ಸಿಬಿಎಸ್‌ಇ ಬೋರ್ಡ್ ಪರೀಕ್ಷೆ: 10, 12ನೇ ತರಗತಿ ಪರೀಕ್ಷೆ ಶುರು, ಮೊದಲ ದಿನ ಎಕ್ಸಾಂ ಬರೆದ ವಿದ್ಯಾರ್ಥಿಗಳ ಸಂಭ್ರಮ, ಸಂಕಟ- ಚಿತ್ರನೋಟ
CBSE Board Exam 2025: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಬೋರ್ಡ್ ಪರೀಕ್ಷೆ ಶನಿವಾರ (ಫೆ 15) ಶುರುವಾಗಿದೆ. ಮೊದಲ ದಿನ ಇಂಗ್ಲಿಷ್ ಮತ್ತು ಎಂಟರ್ಪ್ರಿನ್ಯೂರ್‌ಶಿಪ್ ಪರೀಕ್ಷೆಗಳು ನಡೆದವು. ಮೊದಲ ದಿನ ಎಕ್ಸಾಂ ಬರೆದ ವಿದ್ಯಾರ್ಥಿಗಳ ಖುಷಿ, ಸಂಭ್ರಮ ಹಾಗೂ ಸಂಕಟದ ಚಿತ್ರನೋಟ ಇಲ್ಲಿದೆ.
(1 / 10)
ಸಿಬಿಎಸ್‌ಇ ಬೋರ್ಡ್ ಪರೀಕ್ಷೆ: ಸಿಬಿಎಸ್‌ಇ ಪಠ್ಯಕ್ರಮದ 10, 12ನೇ ತರಗತಿ ಪರೀಕ್ಷೆ ಶನಿವಾರ (ಫೆ 15) ಶುರುವಾಗಿದೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಬೋರ್ಡ್ ಎಕ್ಸಾಂ ದೇಶಾದ್ಯಂತ 7800ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದು, 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಮೊದಲ ದಿನ ಎಕ್ಸಾಂ ಬರೆದ ವಿದ್ಯಾರ್ಥಿಗಳ ಸಂಭ್ರಮ, ಸಂಕಟದ ಚಿತ್ರನೋಟ ಇಲ್ಲಿದೆ.
(PTI)(3 / 10)
ಕೇರಳದ ತಿರುವನಂತಪುರಂನಲ್ಲಿ ಸಿಬಿಎಸ್ಇ ಬೋರ್ಡ್ ಪರೀಕ್ಷೆ ಬರೆಯಲು ಹೊರಟ ಮಗಳಿಗೆ ಆಲ್ ದಿ ಬೆಸ್ಟ್ ಮಗಳೇ ಎಂದು ಬೆನ್ನು ತಟ್ಟಿ ಕಳುಹಿಸಿದ ತಂದೆ.
(PTI)(4 / 10)
ಗುರುಗ್ರಾಮದಲ್ಲಿ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ, ಶುಭ ಹಾರೈಸಿ ಪರೀಕ್ಷೆಗೆ ಕಳುಹಿಸಿದರು.
(PTI)(5 / 10)
ನವದೆಹಲಿಯ ದ್ವಾರಕಾದಲ್ಲಿರುವ ಸೇಂಟ್ ಮೇರಿ ಸ್ಕೂಲ್‌ನಲ್ಲಿ ತಮ್ಮ ಮಕ್ಕಳನ್ನು ಪರೀಕ್ಷೆ ಬರೆಯಲು ಬಿಟ್ಟು ಹೊರಗೆ ರಸ್ತೆ ಬದಿ ಕಳವಳದೊಂದಿಗೆ ಕಾಯುತ್ತಿರುವ ಪಾಲಕರು.
(Photo by Vipin Kumar/ Hindustan Times)(7 / 10)
ನವದೆಹಲಿಯ ಕೆಜಿ ಮಾರ್ಗ್‌ನಲ್ಲಿರುವ ಕೇರಳ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಕಾನ್ವೆಂಟ್ ಆಫ್ ಜೇಸಸ್ ಆಂಡ್ ಮೇರಿ ಸ್ಕೂಲ್‌ನ ವಿದ್ಯಾರ್ಥಿಗಳು ಪರೀಕ್ಷೆ ಮೊದಲು ಅಂತಿಮ ತಯಾರಿ ನಡೆಸಿದ್ದು ಹೀಗೆ.
(Photo by Arvind Yadav/ Hindustan Times)(8 / 10)
ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು, ಅಂತಿಮ ಹಂತದ ತಯಾರಿಯಲ್ಲಿ ತೊಡಗಿದ್ದ ವೇಳೆ.
(PTI)(9 / 10)
ಬಿಹಾರದ ಪಟನಾದಲ್ಲಿರುವ ಸೇಂಟ್ ಡೊಮಿನಿಕ್ ಸಾವಿಯೋಸ್ ಹೈಸ್ಕೂಲ್‌ನಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಗಳು
(Santosh Kumar )ಇತರ ಗ್ಯಾಲರಿಗಳು