ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 10 ಎಕ್ಸಾಂ ಟಿಪ್ಸ್ ಹಾಗೂ ಎಳ್ಳು ಮಿಠಾಯಿ ಕೊಟ್ರು- ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 10 ಎಕ್ಸಾಂ ಟಿಪ್ಸ್ ಹಾಗೂ ಎಳ್ಳು ಮಿಠಾಯಿ ಕೊಟ್ರು- ಚಿತ್ರನೋಟ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 10 ಎಕ್ಸಾಂ ಟಿಪ್ಸ್ ಹಾಗೂ ಎಳ್ಳು ಮಿಠಾಯಿ ಕೊಟ್ರು- ಚಿತ್ರನೋಟ

Pariksha Pe Charcha 2025: ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು (ಫೆ 10) ದೇಶದ ವಿವಿಧ ರಾಜ್ಯಗಳ ಮಕ್ಕಳ ಜತೆಗೆ ಮಾತುಕತೆ ನಡೆಸಿದ್ದು, ಸ್ಟ್ರೆಸ್, ಡಯೆಟ್ ಸೇರಿ 10 ಮುಖ್ಯ ಎಕ್ಸಾಂ ಟಿಪ್ಸ್ ಹಂಚಿಕೊಂಡರು.

Pariksha Pe Charcha 2025: ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು, ಈ ಸಲ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ಎದುರಿಸುವುದು ಹೇಗೆ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬಿತ್ಯಾದಿ ಪ್ರಮುಖ 10 ಎಕ್ಸಾಂ ಟಿಪ್ಸ್ ಅನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಇದು ನೆರವಾಗಬಹುದು.
icon

(1 / 12)

(@narendramodi)

ನಿತ್ಯ ಸೂರ್ಯಸ್ನಾನ ಮಾಡಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಸೂರ್ಯ ಸ್ನಾನ ಮಾಡುವ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಬೆಳಿಗ್ಗೆ ಬೇಗ ಹೋಗಿ ಬಿಸಿಲಿನಲ್ಲಿ ಕುಳಿತುಕೊಳ್ಳಿ. ನಿಮ್ಮ ದೇಹದ ಹೆಚ್ಚಿನ ಭಾಗವನ್ನು ಸೂರ್ಯನ ಬೆಳಕಿಗೆ ಒಡ್ಡಲು ಪ್ರಯತ್ನಿಸಿ.
icon

(2 / 12)

ಆಹಾರ ಸೇವನೆ ಬಗ್ಗೆ ಇರಲಿ ನಿಗಾ: ವಿದ್ಯಾರ್ಥಿಗಳಿಗೆ ಆರೋಗ್ಯ ಸಲಹೆಗಳನ್ನು ನೀಡಿದ ಪ್ರಧಾನಿ ಮೋದಿ, ರೈತರಂತೆ ಆಹಾರವನ್ನು ಸೇವಿಸಬೇಕು. ರೈತರು ಬೆಳಿಗ್ಗೆ ಹೊಟ್ಟೆ ತುಂಬ ಊಟ ಮಾಡುತ್ತಾರೆ. ಮಧ್ಯಾಹ್ನ ಸ್ವಲ್ಪ ಕಡಿಮೆ, ರಾತ್ರಿ ಸ್ವಲ್ಪವೇ ಆಹಾರ ಸೇವಿಸುತ್ತಾರೆ ಎಂದು ಹೇಳಿದರು.
icon

(3 / 12)

ಸಮತೋಲನದ ಆಹಾರ ಇರಲಿ: ಶರೀರಕ್ಕೆ ಅಗತ್ಯ ಪೌಷ್ಟಿಕಾಂಶ ಸಿಗಬೇಕು. ಗೋಧಿ, ರಾಗಿ, ಅಕ್ಕಿ ಎಲ್ಲವೂ ಬೇಕು. ರಾಗಿ ಸೇವನೆ ಆರೋಗ್ಯಕ್ಕೆ ಉತ್ತಮ. ರಾಗಿ ತಿಂದರೆ ಯಾರೂ ಕಪ್ಪಗಾಗಲ್ಲ. ಅನ್ನ ತಿಂದವರು ಬಿಳಿಯೂ ಆಗಲ್ಲ. ಹಾಗೆ ಯಾರಾದರೂ ಹೇಳಿದರೆ ಅದನ್ನು ತಲೆಗೆ ಹಾಕಿಕೊಳ್ಳಬೇಡಿ. ಸಮತೋಲನದ ಆಹಾರ ಸ್ವೀಕರಿಸಿ.
icon

