ಇಂದು ರಾಷ್ಟ್ರೀಯ ಸಹೋದರರ ದಿನ; ನಿಮ್ಮ ಅಣ್ಣ–ತಮ್ಮಂದಿರಿಗೆ ಪ್ರೀತಿಯಿಂದ ವಿಶ್ ಮಾಡಲು ಇಲ್ಲಿವೆ ಶುಭಾಶಯ ಸಂದೇಶಗಳು
ಪ್ರತಿ ವರ್ಷ ಮೇ 24ರಂದು ವಿಶ್ವದಾದ್ಯಂತ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ನಮ್ಮ ಬದುಕಿನಲ್ಲಿ ಅಣ್ಣ–ತಮ್ಮಂದಿರ ಪ್ರಾಮುಖ್ಯ ತಿಳಿಸುವ ಈ ದಿನದಂದು ನಿಮ್ಮ ಸಹೋದರರಿಗೆ ವಿಶೇಷವಾಗಿ ವಿಶ್ ಮಾಡಲು ಇಲ್ಲಿವೆ ಶುಭಾಶಯ ಸಂದೇಶಗಳು.
(1 / 10)
ತಂದೆಯಂತೆ ಜವಾಬ್ದಾರಿ ಹೊತ್ತು ನಮ್ಮ ಬದುಕು ಹಸನಾಗಿಸುವ ಅಣ್ಣ, ನೋವು–ನಲಿವಿಗೆ ಜೊತೆಯಾಗಿ ಕಷ್ಟಕ್ಕೆ ಸ್ಪಂದಿಸುವ ತಮ್ಮ... ಹೀಗೆ ನಮ್ಮೆಲ್ಲರ ಬದುಕಿನಲ್ಲೂ ಸಹೋದರರ ಪಾತ್ರ ಮಹತ್ವದ್ದು. ಸಹೋದರರ ಪ್ರಾಮುಖ್ಯವನ್ನು ತಿಳಿಸುವ ಹಾಗೂ ಅವರ ಮಹತ್ವವನ್ನು ಅರ್ಥ ಮಾಡಿಸುವ ಸಲುವಾಗಿ ಪ್ರತಿವರ್ಷ ಮೇ 24 ಕ್ಕೆ ರಾಷ್ಟ್ರೀಯ ಸಹೋದರರ ದಿನವನ್ನು ಆಚರಿಸಲಾಗುತ್ತದೆ. ಇಂದು ರಾಷ್ಟ್ರೀಯ ಸಹೋದರರ ದಿನವಿದ್ದು, ನಿಮ್ಮ ಅಣ್ಣ–ತಮ್ಮನಿಗೆ ವಿಶ್ ಮಾಡಲು ಇಲ್ಲಿವೆ ಶುಭಾಶಯ ಸಂದೇಶಗಳು.
(PC: All image Canva)(2 / 10)
ರಾಷ್ಟ್ರೀಯ ಸಹೋದರರ ದಿನದ ಶುಭಾಶಯಗಳು ನಿನಗೆ. ಸದಾ ನನಗೆ ಶ್ರೀರಕ್ಷೆಯಾಗಿ ನನ್ನ ಬೆನ್ನ ಹಿಂದೆ ಇರುವ ಶಕ್ತಿಗೆ ವಿಶೇಷ ಥ್ಯಾಂಕ್ಸ್. ಲವ್ ಯು. ನೀನು ನನ್ನ ರಾಕ್ ಸ್ಟಾರ್.
