ದೇಶದ ರಕ್ಷಣೆಗೆ ಹೆಚ್ಚು ಖರ್ಚು ಮಾಡುವ 10 ರಾಷ್ಟ್ರಗಳಿವು; ಬಜೆಟ್‌ನಲ್ಲಿ ಅಧಿಕ ಮೊತ್ತ, ಭಾರತ-ಪಾಕಿಸ್ತಾನದ ಸ್ಥಾನ ಎಷ್ಟು?
- ವಿಶ್ವದ ಹೆಚ್ಚಿನ ರಾಷ್ಟ್ರಗಳು ದೇಶದ ರಕ್ಷಣಾ ವ್ಯವಸ್ಥೆಗೆ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಡುತ್ತದೆ. ಭಾರತ ಕೂಡಾ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಕೋಟಿ ಕೋಟಿ ಕೊಡುತ್ತಿದೆ. ತಮ್ಮ ಸೈನ್ಯಕ್ಕಾಗಿ ಹೆಚ್ಚು ಖರ್ಚು ಮಾಡುವ ಟಾಪ್ 10 ದೇಶಗಳು ಯಾವುವು ಎಂಬುದನ್ನು ನೋಡೋಣ.
- ವಿಶ್ವದ ಹೆಚ್ಚಿನ ರಾಷ್ಟ್ರಗಳು ದೇಶದ ರಕ್ಷಣಾ ವ್ಯವಸ್ಥೆಗೆ ಬಜೆಟ್‌ನಲ್ಲಿ ಹೆಚ್ಚು ಹಣ ಮೀಸಲಿಡುತ್ತದೆ. ಭಾರತ ಕೂಡಾ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಗೆ ಕೋಟಿ ಕೋಟಿ ಕೊಡುತ್ತಿದೆ. ತಮ್ಮ ಸೈನ್ಯಕ್ಕಾಗಿ ಹೆಚ್ಚು ಖರ್ಚು ಮಾಡುವ ಟಾಪ್ 10 ದೇಶಗಳು ಯಾವುವು ಎಂಬುದನ್ನು ನೋಡೋಣ.
(1 / 12)
ಸಶಸ್ತ್ರ ಪಡೆಗಳಿಗೆ ಹೆಚ್ಚು ಖರ್ಚು ಮಾಡುವ ಟಾಪ್ 10 ದೇಶಗಳು: 2025ರಲ್ಲಿ ಪ್ರಮುಖ ದೇಶಗಳು ತಮ್ಮ ರಕ್ಷಣಾ ಬಜೆಟ್ ಮೊತ್ತವನ್ನು ಹೆಚ್ಚಿಸಿವೆ. ಇದು ಅಂತಾರಾಷ್ಟ್ರೀಯ ಭದ್ರತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಸೇರಿದಂತೆ ಹಲವು ಅಂಶಗಳನ್ನು ಒಳಗೊಂಡಿದೆ. ಗ್ಲೋಬಲ್ ಫೈರ್‌ಪವರ್ ವರದಿಯ ಆಧಾರದ ಮೇಲೆ, ತಮ್ಮ ಸೈನ್ಯಕ್ಕಾಗಿ ಹೆಚ್ಚು ಖರ್ಚು ಮಾಡುವ ವಿಶ್ವದ ಟಾಪ್ 10 ದೇಶಗಳು ಯಾವುವು ಎಂಬುದನ್ನು ನೋಡೋಣ.
(2 / 12)
10. ಉಕ್ರೇನ್: 53.70 ಬಿಲಿಯನ್ ಡಾಲರ್: 2025ರಲ್ಲಿ ಉಕ್ರೇನ್‌ನ ಮಿಲಿಟರಿ ಬಜೆಟ್ 53.70 ಬಿಲಿಯನ್ ಡಾಲರ್ ತಲುಪಿದೆ. ಅಂದರೆ 5370 ಕೋಟಿ ಡಾಲರ್. ಇದು ಈ ದೇಶದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ. ರಷ್ಯಾದೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ, ಉಕ್ರೇನ್ ಪಾಶ್ಚಿಮಾತ್ಯ ದೇಶಗಳಿಂದ ಬೃಹತ್ ಮಿಲಿಟರಿ ಸಹಾಯವನ್ನು ಪಡೆಯುತ್ತಿದೆ. ಹೀಗಾಗಿ ತನ್ನ ರಕ್ಷಣಾ ಬಜೆಟ್ ಹೆಚ್ಚಿಸಿದೆ.