(4 / 12)

ಪರೀಕ್ಷಾ ಒತ್ತಡ ಹೀಗಿರುತ್ತೆ ನೋಡಿ: ಒಬ್ಬ ಬ್ಯಾಟ್ಸ್‌ಮನ್ ಮೈದಾನದಲ್ಲಿ ನಿಂತಾಗ, ಜನರು ಪೆವಿಲಿಯನ್‌ನಿಂದ 4 ರನ್‌ಗಳಿಗೆ, ಸಿಕ್ಸರ್‌ಗೆ ಕೂಗುತ್ತಾರೆ. ಆದರೆ ಅವರ ಮಾತು ಕೇಳಿ ಬ್ಯಾಟ್ಸ್‌ಮನ್ ಒತ್ತಡಕ್ಕೆ ಒಳಗಾದರೆ, ಆತನಿಂದ ಪ್ರದರ್ಶನ ಹೊರಬರದು. ಆತ ಎಲ್ಲರ ಮಾತನ್ನೂ ಕೇಳುತ್ತಾನೆ ಆದರೆ ತನ್ನ ಸ್ವಂತ ಇಚ್ಛೆಯಂತೆ ಬ್ಯಾಟಿಂಗ್ ಮಾಡುತ್ತಾನೆ. ಅದೇ ರೀತಿ, ನೀವು ಕೂಡ ಎಲ್ಲರ ಮಾತುಗಳನ್ನು ಕೇಳಿಸಿಕೊಳ್ಳಬೇಕು. ಅವುಗಳ ಭಾರವನ್ನು ನಿಮ್ಮ ಮನಸ್ಸಿನ ಮೇಲೆ ಹಾಕಿಕೊಳ್ಳಬಾರದು. ಆದರೆ, ನಿಮ್ಮಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಿ.'
icon

(5 / 12)

ನಾಯಕತ್ವದ ಮಂತ್ರ: ಯಾರೊಬ್ಬರ ನಾಯಕತ್ವವನ್ನೂ ಹೇರಲಾಗದು. ನಿಮ್ಮ ನಡವಳಿಕೆಯಿಂದ ಜನ ನಿಮ್ಮನ್ನು ನಾಯಕ ಎಂದು ಸ್ವೀಕರಿಸುತ್ತಾರೆ. ನೀವು ನಿಮ್ಮ ಅಭಿಪ್ರಾಯಗಳನ್ನು ಜನರ ಮೇಲೆ ಹೇರಿದರೆ ಅದು ಸರಿಯಾದ ನಾಯಕತ್ವವಲ್ಲ. ನಾಯಕತ್ವಕ್ಕೆ ತಂಡದ ಕೆಲಸ ಅತ್ಯಗತ್ಯ. ನಾಯಕತ್ವ ದೊಡ್ಡ ಶಕ್ತಿ, ನಂಬಿಕೆ. ಪರೀಕ್ಷಾ ಸಂದರ್ಭದಲ್ಲಿ ನಿಮ್ಮಿಂದ ಸಾಧ್ಯವಾದಷ್ಟು ಇತರರ ಕಲಿಕೆಗೂ ನೆರವಾಗಿ.
icon

(6 / 12)

ಚೆನ್ನಾಗಿ ನಿದ್ದೆ ಮಾಡಿ: "ನಿಮಗೆ ಸಾಕಷ್ಟು ನಿದ್ರೆ ಬರುತ್ತದೋ ಇಲ್ಲವೋ ಎಂಬುದನ್ನು ಗಮನಿಸಿ. ಅದು ಪೌಷ್ಟಿಕಾಂಶಕ್ಕೆ ಸಂಬಂಧಿಸಿದೆ. ಸದೃಢ ಶರೀರಕ್ಕೆ ನಿದ್ರೆ ಬಹಳ ಮುಖ್ಯ. ದಿನಕ್ಕೆ ಎಷ್ಟು ಗಂಠೆ ನಿದ್ದೆ ಮಾಡುತ್ತೀರಿ ಎಂಬುದು ಮುಖ್ಯ. ಉತ್ತಮ ಆರೋಗ್ಯ ಬೇಕು ಎಂದಾದರೆ ಉತ್ತಮ ನಿದ್ದೆಯೂ ಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
icon

