Aero India 2025: ಬೆಂಗಳೂರು ಏರೋ ಇಂಡಿಯಾ ಇಂದು ಶುರು, ಜಗತ್ತಿನ ಅತಿ ವೇಗದ 10 ಜೆಟ್ ವಿಮಾನಗಳ ವಿವರ ತಿಳಿಯೋದಕ್ಕೆ ಈ ಹೊತ್ತು ಒಂದು ನಿಮಿತ್ತ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aero India 2025: ಬೆಂಗಳೂರು ಏರೋ ಇಂಡಿಯಾ ಇಂದು ಶುರು, ಜಗತ್ತಿನ ಅತಿ ವೇಗದ 10 ಜೆಟ್ ವಿಮಾನಗಳ ವಿವರ ತಿಳಿಯೋದಕ್ಕೆ ಈ ಹೊತ್ತು ಒಂದು ನಿಮಿತ್ತ

Aero India 2025: ಬೆಂಗಳೂರು ಏರೋ ಇಂಡಿಯಾ ಇಂದು ಶುರು, ಜಗತ್ತಿನ ಅತಿ ವೇಗದ 10 ಜೆಟ್ ವಿಮಾನಗಳ ವಿವರ ತಿಳಿಯೋದಕ್ಕೆ ಈ ಹೊತ್ತು ಒಂದು ನಿಮಿತ್ತ

Aero India 2025: ಬೆಂಗಳೂರು ಯಲಹಂಕದಲ್ಲಿ ಇಂದಿನಿಂದ ಫೆ 14ರ ತನಕ ಏರೋ ಇಂಡಿಯಾ 2025 ನಡೆಯಲಿದೆ. ಇದೊಂದು ನಿಮಿತ್ತವಾಗಿ ಜಗತ್ತಿನ ಅತಿ ವೇಗದ 10 ಜೆಟ್ ವಿಮಾನಗಳ ವಿವರ ತಿಳಿಯೋಣ. 

ಬೆಂಗಳೂರಿಗರು ಬಹಳ ನಿರೀಕ್ಷೆಯೊಂದಿಗೆ ಕಾಯುತ್ತಿದ್ದ ಏರೋ ಇಂಡಿಯಾ 2025 ಇಂದು ಶುರುವಾಗುತ್ತಿದೆ. ಫೆ 14ರ ತನಕ ನಡೆಯುವ ಈ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುವುದಕ್ಕೆ ವಿದೇಶಗಳ ಯುದ್ಧ ವಿಮಾನಗಳೂ ಆಗಮಿಸಿವೆ. ಜಗತ್ತಿನ ಅತಿ ವೇಗದ 10 ಜೆಟ್ ವಿಮಾನಗಳ ವಿವರ ತಿಳಿಯೋದಕ್ಕೆ ಈ ಹೊತ್ತು ಒಂದು ನಿಮಿತ್ತ.
icon

(1 / 11)

(PC - Wikipedia)

ಜಗತ್ತಿನ ಅತಿವೇಗದ ವಿಮಾನ ಇದು- ಎಕ್ಸ್ 43 ಎಂದು ನಾಸಾ ಇದಕ್ಕೆ ನಾಮಕರಣ ಮಾಡಿದೆ. ಇದು ಪ್ರಾಯೋಗಿಕ ವಿಮಾನ. ಗಂಟೆಗೆ 11,854 ಕಿಮೀ ವೇಗದಲ್ಲಿ ಸಂಚರಿಸಬಲ್ಲದು. ಮೂರು ವಿಮಾನಗಳನ್ನು ತಯಾರಿಸಲಾಗಿದೆ. ಈ ಪೈಕಿ ಒಂದು ನಾಶವಾಗಿದೆ. ಇನ್ನೆರಡು ಇವೆ.
icon

(2 / 11)

(PC- NASA)

ಜಗತ್ತಿನ ಎರಡನೇ ಅತಿ ವೇಗದ ವಿಮಾನ ಎಸ್‌ ಆರ್ 71. ಇದನ್ನು ಬ್ಲ್ಯಾಕ್ ಬರ್ಡ್ ಎಂದೂ ಕರೆಯಲಾಗುತ್ತದೆ. 1999ರ ನಂತರ ಇದು ಆಗಸದಲ್ಲಿ ಹಾರಾಡಿದ್ದು ಕಂಡವರಿಲ್ಲ. ಇದರ ಮೇಲೆ ಕ್ಷಿಪಣಿ ದಾಳಿ ನಡೆದರೆ ಅದರಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದ ಜೆಟ್ ಗಂಟೆಗೆ 4074.84 ಕಿಮೀ ಸಂಚರಿಸಬಲ್ಲ ಸಾಮರ್ಥ್ಯ ಹೊಂದಿತ್ತು.
icon

(3 / 11)

ಮಿಗ್ ಫಾಕ್ಸ್ ಬೋಟ್‌ (ಮಿಕಾಯನ್ ಗುರ್ವಿಚ್ ಮಿಗ್ 25 ಮೊದಲ ಹಾರಾಟ ನಡೆಸಿ 6 ದಶಕಗಳ ಮೇಲಾಯಿತು. ಕೆಲವು ದೇಶಗಳಲ್ಲಿ ಈ ವಿಮಾನದ ಸುಧಾರಿತ ಮಾಡೆಲ್‌ಗಳು ಬಳಕೆಯಲ್ಲಿವೆ. ಕೆಲವು ದೇಶಗಳಲ್ಲಿ ಹಳೆಯ ಮಾಡೆಲ್‌ಗಳು ಇನ್ನೂ ಕೆಲಸ ಮಾಡುತ್ತಿರುವುದು ಅಚ್ಚರಿಯ ವಿಷಯ. ಇದು ಗಂಟೆಗೆ 3494.5 ಕಿಮೀ ಹಾರಾಟ ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.
icon

