Donald Trump: 6 ಅಂತಸ್ತು, 132 ಕೊಠಡಿ, 35 ಸ್ನಾನಗೃಹ; ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸ ಶ್ವೇತಭವನ ಹೀಗಿದೆ
- ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಇಂದು (ಜ.20) ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ. ಪದಗ್ರಹಣ ಸಮಾರಂಭವು ಯುನೈಟೆಡ್ ಸ್ಟೇಟ್ಸ್ ಕ್ಯಾಪಿಟಲ್ ಕಟ್ಟಡ ರೊಟುಂಡಾದಲ್ಲಿ ನಡೆಯಲಿದೆ. ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಯುಎಸ್ ಅಧ್ಯಕ್ಷರಾಗಿ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನವನ್ನು ಪ್ರವೇಶಿಸಲು ಟ್ರಂಪ್ ಸಿದ್ಧರಾಗಿದ್ದಾರೆ.

(1 / 8)
ಯುಎಸ್ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿ ಅಮೆರಿಕದ ಅತ್ಯುನ್ನತ ಹುದ್ದೆಯನ್ನು ಟ್ರಂಪ್ ಅಲಂಕರಿಸಲಿದ್ದಾರೆ. ಅಮೆರಿಕ ಅಧ್ಯಕ್ಷರಾದವರು ಶ್ವೇತಭವನದಲ್ಲಿ ನೆಲೆಸುತ್ತಾರೆ. ವೈಟ್‌ಹೌಸ್ ಅಥವಾ ಶ್ವೇತಭವನದ ಕುರಿತು ಇನ್ನಷ್ಟು ತಿಳಿಯೋಣ.
(REUTERS)(2 / 8)
ಶ್ವೇತಭವನವು ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸವಾಗಿದೆ. ಹಾಗಂತಾ ಹಿಂದೆ ಇದನ್ನು ಶ್ವೇತಭವನ (ವೈಟ್ ಹೌಸ್) ಎಂದು ಕರೆಯುತ್ತಿರಲಿಲ್ಲ.
(AP)(3 / 8)
ಇದಕ್ಕೂ ಮೊದಲು, ಶ್ವೇತಭವನವನ್ನು ಅಧ್ಯಕ್ಷರ ಅರಮನೆ (President’s Palace) ಅಥವಾ ಅಧ್ಯಕ್ಷರ ಭವನ (President’s House) ಎಂದು ಕರೆಯಲಾಗುತ್ತಿತ್ತು. 1901ರಲ್ಲಿ ಅಧ್ಯಕ್ಷ ಥಿಯೋಡರ್ ರೂಸ್ವೆಲ್ಟ್ ಇದಕ್ಕೆ ಶ್ವೇತಭವನ ಎಂದು ಮರುನಾಮಕರಣ ಮಾಡಿದರು.
(AFP)(4 / 8)
ಶ್ವೇತಭವನವು ಆರು ಅಂತಸ್ತಿನ ಕಟ್ಟಡವಾಗಿದ್ದು, ಇದರಲ್ಲಿ ಬರೋಬ್ಬರಿ 132 ಕೊಠಡಿಗಳು ಹಾಗೂ 35 ಸ್ನಾನಗೃಹಗಳಿವೆ. 412 ಗೇಟ್‌ಗಳು, 147 ಕಿಟಕಿಗಳು, 28 ಬೆಂಕಿಗೂಡುಗಳು, 8 ಮೆಟ್ಟಿಲುಗಳು ಮತ್ತು 3 ಲಿಫ್ಟ್‌ಗಳಿವೆ.
(AFP)(5 / 8)
ಶ್ವೇತಭವನದ ಅಡುಗೆಮನೆ ತುಂಬಾ ದೊಡ್ಡದಾಗಿದ್ದು, ಸುಮಾರು 140 ಅತಿಥಿಗಳಿಗೆ ಏಕಕಾಲದಲ್ಲಿ ಊಟ ಬಡಿಸಬಹುದು.
(REUTERS)(6 / 8)
ಶ್ವೇತಭವನವು ಅದರ ಬಿಳಿ ಬಣ್ಣದಿಂದ ಹೆಸರುವಾಸಿಯಾಗಿದೆ. ಅದಕ್ಕೆ ಬಣ್ಣ ಬಳಿಯಲು ಬರೋಬ್ಬರಿ 570 ಗ್ಯಾಲನ್ (ಕ್ಯಾನ್) ಪೇಯಿಂಟ್ ಬೇಕಾಗುತ್ತದೆ
(AP)(7 / 8)
ಕಟ್ಟಡವನ್ನು ಮೂರು ಮುಖ್ಯ ವಿಭಾಗಗಳಾಗಿ ವರ್ಗೀಕರಿಸಲಾಗಿದೆ. ಪೂರ್ವ ವಿಭಾಗ, ಪಶ್ಚಿಮ ವಿಭಾಗ ಮತ್ತು ಕಾರ್ಯನಿರ್ವಾಹಕರ ನಿವಾಸ.
(AP)ಇತರ ಗ್ಯಾಲರಿಗಳು