(7 / 12)

ಖಿನ್ನತೆಯಿಂದ ದೂರ ಇರಿ: ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳಬೇಡಿ. ನಿಮ್ಮ ಆಲೋಚನೆಗಳನ್ನು ಎಲ್ಲರಿಗೂ ಮುಕ್ತವಾಗಿ ಹೇಳಿ. ಮನೆಯಲ್ಲಿರುವ ಎಲ್ಲರ ಜೊತೆ ಮಾತನಾಡಿ. ನಿಮ್ಮ ಮನಸ್ಸಿನೊಳಗಿನ ಸಂದಿಗ್ಧತೆಯ ಬಗ್ಗೆ ಯಾರಿಗಾದರೂ ಹೇಳಿ, ಇಲ್ಲದಿದ್ದರೆ ಅದು ಖಿನ್ನತೆಗೆ ದಾರಿ ಮಾಡಿಕೊಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
icon

(8 / 12)

ಆತಂಕವೂ ಬೇಡ: ಮನಸ್ಸಿನಲ್ಲಿ ಆತಂಕ ತುಂಬಿಕೊಂಡಿದ್ದರೆ, ಆಲೋಚನೆಗಳನ್ನು ಹೊರ ಹಾಕದೇ ಇದ್ದರೆ ಅದು ಸ್ವಲ್ಪ ಸಮಯದ ನಂತರ ಪ್ರೆಶರ್ ಕುಕ್ಕರ್‌ನ ಸೀಟಿಯಂತೆ ಸ್ಫೋಟಗೊಳ್ಳುತ್ತದೆ. ಒತ್ತಡ ಬಿಡುಗಡೆ ಮಾಡದಿದ್ದರೆ ಕುಕ್ಕರ್ ಸ್ಫೋಟಗೊಳ್ಳುತ್ತದೆ. ಅಂತೆಯೇ, ಮನಸ್ಸಿನ ಆಲೋಚನೆಗಳನ್ನು ಹೊರ ಹಾಕದೇ ಇದ್ದರೆ ಅವುಗಳೂ ಸ್ಪೋಟಗೊಳ್ಳಬಹುದು. ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಳ್ಳಿ ಮತ್ತು ನೀವು ಏನು ಮಾಡುತ್ತಿದ್ದೀರಿ ಎಂಬುದರ ಮೇಲೆ ಗಮನಹರಿಸಿ.
icon

(9 / 12)

ಟೈಮ್ ಟೇಬಲ್ ಮಾಡಿಕೊಟ್ಟುಕೊಳ್ಳಿ: ಪರೀಕ್ಷೆಯನ್ನು ಎದುರಿಸುತ್ತೀರಾದರೆ, ವೇಳಾಪಟ್ಟಿ ಮಾಡಿಟ್ಟುಕೊಂಡು ಪಾಲಿಸಬೇಕು. ವೇಳಾಪಟ್ಟಿಯ ಮಹತ್ವ ವಿವರಿಸಿದ ಪ್ರಧಾನಿ ಮೋದಿ, ಪ್ರತಿಯೊಬ್ಬರಿಗೂ 24 ಗಂಟೆ ಇದೆ.  ಕೆಲವರು ನಿಷ್ಪ್ರಯೋಜಕ ವಿಷಯಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡುತ್ತಾರೆ, ಇನ್ನು ಕೆಲವರು ತಮ್ಮ ಗುರಿಯತ್ತ ಗಮನಹರಿಸಿ ಅದಕ್ಕಾಗಿ ಶ್ರಮಿಸುತ್ತಾರೆ. ಈ ಸಮಯವನ್ನು ಸಾಧ್ಯವಾದಷ್ಟು ಅತ್ಯುತ್ತಮವಾಗಿ ಬಳಸಿಕೊಳ್ಳಬೇಕು. ನಾಳೆ ಮಾಡಬೇಕಾದ ಕೆಲಸಗಳ ಪಟ್ಟಿಯನ್ನು ಮಾಡಿ. ನಂತರ ಮರುದಿನ ನೀವು ಏನು ಮಾಡಿದ್ದೀರಿ ಮತ್ತು ಏನು ಮಾಡಲಿಲ್ಲ ಎಂದು ಪರಿಶೀಲಿಸಿ. ನಮ್ಮ ನೆಚ್ಚಿನ ವಿಷಯದ ಜೊತೆಗೆ, ಇತರ ವಿಷಯಗಳಿಗೂ ಸಮಯ ನೀಡಬೇಕು. ನಮ್ಮ 24 ಗಂಟೆಗಳನ್ನು ಹೇಗೆ ಹೆಚ್ಚು ಉತ್ಪಾದಕವಾಗಿಸಬಹುದು ಎಂಬುದರ ಮೇಲೆ ಗಮನ ಹರಿಸೋಣ.
icon

