ಪರ್ವೇಶ್ ಸಿಂಗ್, ತರ್ವಿಂದರ್ ಸಿಂಗ್ ಜಯಭೇರಿ; ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಪ್ರಮುಖರು
- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಅನಿರೀಕ್ಷಿತ ಸೋಲು ಕಂಡಿದೆ. ಎಎಪಿಯ ಪ್ರಮುಖ ನಾಯಕರೇ ಸೋತರೆ, ಬಿಜೆಪಿ ಬಹುಮತ ಸಾಬೀತು ಮಾಡಿದೆ. 27 ವರ್ಷಗಳ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ರಚಿಸಲು ಮುಂದಾಗಿದೆ.
- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ಅನಿರೀಕ್ಷಿತ ಸೋಲು ಕಂಡಿದೆ. ಎಎಪಿಯ ಪ್ರಮುಖ ನಾಯಕರೇ ಸೋತರೆ, ಬಿಜೆಪಿ ಬಹುಮತ ಸಾಬೀತು ಮಾಡಿದೆ. 27 ವರ್ಷಗಳ ಬಳಿಕ ಕೇಂದ್ರಾಡಳಿತ ಪ್ರದೇಶದಲ್ಲಿ ಸರ್ಕಾರ ರಚಿಸಲು ಮುಂದಾಗಿದೆ.
(1 / 7)
ದೆಹಲಿ ಚುನಾವಣೆಯಲ್ಲಿ ಈ ಬಾರಿಯ ಯಾವೆಲ್ಲಾ ನಾಯಕರು ಗೆದ್ದಿದ್ದಾರೆ. ಪ್ರಬಲ ನಾಯಕರಿಗೆ ಠಕ್ಕರ್ ಕೊಟ್ಟವರು ಯಾರ್ಯಾರು. ಅಚ್ಚರಿಯ ಗೆಲುವು ಸಾಧಿಸಿದವರು ಯಾರ್ಯಾರು ನೋಡೋಣ.
(2 / 7)
ತರ್ವಿಂದರ್ ಸಿಂಗ್ ಮರ್ವಾ: ಎಎಪಿಯ ಪ್ರಬಲ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಸೋಲುಣಿಸಿದ ತರ್ವಿಂದರ್, ಬಿಜೆಪಿಯ ಪಾಳಯದ ಸಂಭ್ರಮ ಹೆಚ್ಚಿಸಿದ್ದಾರೆ. ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ 675 ಮತಗಳ ಅಂತರದಿಂದ ರೋಚಕ ಗೆಲುವು ಕಂಡಿದ್ದಾರೆ.
(Hindustan Times)(3 / 7)
ಅರವಿಂದರ್ ಸಿಂಗ್ ಲವ್ಲಿ: ಬಿಜೆಪಿಯ ಅರವಿಂದರ್ ಸಿಂಗ್ ಲವ್ಲಿ, ಗಾಂಧಿ ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಎಎಪಿಯ ನವೀನ್ ಚೌಧರಿ, ಕಾಂಗ್ರೆಸ್‌ನ ಕಮಲ್ ಅರೋರಾಗೆ ಸೋಲುಣಿಸಿದ್ದಾರೆ.
(Hindustan Times)(4 / 7)
ಪರ್ವೇಶ್ ಸಿಂಗ್: ಎಎಪಿಯ ಪ್ರಬಲ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿಯ ಪರ್ವೇಶ್ ಸಿಂಗ್ 4089 ಮತಗಳಿಂದ ಗೆದ್ದು ಬೀಗಿದ್ದಾರೆ. ಕಾಂಗ್ರೆಸ್‌ನ ಸಂದೀಪ್ ದಿಕ್ಷಿತ್ ಅವರಿಗೂ ಇಲ್ಲಿ ಸೋಲಾಗಿದೆ.
(PTI)(5 / 7)
ವಿಜೇಂದರ್ ಗುಪ್ತಾ: ರೋಹಿಣಿ ಕ್ಷೇತ್ರದಲ್ಲಿ ಬಿಜೆಪಿಯ ವಿಜೇಂದರ್ ಗುಪ್ತಾ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಎಎಪಿಯ ಪರ್ದೀಪ್ ಮಿತ್ತಲ್ ಹಾಗೂ ಸುಮೇಶ್ ಮಿತ್ತಲ್ ಸೋಲು ಕಂಡಿದ್ದಾರೆ.
(PTI)(6 / 7)
ಅತಿಶಿ: ದೆಹಲಿ ಸಿಎಂ ಅತಿಶಿ ಸತತ ಎರಡನೇ ಬಾರಿಗೆ ಗೆದ್ದು ಬೀಗಿದ್ದಾರೆ. ಕಲ್ಕಜಿ ಕ್ಷೇತ್ರದಲ್ಲಿ ಎಎಪಿಯ ಗೆಲುವು, ಪಕ್ಷಕ್ಕೆ ತುಸು ಸಮಾಧಾನ ತರಿಸಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಬಿಧುರಿ ಹಾಗೂ ಕಾಂಗ್ರೆಸ್‌ನ ಅಲ್ಕಾ ಲಂಬಾ ಸೋತಿದ್ದಾರೆ.
(PTI)ಇತರ ಗ್ಯಾಲರಿಗಳು