ಮಹಾ ಕುಂಭಮೇಳ: ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ಪ್ರಧಾನಿ ನರೇಂದ್ರ ಮೋದಿ -Photos
- Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025ರ ಶುಭಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಕೈಯಲ್ಲಿ 'ರುದ್ರಾಕ್ಷಿ ಮಾಲೆ' ಹಿಡಿದು ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು.
- Maha Kumbh Mela 2025: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025ರ ಶುಭಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದರು. ಕೈಯಲ್ಲಿ 'ರುದ್ರಾಕ್ಷಿ ಮಾಲೆ' ಹಿಡಿದು ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು.
(1 / 10)
ಪವಿತ್ರ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಮೋದಿ, 'ಮಹಾ ಕುಂಭಮೇಳದಲ್ಲಿ ಭಾಗವಹಿಸಿ ನಾನು ದೇವರ ಆಶೀರ್ವಾದ ಪಡೆದಿದ್ದೇನೆ' ಎಂದು ಹೇಳಿದರು.
(DPR PMO)(2 / 10)
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬುಧವಾರ (ಫೆ.5) ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪುಣ್ಯಸ್ನಾನದ ಸಮಯದಲ್ಲಿ ಅವರು ಕೈಯಲ್ಲಿ 'ರುದ್ರಾಕ್ಷಿ' ಮಾಲೆ ಹಿಡಿದಿದ್ದರು.
(ANI Grab)(3 / 10)
ಪ್ರಧಾನಿ ನರೇಂದ್ರ ಮೋದಿ ಅವರು ಕಡು ಕಿತ್ತಳೆ ಬಣ್ಣದ ಬಟ್ಟೆ ಧರಿಸಿ ಸ್ನಾನ ಮಾಡಿದರು. ಮಂತ್ರಗಳ ಪಠಣದ ನಡುವೆ ಸೂರ್ಯ ಮತ್ತು ಗಂಗಾಮಾತೆಗೆ ಪ್ರಾರ್ಥನೆ ಸಲ್ಲಿಸಿದರು.
(DPR PMO)(4 / 10)
ಪ್ರಧಾನಿ ಮೋದಿಯವರ ಸುಮಾರು 90 ನಿಮಿಷಗಳ ಪ್ರವಾಸ ಮಾಡಿ ಕುಂಭಮೇಳ ತಲುಪಿದರು. ಪ್ರಯಾಗ್ರಾಜ್ ವಿಮಾನ ನಿಲ್ದಾಣದಿಂದ ಸಂಗಮ್ ಬಳಿಯ ಹೆಲಿಪ್ಯಾಡ್‌ಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದರು. ನಂತರ ಅರೈಲ್ ಘಾಟ್‌ನಿಂದ ಪವಿತ್ರ ನದಿಗಳ ಸಂಗಮ ಸ್ಥಳಕ್ಕೆ ಮೋಟಾರು ದೋಣಿ ಮೂಲಕ ಸಾಗಿದರು.
(PIB)(5 / 10)
ಈ ಬಾರಿಯ ಪ್ರಯಾಗ್‌ರಾಜ್ ಪ್ರವಾಸವು, ಮೋದಿಯವರ 2019ರ ಕುಂಭಮೇಳ ಭೇಟಿಗಿಂತ ಕಡಿಮೆ ಅವಧಿಯದ್ದಾಗಿದೆ. ಆ ಸಮಯದಲ್ಲಿ, ಅವರು ನೈರ್ಮಲ್ಯ ಕಾರ್ಮಿಕರ ಪಾದ ತೊಳೆದು ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದರು. ಸುಮಾರು ಐದು ಗಂಟೆಗಳ ಅಲ್ಲೇ ಕಾಲ ಕಳೆದಿದ್ದರು.
(PIB)(6 / 10)
ಪವಿತ್ರ ಸ್ನಾನದ ನಂತರ ಮೋದಿ ಅವರು ನದಿಯಲ್ಲಿ ವಿಶೇಷವಾಗಿ ನಿರ್ಮಿಸಲಾದ ತಾತ್ಕಾಲಿಕ ವೇದಿಕೆ ಹತ್ತಿ ಗಂಗಾಮಾತೆಗೆ 'ಆರತಿ' ಬೆಳಗಿದರು.
(PIB)(7 / 10)
ಈ ವೇಳೆ ಮೋದಿ ಕಪ್ಪು ಬಣ್ಣದ ಜಾಕೆಟ್, ಬಿಳಿ ಪೈಜಾಮಾ, ಕೇಸರಿ ಶಾಲು ಮತ್ತು ಹಿಮಾಚಲಿ ಟೋಪಿಯನ್ನು ಧರಿಸಿ ಪವಿತ್ರ ನದಿಗಳಿಗೆ ಹಾಲು ಮತ್ತು ಹೂವುಗಳನ್ನು ಅರ್ಪಿಸಿದರು.
(PIB)(8 / 10)
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ, ನದಿಗಳ ಸಂಗಮದಲ್ಲಿ ವಿಶೇಷ ಪ್ರಾರ್ಥನೆ ಮಾಡಿದರು. ಪುರೋಹಿತರೊಬ್ಬರು ಪ್ರಧಾನ ಮಂತ್ರಿಗೆ ಧಾರ್ಮಿಕ ಆಚರಣೆಗಳ ಮಾರ್ಗದರ್ಶನ ನೀಡಿದರು.
(ANI Grab)(9 / 10)
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಯಮುನಾ ನದಿಯಲ್ಲಿ ದೋಣಿ ಪ್ರವಾಸ ಕೈಗೊಂಡರು.
(ANI Grab)ಇತರ ಗ್ಯಾಲರಿಗಳು