ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಭೇಟಿಯ ಪ್ರಮುಖ ಕ್ಷಣಗಳಿವು; ಬೆಸ್ಟ್‌ ಫ್ರೆಂಡ್‌ಗೆ ಗಿಫ್ಟ್‌ ಕೊಟ್ಟ ಯುಸ್‌ ಅಧ್ಯಕ್ಷ -Photos
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಭೇಟಿಯ ಪ್ರಮುಖ ಕ್ಷಣಗಳಿವು; ಬೆಸ್ಟ್‌ ಫ್ರೆಂಡ್‌ಗೆ ಗಿಫ್ಟ್‌ ಕೊಟ್ಟ ಯುಸ್‌ ಅಧ್ಯಕ್ಷ -Photos

ನರೇಂದ್ರ ಮೋದಿ, ಡೊನಾಲ್ಡ್ ಟ್ರಂಪ್ ಭೇಟಿಯ ಪ್ರಮುಖ ಕ್ಷಣಗಳಿವು; ಬೆಸ್ಟ್‌ ಫ್ರೆಂಡ್‌ಗೆ ಗಿಫ್ಟ್‌ ಕೊಟ್ಟ ಯುಸ್‌ ಅಧ್ಯಕ್ಷ -Photos

ಅಮೆರಿಕ ಪ್ರವಾಸ ಮಾಡಿದ ಭಾರತದ ಪ್ರಧಾನಿ ನರೇಂದ್ರ ಮೋದಿ, ಯುಎಸ್‌ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ವ್ಯಾಪಾರ, ತಂತ್ರಜ್ಞಾನ, ರಕ್ಷಣೆ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದರು. ಟ್ರಂಪ್-ಮೋದಿ ಭೇಟಿಯ ಪ್ರಮುಖ ಅಂಶಗಳಿವು.

ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ಅಮೆರಿಕ ಭೇಟಿಯಲ್ಲಿ ಭಾರತ ಮತ್ತು ಯುಎಸ್ ನಡುವೆ ಆಮದು ಸುಂಕ, ಮುಂಬೈ ಭಯೋತ್ಪಾದಕ ಆರೋಪಿ ತಹವೂರ್ ರಾಣಾ ಅವರ ಯಶಸ್ವಿ ಹಸ್ತಾಂತರ ಆದೇಶ ಮತ್ತು ಎಫ್ -35 ಸ್ಟೆಲ್ತ್ ಫೈಟರ್ ಜೆಟ್‌ಗೆ ಸಂಬಂಧಿಸಿದಂತೆ ರಕ್ಷಣಾ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ಚರ್ಚೆ ನಡೆದಿದೆ,
icon

(1 / 8)

(AFP)

ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನದ ಪೂರ್ವ ಕೋಣೆಯಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾದರು.
icon

(2 / 8)

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿರುವ ಬ್ಲೇರ್ ಹೌಸ್‌ನಲ್ಲಿ ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್, ಅವರ ಗೆಳತಿ ಮತ್ತು ಅವರ ಮಕ್ಕಳೊಂದಿಗೆ ಸಭೆಯಲ್ಲಿ ಭಾಗಿಯಾದರು.
icon

(3 / 8)

(PMO)

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಸ್ವಾಗತಿಸಿದರು. ತಬ್ಬಿಕೊಂಡು ಮಾರಮಾಡಿಕೊಂಡರು. 2030ರ ವೇಳೆಗೆ ಭಾರತ ಮತ್ತು ಯುಎಸ್ 500 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರದ ಗುರಿ ಹೊಂದಿವೆ ಎಂದು ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
icon

(4 / 8)

(PTI)

26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿ ತಹವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
icon

(5 / 8)

(narendramodi-X)

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ 'ಅವರ್ ಜರ್ನಿ ಟುಗೆದರ್' ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದಾರೆ.
icon

(6 / 8)

ಉಭಯ ನಾಯಕರು ವಿವಿಧ ಕ್ಷೇತ್ರಗಳಲ್ಲಿ ಭಾರತ-ಯುಎಸ್ ದ್ವಿಪಕ್ಷೀಯ ಪಾಲುದಾರಿಕೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಿದರು. ಭಾರತಕ್ಕೆ ಯುಎಸ್ ಮಿಲಿಟರಿ ಕ್ಷೇತ್ರಕ್ಕೆ ಸಂಬಂಧಿಸಿದ ಮಾರಾಟವನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ಎಫ್ 35 ಸ್ಟೆಲ್ತ್ ಫೈಟರ್‌ಗಳನ್ನು ಒದಗಿಸಲು ದಾರಿ ಮಾಡಿಕೊಡುತ್ತದೆ ಎಂದು ಟ್ರಂಪ್‌ ಹೇಳಿದರು.
icon

(7 / 8)

ಭಾರತ-ಚೀನಾ ಗಡಿ ವಿವಾದದ ಬಗ್ಗೆ ಮಾತನಾಡಿದ ಟ್ರಂಪ್‌, ಅಗತ್ಯವಿದ್ದರೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದರು. "ನಾನು ಭಾರತ ಗಡಿಯಲ್ಲಿ ಘರ್ಷಣೆಗಳನ್ನು ನೋಡುತ್ತೇನೆ. ಅವು ಕ್ರೂರವಾಗಿವೆ. ನನ್ನಿಂದ ಸಹಾಯ ಮಾಡಲು ಸಾಧ್ಯವಾದರೆ, ಭಾರತಕ್ಕೆ ಸಹಾಯ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ಜಾಗತಿಕ ಸಂಘರ್ಷವನ್ನು ನಿಲ್ಲಿಸಬೇಕು ಎಂದರು.
icon

(8 / 8)

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.

ಇತರ ಗ್ಯಾಲರಿಗಳು