Malikappuram OTT: ಅತ್ಯುತ್ತಮ ಬಾಲನಟ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದ ಬಾಲಕ ಶ್ರೀಪತ್ ಯಾರು? ಮಾಳಿಗಪುರಂ ಸಿನಿಮಾ ನೆನಪಿದೆಯೇ
- 70th National Film Awards: ಮಾಳಿಗಪುರಂ ಸೇರಿದಂತೆ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಾಲನಟ ಶ್ರೀಪಾತ್‌ಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿದೆ. ಶ್ರೀಪತ್ ಮತ್ತು ಈತ ನಟಿಸಿರುವ ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.
- 70th National Film Awards: ಮಾಳಿಗಪುರಂ ಸೇರಿದಂತೆ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಾಲನಟ ಶ್ರೀಪಾತ್‌ಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿದೆ. ಶ್ರೀಪತ್ ಮತ್ತು ಈತ ನಟಿಸಿರುವ ಸಿನಿಮಾಗಳನ್ನು ನೆನಪಿಸಿಕೊಳ್ಳೋಣ.
(1 / 7)
National Film Awards 2024: ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆಯುವುದು ಸಿನಿಮಾ ಕಲಾವಿದರ ದೊಡ್ಡ ಕನಸು. ಅಪರೂಪಕ್ಕೆ ಇಂತಹ ದೊಡ್ಡ ಪ್ರಶಸ್ತಿ ಮಕ್ಕಳಿಗೂ ದೊರಕುವುದುಂಟು. 70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟವಾಗಿದ್ದು, ಈ ಸಮಯದಲ್ಲಿ ಶ್ರೀಪತ್ ಎಂಬ ಬಾಲಕ ಅತ್ಯುತ್ತಮ ಬಾಲನಟ ಪ್ರಶಸ್ತಿಗೆ (Best Child Artist) ಭಾಜನನಾಗಿದ್ದಾನೆ. ಈತ ನಟಿಸಿರುವ ಮಾಳಿಗಪುರಂ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿದ್ದು, ಒಟಿಟಿ ಸಿನಿಮಾ ಪ್ರಿಯರು ನೋಡಬಹುದು.
(2 / 7)
ಶ್ರೀಪತ್ ಹಲವು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾನೆ. ಅವುಗಳಲ್ಲಿ ಗಮನ ಸೆಳೆಯುವುದು ಮಾಳಿಗಪುರಂ. ಬಾಲಕಿಯೊಬ್ಬಳಿಗೆ ಶಬರಿಮಲೆಗೆ ಹೋಗಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಬೇಕೆಂದು ಕನಸು. ಆಕೆ ಮತ್ತು ಆಕೆಯ ಗೆಳೆಯ ಜತೆಯಾಗಿ ಈ ಯಾತ್ರೆ ಕೈಗೊಳ್ಳುತ್ತಾರೆ.
(3 / 7)
ಉಣ್ಣಿ ಮುಕುಂದನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಾಳಿಗಪುರಂ ಸಿನಿಮಾದಲ್ಲಿ ಶ್ರೀಪಾತ್ ಬಾಲನಟನಾಗಿ ನಟಿಸಿದ್ದಾನೆ. ಇದೀಗ ಈತನ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ದೊರಕಿದೆ. ಮಾಲಿಗಪುರಂನಲ್ಲಿ ಮಕ್ಕಳಾಗಿ ದೇವಾನಂದ ಮತ್ತು ಶ್ರೀಪತ್ ನಟಿಸಿದ್ದರು.
(4 / 7)
ಕಣ್ಣೂರಿನ ರಾಜೇಶ್ ಮತ್ತು ರಸ್ನಾ ಎಂಬ ಶಿಕ್ಷಕ ದಂಪತಿಯ ಪುತ್ರನಾದ ಶ್ರೀಪತ್ ಈಗ ಐದನೇ ತರಗತಿ ವಿದ್ಯಾರ್ಥಿ. ಟಿಕ್ ಟಾಕ್ ವಿಡಿಯೋ ಮೂಲಕ ಗಮನ ಸೆಳೆದಿದ್ದ ಶ್ರೀಪತ್, ಮ್ಯೂಸಿಕ್ ಆಲ್ಬಂ ಮತ್ತು ಸಾಕ್ಷ್ಯಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ.
(5 / 7)
ಕುಮಾರಿ ಸಿನಿಮಾದಲ್ಲಿ ಚೋಕನ್ ಪಾತ್ರವನ್ನು ನಿರ್ವಹಿಸಿದ ನಂತರ, ಮಲ್ಲಿಕಾಪುರಂನಲ್ಲಿ ಪಿಯುಶುನ್ನಿಯಾಗಿ ಮಾರ್ಪಟ್ಟ ಶ್ರೀಪತ್ ತಮ್ಮ ಹಾಸ್ಯಮಯ ದೇಹ ಭಾಷೆ ಮತ್ತು ಸಂಭಾಷಣೆಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದನು.
(6 / 7)
ಕೇರಳದ ಕಣ್ಣೂರಿನ ಈ ಬಾಲಕ ಮಾಳಿಗಪುರಂ ಮಾತ್ರವಲ್ಲದೆ ಕುಮಾರಿ, ಇಬ್ಲಿಸ್, ಸುಮತಿ ವಲವು ಸಿನಿಮಾಗಳಲ್ಲಿಯೂ ನಟಿಸಿದ್ದಾನೆ. ಮಲ್ಲಿಗಪುರುಂ ಸಿನಿಮಾವು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು.
ಇತರ ಗ್ಯಾಲರಿಗಳು