(3 / 12)
9. ಫ್ರಾನ್ಸ್: 55 ಬಿಲಿಯನ್ ಡಾಲರ್: ಫ್ರಾನ್ಸ್ ಕೂಡ ತನ್ನ ಮಿಲಿಟರಿ ಬಜೆಟ್ ಅನ್ನು ಹೆಚ್ಚಿಸಿದ್ದು, 55 ಬಿಲಿಯನ್ ಡಾಲರ್ ತಲುಪಿದೆ. ಯುರೋಪ್‌ನಲ್ಲಿ ರಷ್ಯಾದ ಪ್ರಭಾವ ಹೆಚ್ಚುತ್ತಿರುವ ಕಾರಣ ಮತ್ತು ಆಫ್ರಿಕಾ ದೇಶಗಳಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಿಂದಾಗಿ ಫ್ರಾನ್ಸ್ ತನ್ನ ಮಿಲಿಟರಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಿದೆ.
(4 / 12)
8. ಆಸ್ಟ್ರೇಲಿಯಾ: 55.70 ಬಿಲಿಯನ್ ಡಾಲರ್: 2025ರಲ್ಲಿ ಆಸ್ಟ್ರೇಲಿಯಾ ತನ್ನ ಮಿಲಿಟರಿ ಬಜೆಟ್ ಅನ್ನು 55.70 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದೆ. ಆಸ್ಟ್ರೇಲಿಯಾ ತನ್ನ ಜಲಾಂತರ್ಗಾಮಿ ಸಾಮರ್ಥ್ಯ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತಿದೆ.
(5 / 12)
7. ಜಪಾನ್: 57 ಬಿಲಿಯನ್ ಡಾಲರ್: ಜಪಾನ್‌ನ ಮಿಲಿಟರಿ ಬಜೆಟ್ 57 ಬಿಲಿಯನ್ ಡಾಲರ್ ತಲುಪಿದೆ, ಇದು ಯುದ್ಧಾನಂತರದ ಇತಿಹಾಸದಲ್ಲಿ ಅತ್ಯಧಿಕವಾಗಿದೆ. ಚೀನಾ ಮತ್ತು ಉತ್ತರ ಕೊರಿಯಾದಿಂದ ಹೆಚ್ಚುತ್ತಿರುವ ಬೆದರಿಕೆಯಿಂದಾಗಿ ಜಪಾನ್ ತನ್ನ ಸೇನಾ ಪಡೆಯ ಆಧುನೀಕರಣಕ್ಕೆ ಮುಂದಾಗಿದೆ. ಕ್ಷಿಪಣಿ ರಕ್ಷಣಾ ವ್ಯವಸ್ಥೆ ಮತ್ತು ರಹಸ್ಯ ಯುದ್ಧ ವಿಮಾನಗಳ ಮೇಲೆ ವಿಶೇಷ ಗಮನ ಹರಿಸುತ್ತಿದೆ.
(6 / 12)
6. ಯುನೈಟೆಡ್ ಕಿಂಗ್‌ಡಮ್: 71.50 ಬಿಲಿಯನ್ ಡಾಲರ್: 2025ರಲ್ಲಿ ಬ್ರಿಟನ್ ತನ್ನ ರಕ್ಷಣಾ ಬಜೆಟ್ ಅನ್ನು 71.50 ಬಿಲಿಯನ್ ಡಾಲರ್‌ಗೆ ಹೆಚ್ಚಿಸಿದೆ. ಇದು NATO ಅಡಿಯಲ್ಲಿ ಯುರೋಪಿನ ಭದ್ರತೆಯನ್ನು ಬಲಪಡಿಸುವ ಮತ್ತು ರಷ್ಯಾದಿಂದ ಹೆಚ್ಚುತ್ತಿರುವ ಬೆದರಿಕೆಯನ್ನು ಎದುರಿಸುವ ಗುರಿ ಹೊಂದಿದೆ. ಯುಕೆ ತನ್ನ ನೌಕಾ ಪಡೆಗಳು ಮತ್ತು ಸೈಬರ್ ಭದ್ರತಾ ಸಾಮರ್ಥ್ಯಗಳನ್ನು ನವೀಕರಿಸುವತ್ತ ಗಮನಹರಿಸುತ್ತಿದೆ.
(7 / 12)
5. ಸೌದಿ ಅರೇಬಿಯಾ: 74.76 ಬಿಲಿಯನ್ ಡಾಲರ್: ಮಧ್ಯಪ್ರಾಚ್ಯದಲ್ಲಿ ಇರಾನ್ ಜೊತೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಆಂತರಿಕ ಭದ್ರತಾ ಕಾರಣಗಳಿಂದಾಗಿ ಸೌದಿ ಅರೇಬಿಯಾ ನಿರಂತರವಾಗಿ ಹೆಚ್ಚಿನ ಮಿಲಿಟರಿ ವೆಚ್ಚವನ್ನು ಕಾಯ್ದುಕೊಳ್ಳುತ್ತಿದೆ. ದೇಶವು ಆಧುನಿಕ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ತಂತ್ರಜ್ಞಾನದ ಖರೀದಿಯಲ್ಲೂ ಹೂಡಿಕೆ ಮಾಡುತ್ತಿದೆ.