(3 / 10)
ನೀನು ನಿಜಕ್ಕೂ ಅದ್ಭುತ ಸಹೋದರ, ನಿನ್ನ ಬದುಕು ಸದಾ ಸಂತೋಷ, ನೆಮ್ಮದಿಯಿಂದ ತುಂಬಿರಲಿ. ನಗು ಎಂದೆಂದಿಗೂ ನಿನ್ನ ಮುಖದ ಮೇಲಿರಲಿ. ಸಹೋದರರ ದಿನದ ಶುಭಾಶಯ
(4 / 10)
ನನ್ನೆಲ್ಲಾ ಕಷ್ಟ–ಸುಖಗಳಲ್ಲಿ ಜೊತೆ ನಿಲ್ಲುವ ಜೀವ ಎಂದರೆ ಅದು ನೀನು, ನಮ್ಮ ಬಾಂಧವ್ಯ ಎಂದೆಂದಿಗೂ ಹೀಗೆ ಇರಲಿ. ನಿನಗೆ ರಾಷ್ಟ್ರೀಯ ಸಹೋದರರ ದಿನದ ಶುಭಾಶಯ
(5 / 10)
ನನ್ನ ಬದುಕನ್ನು ಇರುವುದಕ್ಕಿಂತ ಸುಂದರವಾಗಿಸಿದ್ದಕ್ಕೆ ಧನ್ಯವಾದ, ಏಳೇಳು ಜನ್ಮಕ್ಕೂ ನೀನೇ ನನಗೆ ಸಹೋದರನಾಗಿ ಹುಟ್ಟಬೇಕು. ಲವ್ ಯೂ ಫಾರ್ ಎವರ್. ನನ್ನ ಪ್ರೀತಿ ಅಣ್ಣ/ ತಮ್ಮನಿಗೆ ಸಹೋದರರ ದಿನದ ಶುಭಾಶಯಗಳು
(6 / 10)
ಈ ವಿಶೇಷ ದಿನದಂದು ನೀನು ನನಗೆ, ನನ್ನ ಬದುಕಿಗೆ ಎಷ್ಟು ಮುಖ್ಯ ಎಂಬುದನ್ನು ಹೇಳುತ್ತಿದ್ದೇನೆ. ನೀನಿದ್ದರಷ್ಟೇ ಈ ಬದುಕು ಸುಂದರ. ಸಹೋದರರ ದಿನ ವಿಶೇಷ ಶುಭಾಶಯ.
(7 / 10)
ಈ ಜಗತ್ತಿನ ಬೆಸ್ಟ್ ಸಹೋದರನಿಗೆ ರಾಷ್ಟ್ರೀಯ ಸಹೋದರರ ದಿನದ ಶುಭಾಶಯ. ನಿಮ್ಮ ಬದುಕಿನಲ್ಲಿ ಯಶಸ್ಸು, ಸಂತೋಷ ತುಂಬಿರಲಿ. ಎಂದೆಂದಿಗೂ ನಿನ್ನನ್ನು ಪ್ರೀತಿಸುವ ಜೀವವಿದು ಮೈ ಡಿಯರ್
(8 / 10)
ನಮ್ಮ ನಡುವಿನ ಬಾಂಧವ್ಯಕ್ಕೆ ಬೆಲೆ ಕಟ್ಟಲಾಗದು, ಆ ಬಂಧವನ್ನು ಮುರಿಯಲು ಆಗದು. ಹೃದಯ ತುಂಬಿ ನಿನಗೆ ಒಳಿತಾಗಲಿ ಎಂದು ಹಾರೈಸುತ್ತೇನೆ, ಸಹೋದರರ ದಿನದ ಶುಭಾಶಯ
(9 / 10)
ಈ ಬದುಕು ನಮ್ಮನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತದೋ ಗೊತ್ತಿಲ್ಲ. ಅದೇನೇ ಇರಲಿ ಈ ಬದುಕಿಗೆ ನೀನೇ ನನ್ನ ಬೆಸ್ಟ್ ಸಹೋದರ, ಬೆಸ್ಟ್ ಫ್ರೆಂಡ್, ನನಗೆ ಸರ್ವಸ್ವವೂ ನೀನೆ. ನಿನಗೆ ರಾಷ್ಟ್ರೀಯ ಸಹೋದರರ ದಿನದ ಶುಭಾಶಯ
ಇತರ ಗ್ಯಾಲರಿಗಳು