ಕೇಜ್ರಿವಾಲ್, ಮನೀಶ್ ಸಿಸೋಡಿಯಾ, ಭಾರಧ್ವಜ್; ದೆಹಲಿ ಚುನಾವಣೆಯಲ್ಲಿ ಸೋಲು ಕಂಡ ಪ್ರಬಲ ನಾಯಕರ ಪಟ್ಟಿ
- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅನಿರೀಕ್ಷಿತ ಸೋಲು ಕಂಡಿದೆ. ಪ್ರಮುಖ ನಾಯಕರೇ ಸೋತು ಮುಖಭಂಗಕ್ಕೊಳಗಾಗಿದ್ದು, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಆಡಳಿತ ನಡೆಸಲು ಸಿದ್ಧತೆ ಆರಂಭಿಸಿದೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರಂಥ ಪ್ರಮುಖ ನಾಯಕರೇ ಸೋತಿದ್ದಾರೆ.
- ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಅನಿರೀಕ್ಷಿತ ಸೋಲು ಕಂಡಿದೆ. ಪ್ರಮುಖ ನಾಯಕರೇ ಸೋತು ಮುಖಭಂಗಕ್ಕೊಳಗಾಗಿದ್ದು, 27 ವರ್ಷಗಳ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಆಡಳಿತ ನಡೆಸಲು ಸಿದ್ಧತೆ ಆರಂಭಿಸಿದೆ. ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಅವರಂಥ ಪ್ರಮುಖ ನಾಯಕರೇ ಸೋತಿದ್ದಾರೆ.
(1 / 7)
ದೆಹಲಿ ಚುನಾವಣೆಯಲ್ಲಿ ಈ ಬಾರಿಯ ಸೋತ ಪ್ರಮುಖ ನಾಯಕರುಗಳು ಯಾರ್ಯಾರು. ಗೆಲ್ಲುವ ಭರವಸೆ ಮೂಡಿಸಿ, ಜನಾದೇಶದೊಂದಿಗೆ ಶಾಸಕ ಸ್ಥಾನ ಕಳೆದುಕೊಂಡ ಆಟಗಾರರ ಪಟ್ಟಿ ಇಲ್ಲಿದೆ.
(2 / 7)
ಅರವಿಂದ್ ಕೇಜ್ರಿವಾಲ್: ದೆಹಲಿಯ ಮಾಜಿ ಸಿಎಂ ಹಾಗೂ ಎಎಪಿ ಪಕ್ಷದ ಪ್ರಮುಖ ನಾಯಕ ಅರವಿಂದ್ ಕೇಜ್ರಿವಾಲ್ ಅಚ್ಚರಿಯ ಸೋಲು ಕಂಡಿದ್ದಾರೆ. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿಯ ಪರ್ವೇಶ್ ಸಿಂಗ್ ವಿರುದ್ಧ ಮಂಡಿಯೂರಿದ್ದಾರೆ.
(PTI)(3 / 7)
ಮನೀಶ್ ಸಿಸೋಡಿಯಾ: ಜಂಗ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಎಪಿ ಪ್ರಬಲ ನಾಯಕ ಮನೀಶ್ ಸಿಸೋಡಿಯಾ, ಅಲ್ಪ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. ಇವರ ವಿರುದ್ಧ ಬಿಜೆಯ ತರ್ವಿಂದರ್ ಸಿಂಗ್ ಗೆದ್ದು ಬೀಗಿದ್ದಾರೆ.
(PTI)(4 / 7)
ಕಳೆದ ಚಿನಾವಣೆಯಲ್ಲಿ 60,372 ಮತಗಳನ್ನು ಪಡೆದು ಗೆದ್ದಿದ್ದ ಎಎಪಿ ನಾಯಕ ಸೌರಭ್ ಭಾರಧ್ವಜ್ ಈ ಬಾರಿ ಬಿಜೆಪಿಯ ಶೀಖಾ ರಾಯ್ ವಿರುದ್ಧ ಸೋತಿದ್ದಾರೆ. ಗ್ರೇಟರ್ ಕೈಲಾಶ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು.
(Hindustan Times)(5 / 7)
ಸಂದೀಪ್ ದಿಕ್ಷಿತ್: ಎಪಿಯ ಅರವಿಂದ್ ಕೇಜ್ರಿವಾಲ್ ಹಾಗೂ ಬಿಜೆಪಿಯ ಪರ್ವೇಶ್ ಸಿಂಗ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ಸಂದೀಪ್ ದಿಕ್ಷಿತ್ ಸೋಲು ಕಂಡಿದ್ದಾರೆ.
(PTI)(6 / 7)
ರಮೇಶ್ ಬಿಧುರಿ: ದೆಹಲಿ ಸಿಎಂ ಅತಿಶಿ ವಿರುದ್ಧ ಸ್ಪರ್ಧಿಸಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿ ನಾಯಕ ರಮೇಶ್ ಬಿಧುರಿ ಸೋಲು ಕಂಡಿದ್ದಾರೆ. ಅತಿಶಿ ಮತ್ತೊಮ್ಮೆ ಗೆದ್ದಿದ್ದಾರೆ. ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಲ್ಕಾ ಲಂಬಾ ಕೂಡಾ ಸೋತಿದ್ದಾರೆ.
(Hindustan Times)ಇತರ ಗ್ಯಾಲರಿಗಳು