(10 / 12)

ಫೇಲ್ ಆದರೆ ಜೀವನ ನಿಲ್ಲಲ್ಲ: ಅನೇಕ ಮಕ್ಕಳು ಶಾಲೆಯಲ್ಲಿ ಅನುತ್ತೀರ್ಣರಾಗುತ್ತಾರೆ, ಆದರೆ ಮತ್ತೆ ಉತ್ತೀರ್ಣರಾಗಲು ಪ್ರಯತ್ನಿಸುತ್ತಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಅನುತ್ತೀರ್ಣರಾದರೆ ಅಥವಾ ಸೋತ ಸಂದರ್ಭದಲ್ಲಿ ಜೀವನ ಕೊನೆಯಾಗುವುದಿಲ್ಲ. ನೀವು ಜೀವನದಲ್ಲಿ ಯಶಸ್ವಿಯಾಗಬೇಕೆ ಅಥವಾ ಪುಸ್ತಕಗಳಲ್ಲಿ ಯಶಸ್ವಿಯಾಗಬೇಕೆ ಎಂದು ನೀವೇ ನಿರ್ಧರಿಸಬೇಕು. ನಿಮ್ಮ ಜೀವನದಲ್ಲಿನ ವೈಫಲ್ಯಗಳು ಗೆಲುವಿಗೆ ಮೆಟ್ಟಿಲಾಗಬೇಕು, ಅನುಭವಗಳನ್ನು ನಿಮ್ಮ ಶಿಕ್ಷಕರನ್ನಾಗಿ ಮಾಡಿಕೊಳ್ಳಿ. ಜೀವನ ಮಾತನಾಡಬೇಕೇ ಹೊರತು ಅಂಕಗಳಲ್ಲ.
icon

(11 / 12)

ನಿಮ್ಮೊಂದಿಗೆ ನಿಮ್ಮ ಸ್ಪರ್ಧೆ ಇರಲಿ: ನೀವು ಕಳೆದ ಬಾರಿ 30 ಅಂಕಗಳನ್ನು ಪಡೆದಿದ್ದರೆ, ಈ ಬಾರಿ 35 ಅಂಕಗಳನ್ನು ಪಡೆಯಬೇಕು ಎಂದು ನೀವು ಯೋಚಿಸಬೇಕು. ನೀವು ನಿಮ್ಮೊಂದಿಗೆ ಸ್ಪರ್ಧಿಸಬೇಕು. ನೀವು ಕ್ರಮೇಣ ನಿಮ್ಮ ಮನಸ್ಸನ್ನು ಸ್ಥಿರಗೊಳಿಸಿಕೊಳ್ಳಬೇಕು. ನೀವು ನಿಮಗಾಗಿ ಒಂದು ಉದಾಹರಣೆಯನ್ನು ಹೊಂದಿಸಿಕೊಳ್ಳಬೇಕು ಎಂದು ಪ್ರಧಾನಿ ವಿದ್ಯಾರ್ಥಿಗಳಿಗೆ ಹೇಳಿದರು
icon

(12 / 12)

ಇತರ ಗ್ಯಾಲರಿಗಳು