Tamil Nadu Rains: ತಮಿಳುನಾಡು ಮಳೆ: ಜಲಪ್ರಳಯ ನಲುಗಿದ ಜನ, ರಕ್ಷಣೆಗ ಸೇನಾ ಕಾರ್ಯಾಚರಣೆ
- Tamilnadu rain updates ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ರಕ್ಷಣೆಗೆ ಸೇನೆ, ವಾಯುಸೇನೆ, ನೌಕಾ ಪಡೆ ಕೂಡ ಮುಂದಾಗಿವೆ. ಮಳೆಯಿಂದ ಆಗಿರುವ ಅನಾಹುತ, ರಕ್ಷಣೆಯ ಚಿತ್ರಣ ಇಲ್ಲಿದೆ.
- Tamilnadu rain updates ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ಇಡೀ ಜನಜೀವನ ಅಸ್ತವ್ಯಸ್ತಗೊಂಡಿದೆ. ರಕ್ಷಣೆಗೆ ಸೇನೆ, ವಾಯುಸೇನೆ, ನೌಕಾ ಪಡೆ ಕೂಡ ಮುಂದಾಗಿವೆ. ಮಳೆಯಿಂದ ಆಗಿರುವ ಅನಾಹುತ, ರಕ್ಷಣೆಯ ಚಿತ್ರಣ ಇಲ್ಲಿದೆ.
(1 / 8)
ಇದು ತಮಿಳುನಾಡಿನ ತೂತ್ತುಕುಡಿಯಲ್ಲಿ ಮಳೆಯಿಂದ ತುಂಬಿರುವ ನೀರಿನ ವೈಮಾನಿಕ ನೋಟ. ಇಡೀ ನಗರವೇ ನೀರಿಗೆ ಮುಳುಗಿ ಹೋಗಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
(2 / 8)
ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸೇನೆ ಆಗಮಿಸಿದೆ. ಈಗಾಗಲೇ ಆಹಾರವನ್ನು ಸಾಗಿಸಿರುವ ಹೆಲಿ ಕಾಪ್ಟರ್‌ಗಳು ನೀರಿನಲ್ಲಿ ಸಿಲುಕಿರುವ ಜನರನ್ನೂ ರಕ್ಷಿಸುತ್ತಿವೆ.
(3 / 8)
ದಕ್ಷಿಣ ತಮಿಳುನಾಡಿನ ಐದಾರು ಜಿಲ್ಲೆಗಳಲ್ಲಿ ಎಡಬಿಡದೇ ಸುರಿದಿರುವ ಮಳೆಯಿಂದಾಗಿ ಎಲ್ಲೆಲ್ಲೂ ನೀರು ನುಗ್ಗಿದೆ. ಅಂತಹ ಜನ ಹೊರ ಬರಲು ಇನ್ನಿಲ್ಲದೇ ಪರದಾಡಿದರು.
(4 / 8)
ತಮಿಳುನಾಡಿನ ತೆಂಕಾಸಿ ಜಿಲ್ಲೆಯಿಂದ ರಸ್ತೆಗಳು ಕಡಿತಗೊಂಡು ಜನ ಪರದಾಡುವಂತಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಮಕ್ಕಳು, ಹಿರಿಯರು, ಮಹಿಳೆಯರನ್ನು ರಕ್ಷಿಸಿದರು.
(5 / 8)
ದಕ್ಷಿಣ ತಮಿಳುನಾಡಿನ ಹಲವು ನಗರಗಳಲ್ಲಿ ನೀರು ಮಿತಿ ಮೀರಿ ನುಗ್ಗಿದೆ. ಮನೆಗಳಿಂದ ಹೊರ ಬರಲು ಆಗದವನ್ನು ಸೇನಾ ಸಿಬ್ಬಂದಿ ಹೆಗಲ ಮೇಲೆ ಹೊತ್ತು ಕರೆ ತರುವಂತಾಯಿತು.
(6 / 8)
ಭಾರೀ ಮಳೆ ಸುರಿದ ಕಾರಣ ಕನ್ಯಾಕುಮಾರಿ ಭಾಗದ ಕೆಲವು ಹಳ್ಳಿಗಳೂ ನದಿಗಳಂತಾಗಿವೆ. ಅಲ್ಲಿ ಸಿಲುಕಿದ ಜನರನ್ನು ಸಿಬ್ಬಂದಿ ದೋಣಿಯಲ್ಲಿ ಸುರಕ್ಷಿತ ಸ್ಥಳಗಳಿಗೆ ಕರೆ ತಂದರು.
(7 / 8)
ತಮಿಳುನಾಡಿನ ತೂತುಕ್ಕುಡಿಯಲ್ಲಿ ಭಾರೀ ಮಳೆಯಿಂದ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದರಿಂದ ಜನರನ್ನು ಜೆಸಿಬಿ ಬಳಸಿ ಸ್ಥಳಾಂತರಿಸಲಾಯಿತು.
ಇತರ ಗ್ಯಾಲರಿಗಳು