿಶಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
(@RajNiwasDelhi )(2 / 8)
ಸತತ ಎರಡನೇ ಅವಧಿಗೆ ಕಲ್ಕಜಿ ಕ್ಷೇತ್ರದಲ್ಲಿ ಅತಿಶಿ ಗೆದ್ದಿದ್ದರು. ಬಿಜೆಪಿಯ ರಮೇಶ್ ಬಿಧುರಿ ಅವರನ್ನು 3,521 ಮತಗಳ ಅಂತರದಿಂದ ಸೋಲಿಸಿದ ಅವರು, ಪಕ್ಷದ ಸೋಲಿನಿಂದಾಗಿ ಸ್ಥಾನ ಕಳೆದುಕೊಂಡಿದ್ದಾರೆ.
(@RajNiwasDelhi )(3 / 8)
70 ವಿಧಾನಸಭಾ ಸ್ಥಾನಗಳಲ್ಲಿ ಬಿಜೆಪಿಯು 48 ಸ್ಥಾನಗಳನ್ನು ಗೆಲ್ಲುವ ಮೂಲಕ 27 ವರ್ಷಗಳ ನಂತರ ದೆಹಲಿ ಗದ್ದುಗೆ ಏರಲು ಸಜ್ಜಾಗಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಕೇವಲ 22 ಸ್ಥಾನಗಳಿಗೆ ಸೀಮಿತಗೊಂಡಿದೆ.
(HT_PRINT)(5 / 8)
ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ, ಮುಂದಿನ ವಾರ ಬಿಜೆಪಿ ಅಧಿಕಾರಕ್ಕೆ ಹಕ್ಕು ಮಂಡಿಸುವ ನಿರೀಕ್ಷೆಯಿದೆ ಎಂದು ಪಕ್ಷದ ನಾಯಕರು ಸುದ್ದಿ ಸಂಸ್ಥೆ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
(HT_PRINT)(6 / 8)
ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧದ ಭ್ರಷ್ಟಾಚಾರದ ಆರೋಪಗಳ ನಡುವೆ, ಅತಿಶಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
(Hindustan Times)(7 / 8)
ನಿರ್ಗಮಿತ ಮುಖ್ಯಮಂತ್ರಿ ಅತಿಶಿ ಸೇರಿದಂತೆ ಐವರು ಮಹಿಳಾ ಅಭ್ಯರ್ಥಿಗಳು 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಈ ಬಾರಿ ಗೆದ್ದ ಎಎಪಿಯ ಏಕೈಕ ಮಹಿಳಾ ಅಭ್ಯರ್ಥಿ ಅತಿಶಿ.
(Mohan Lal)ಇತರ ಗ್ಯಾಲರಿಗಳು