(4 / 11)

ಮಿಗ್ ಫಾಕ್ಸ್ ಹೌಂಡ್ ಅಥವಾ ಮಿಗ್ 31 ಎಂಬುದು ಮಿಗ್‌ 25ರದ ಬಳಕೆದಾರ ಸ್ನೇಹಿ ಮಾದರಿ. ಇದು ಕೂಡ ಇಂದಿಗೂ ಹಾರಾಟದಲ್ಲಿರುವ ಹಳೆಯ ಜೆಟ್ ವಿಮಾನಗಳ ಪೈಕಿ ಒಂದು. ಇದು ಗಂಟೆಗೆ 3494.484 ಕಿಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು.
icon

(5 / 11)

ಜಗತ್ತಿನ 5ನೇ ಅತಿ ವೇಗದ ಜೆಟ್ ವಿಮಾನ ಎಫ್‌ 15 ಈಗಲ್‌. ಮೆಕ್ಡೊನೆಲ್ ಡೌಗ್ಲಾಸ್ ಅವರ ಎಫ್ -15 ಫೈಟರ್ ವಿಮಾನವು ಶಾಶ್ವತವಾಗಿರುವಂತೆ ತೋರುತ್ತದೆ. ಆದರೆ ಸುಮಾರು 50 ವರ್ಷಗಳ ಕಾಲ ಸೇವೆಯಲ್ಲಿದ್ದರೂ ವೇಗದ ಜೆಟ್‌ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದು ಗಂಟಗೆ 3087 ಕಿಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು.
icon

(6 / 11)

ಸುಖೋಯಿ ಸು 27 ಫ್ಲಾಂಕರ್‌ ಜಗತ್ತಿನ ಆರನೇ ಅತಿವೇಗದ ಜೆಟ್ ವಿಮಾನ. ಇದು ಗಂಟೆಗೆ 2901.78 ವೇಗದಲ್ಲಿ ಸಂಚರಿಸಬಲ್ಲದು.
icon

(7 / 11)

ಜಗತ್ತಿನ ಏಳನೇ ಅತಿವೇಗ ಜೆಟ್‌ ಮಿಗ್ 23 ಫ್ಲಾಗರ್. ಕಳೆದ 18 ವರ್ಷಗಳ ಅವಧಿಯಲ್ಲಿ 5000ಕ್ಕೂ ಹೆಚ್ಚು ವಿಮಾನಗಳನ್ನು ಉತ್ಪಾದಿಸಲಾಗಿದೆ. ವಿಶೇಷ ವಿನ್ಯಾಸದ ಈ ಯುದ್ಧ ವಿಮಾನ ಗಂಟೆಗೆ 2901.78 ಕಿಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು.
icon

(8 / 11)

ಜಗತ್ತಿನ 8ನೇ ಅತಿ ವೇಗದ ಜೆಟ್ ಎಫ್ 14 ಟಾಮ್‌ಕ್ಯಾಟ್‌. ಒರಿಜಿನಲ್ ಟಾಪ್ ಗನ್ ಮೂವಿಯ ಹೀರೋ ಆಗಿ ಇದು ಕಾಣಿಸಿಕೊಂಡಿದೆ. 1986ರಿಂದ ಬಳಕೆಯಲ್ಲಿದೆ. ಇದು ಗಂಟೆಗೆ 2889.432 ಕಿಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು.
icon

(9 / 11)

ಜಗತ್ತಿನ 9ನೇ ಅತಿವೇಗದ ಜೆಟ್ ವಿಮಾನವೇ ಮಿಗ್ 29 ಫಲ್‌ಕ್ರಮ್‌. ಶೀತಲ ಸಮರದ ವೇಳೆ ಅಮೆರಿಕದ ಎಫ್ 15 ಜೆಟ್ ವಿರುದ್ಧ ಹೋರಾಟ ನೆಡೆಸಲು ರಷ್ಯಾ ತಯಾರಿಸಿದ ವಿಮಾನ ಇದು. ಇದು ಒಮ್ಮೆ ಇಂಧನ ಭರ್ತಿಮಾಡಿದರೆ 1500 ಕಿಮೀ ಹಾರಾಟ ನಡೆಸಬಲ್ಲದು. ಇದು ಗಂಟೆಗೆ 2840.04 ಕಿಮೀ ವೇಗದಲ್ಲಿ ಸಂಚರಿಸಬಲ್ಲದು.
icon

(10 / 11)

ಜಗತ್ತಿನ ಟಾಪ್ 10 ಅತಿವೇಗದ ಜೆಟ್‌ಗಳ ಪೈಕಿ 10ನೇ ಸ್ಥಾನದಲ್ಲಿರುವುದು ಎಫ್ 22 ರಾಪ್ಟರ್. ಇದರಲ್ಲಿ ಒಬ್ಬ ಮಾತ್ರ ಪ್ರಯಾಣಿಸಬಹುದು. ಯುದ್ಧಕ್ಕೆಂದೇ ತಯಾರಿಸಲಾದ ವಿಮಾನ ಇದು, 180 ಚಿಲ್ಲರೆ ವಿಮಾನಗಳು ಈಗ ಬಳಕೆಯಲ್ಲಿವೆ. ಇದು ಗಂಟೆಗೆ 2778.3 ಕಿಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು.
icon

(11 / 11)

ಇತರ ಗ್ಯಾಲರಿಗಳು