(8 / 12)
4. ಭಾರತ: 75 ಬಿಲಿಯನ್ ಡಾಲರ್: ಭಾರತವು 2025 ರಲ್ಲಿ ತನ್ನ ರಕ್ಷಣಾ ಬಜೆಟ್ ಅನ್ನು 75 ಬಿಲಿಯನ್ ಡಾಲರ್‌ಗಳಿಗೆ ಹೆಚ್ಚಿಸಿದೆ. ಇದಕ್ಕೆ ಪ್ರಮುಖ ಕಾರಣ ಚೀನಾ ಮತ್ತು ಪಾಕಿಸ್ತಾನದೊಂದಿಗಿನ ನಿರಂತರ ಭದ್ರತಾ ಸವಾಲುಗಳು. ಭಾರತವು ಸ್ವಾವಲಂಬಿ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆ, ತೇಜಸ್ ಯುದ್ಧ ವಿಮಾನ, ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಹೂಡಿಕೆ ಮಾಡುತ್ತಿದೆ. ವಿಶ್ವದಲ್ಲಿ ಭಾರತದ ರಕ್ಷಣಾ ಬಜೆಟ್ ಗಾತ್ರದಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.
(9 / 12)
3. ರಷ್ಯಾ: 126 ಬಿಲಿಯನ್ ಡಾಲರ್: ಉಕ್ರೇನ್ ಮೇಲೆ ಸಮರ ಸಾರಿದ್ದ ರಷ್ಯಾ ತನ್ನ ಮಿಲಿಟರಿ ಬಜೆಟ್ ಅನ್ನು ಹೆಚ್ಚಿಸಿದೆ. ಇದು 2025ರಲ್ಲಿ 126 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇದು 2024 ಕ್ಕಿಂತ ಹೆಚ್ಚು. ರಷ್ಯಾ ಮುಖ್ಯವಾಗಿ ಕ್ಷಿಪಣಿಗಳು, ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಸೈಬರ್ ಯುದ್ಧ ತಂತ್ರಗಳ ಮೇಲೆ ಕೇಂದ್ರೀಕರಿಸಿದೆ.
(10 / 12)
2. ಚೀನಾ: 266.85 ಬಿಲಿಯನ್ ಡಾಲರ್: ಚೀನಾ ತನ್ನ ರಕ್ಷಣಾ ಬಜೆಟ್ ಅನ್ನು ಹೆಚ್ಚಿಸಿದೆ. ಅದರ ಉದ್ದೇಶ ಅಮೆರಿಕಕ್ಕೆ ಸವಾಲು ಹಾಕುವುದು ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಸಾಮರ್ಥ್ಯ ಬಲಪಡಿಸುವುದು. ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೊಸ ಯುದ್ಧನೌಕೆಗಳು, ಕ್ಷಿಪಣಿ ವ್ಯವಸ್ಥೆಗಳು ಮತ್ತು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಯುದ್ಧ ತಂತ್ರಜ್ಞಾನಗಳ ಮೇಲೆ ಕೇಂದ್ರೀಕರಿಸುತ್ತಿದೆ.
(11 / 12)
1. ಯುನೈಟೆಡ್ ಸ್ಟೇಟ್ಸ್: 895 ಬಿಲಿಯನ್ ಡಾಲರ್: ಅಮೆರಿಕದ ಮಿಲಿಟರಿ ಬಜೆಟ್ ವಿಶ್ವದಲ್ಲೇ ಅತಿ ದೊಡ್ಡದಾಗಿದೆ. 2025ರ ವೇಳೆಗೆ ಇದು 895 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ, ಇದು ಎರಡನೇ ಸ್ಥಾನದಲ್ಲಿರುವ ಚೀನಾದ ಬಜೆಟ್‌ಗಿಂತ ಮೂರು ಪಟ್ಟು ಹೆಚ್ಚು. ಅಮೆರಿಕ ತನ್ನ ಬಜೆಟ್‌ನ ಬಹುಪಾಲು ಭಾಗವನ್ನು ಅತ್ಯಾಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳು, ಫೈಟರ್ ಜೆಟ್‌ಗಳು, ಪರಮಾಣು ಶಸ್ತ್ರಾಸ್ತ್ರಗಳ ಆಧುನೀಕರಣ, ಸೈಬರ್ ಭದ್ರತೆ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಬಲಪಡಿಸಲು ಖರ್ಚು ಮಾಡುತ್ತಿದೆ.
ಇತರ ಗ್ಯಾಲರಿಗಳು