Mallya Marriage: ವಿಜಯಮಲ್ಯ ಪುತ್ರನ ವಿವಾಹ ಸಂಭ್ರಮ, ಕ್ರಿಶ್ಚಿಯನ್, ಹಿಂದೂ ಸಂಪ್ರದಾಯದಂತೆ ಗೆಳತಿ ವರಿಸಿದ ಸಿದ್ದಾರ್ಥ್ photos
- Sid mallya ಒಂದು ಕಾಲ ಕರ್ನಾಟಕದ ಉದ್ಯಮಿ, ಸದ್ಯ ಲಂಡನ್‌ನಲ್ಲಿ ನೆಲೆಸಿರುವ ವಿಜಯಮಲ್ಯ( Vijay Mallya) ಪುತ್ರ ಸಿದ್ದಾರ್ಥ್ ಮಲ್ಯ ವಿವಾಹವು ಲಂಡನ್ ನಲ್ಲಿ ಆಪ್ತೇಷ್ಟರ ನಡುವೆ ನಡೆಯಿತು.
- Sid mallya ಒಂದು ಕಾಲ ಕರ್ನಾಟಕದ ಉದ್ಯಮಿ, ಸದ್ಯ ಲಂಡನ್‌ನಲ್ಲಿ ನೆಲೆಸಿರುವ ವಿಜಯಮಲ್ಯ( Vijay Mallya) ಪುತ್ರ ಸಿದ್ದಾರ್ಥ್ ಮಲ್ಯ ವಿವಾಹವು ಲಂಡನ್ ನಲ್ಲಿ ಆಪ್ತೇಷ್ಟರ ನಡುವೆ ನಡೆಯಿತು.
(1 / 7)
ಸಿದ್ದಾರ್ಥ ಮಲ್ಯ ಕೆಲ ವರ್ಷಗಳ ಹಿಂದೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಉದ್ಯಮಿ ವಿಜಯಮಲ್ಯ ಪುತ್ರ. ಈಗ ಸಿದ್ದಾರ್ಥ ಮದುವೆ ಲಂಡನ್ ನಲ್ಲಿ ನೆರವೇರಿದೆ. ಹಿಂದೂ ಸಂಪ್ರದಾಯದಂತೆಯೂ ಮದುವೆಯನ್ನು ಸಿದ್ದಾರ್ಥ ಮಾಡಿಕೊಂಡಿದ್ದಾರೆ..
(2 / 7)
ಸಿದ್ದಾರ್ಥ ಮಲ್ಯ ಅಮೆರಿಕಾದ ಲಾಸ್ ಎಂಜಲೀಸ್‌ನಲ್ಲಿ ಅವರಿಗೀಗ 34 ವರ್ಷ. ವಿಜಯಮಲ್ಯ ಹಾಗೂ ಸಮೀರ್ ಮಲ್ಯ ಅವರ ಪುತ್ರ. ಅವರು ವಿವಾಹವಾಗಿದ್ದು ಬಹುಕಾಲದ ಗೆಳತಿ ಜಾಸ್ಮಿನ್ ಅವರನ್ನು.
(3 / 7)
ಸಿದ್ ಮಲ್ಯ ( Sidmallya) ನಟ ಹಾಗೂ ಮಾಡೆಲ್ ಆಗಿ ಗುರುತಿಸಿಕೊಂಡವರು. ಹಲವಾರು ಇಂಗ್ಲೀಷ್ ಚಿತ್ರದಲ್ಲಿ ಸಿದ್ದಾರ್ಥ ಮಲ್ಯ ಅಭಿನಯಿಸಿ ಹೆಸರು ಮಾಡಿದ್ದಾರೆ.
(4 / 7)
ಅವರ ತಂದೆ ಯ ಉದ್ಯಮ ವಲಯವನ್ನೂ ಸಿದ್ದಾರ್ಥ ನೋಡಿಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ವಿಜಯ ಮಲ್ಯ ಭಾರತಕ್ಕೆ ಬಾರದ ಸನ್ನಿವೇಶ ನಿರ್ಮಾಣವಾಗಿದೆ. ಆದರೂ ಲಂಡನ್‌ನಲ್ಲಿ ಮಲ್ಯ ಕುಟುಂಬ ಸಕ್ರಿಯವಾಗಿದೆ.
(5 / 7)
ಸಿದ್ದಾರ್ಥ ಮಲ್ಯ ಜಾಸ್ಮೀನ್ ಅವರನ್ನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮನೆಯವರ ಆಕಾಂಕ್ಷೆಯಂತೆಯ ಲಂಡನ್ ನಲ್ಲಿ ಮೊದಲು ಕ್ರಿಶ್ಚಿಯನ್ ಸಂಪ್ರದಾಯದಂತೆ ಸಿದ್ದಾರ್ಥ ಮದುವೆಯಾಗಿದ್ದಾರೆ.
ಇತರ ಗ್ಯಾಲರಿಗಳು