Tiger Census 2026: ಹುಲಿ ಗಣತಿ 6ನೇ ಆವೃತ್ತಿಗೆ ಭಾರತದಲ್ಲಿ ಪ್ರಾಧಿಕಾರ ಸಿದ್ದತೆ, ಮುಂದಿನ ವರ್ಷ ದೊಡ್ಡಸ್ವಾಮಿ ನಿಖರ ಸಂಖ್ಯೆಗೆ ಹುಡುಕಾಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tiger Census 2026: ಹುಲಿ ಗಣತಿ 6ನೇ ಆವೃತ್ತಿಗೆ ಭಾರತದಲ್ಲಿ ಪ್ರಾಧಿಕಾರ ಸಿದ್ದತೆ, ಮುಂದಿನ ವರ್ಷ ದೊಡ್ಡಸ್ವಾಮಿ ನಿಖರ ಸಂಖ್ಯೆಗೆ ಹುಡುಕಾಟ

Tiger Census 2026: ಹುಲಿ ಗಣತಿ 6ನೇ ಆವೃತ್ತಿಗೆ ಭಾರತದಲ್ಲಿ ಪ್ರಾಧಿಕಾರ ಸಿದ್ದತೆ, ಮುಂದಿನ ವರ್ಷ ದೊಡ್ಡಸ್ವಾಮಿ ನಿಖರ ಸಂಖ್ಯೆಗೆ ಹುಡುಕಾಟ

  • Tiger Census 2026: ಭಾರತಾದ್ಯಂತ ಆಯಾ ರಾಜ್ಯಗಳ ಅರಣ್ಯ ಇಲಾಖೆ ಮೂಲಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹುಲಿ ಗಣತಿಗೆ ತಯಾರಿಯನ್ನು ವರ್ಷದ ಮೊದಲೇ ಆರಂಭಿಸಿದೆ.

ಭಾರತದಲ್ಲಿ ನಾಲ್ಕು ವರ್ಷಗಳಿಗೊಮ್ಮೆ ಹುಲಿ ಗಣತಿ ನಡೆಸಲಾಗುತ್ತಿದೆ. ಆರನೇ ಆವೃತ್ತಿಯ ಹುಲಿ ಗಣತಿ ಮುಂದಿನ ವರ್ಷ ನಡೆಯಲಿದೆ,
icon

(1 / 7)

(Anil antarasanthe)

ನಾಲ್ಕು ವರ್ಷದ ಹಿಂದೆ ಅಂದರೆ 2022 ರಲ್ಲಿ ಭಾರತಾದ್ಯಂತ ಹುಲಿ ಗಣತಿ ನಡೆಸಲಾಗಿತ್ತು. ಹುಲಿ ಗಣತಿ ವರದಿಯನ್ನು ಮರು ವರ್ಷ ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದರು.
icon

(2 / 7)

(Mithun )

ಹುಲಿ ಗಣತಿ ನಡೆಯುವ ವರ್ಷದ ಮುನ್ನಾ ವರ್ಷ ಅರಣ್ಯ ಇಲಾಖೆ ಅಧಿಕಾರಿಗಳು. ಸಿಬ್ಬಂದಿ, ಸ್ವಯಂ ಸೇವಾ ಸಂಘಟನೆ ಪ್ರಮುಖರು, ಸ್ವಯಂ ಸೇವಕರಿಗೆ ತರಬೇತಿ ನೀಡಲಾಗುತ್ತದೆ. ಅದು ಸದ್ಯದಲ್ಲೇ ಎಲ್ಲಾ ರಾಜ್ಯಗಳಲ್ಲಿ ಶುರುವಾಗಲಿದೆ.
icon

(3 / 7)

(jayant Sharma)

ದೆಹಲಿಯಲ್ಲಿ ಮಂಗಳವಾರ ಹಾಗೂ ಬುಧವಾರ ನಡೆದ ಹುಲಿ ಯೋಜನೆ ಕರ್ನಾಟಕದ ಎಲ್ಲಾ ನಿರ್ದೇಶಕರ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ವೇಳೆ ಹುಲಿ ಗಣತಿ ಹೊತ್ತಿಯನ್ನು ಬಿಡುಗಡೆ ಮಾಡಲಾಯಿತು.
icon

(4 / 7)

ಆಯಾ ರಾಜ್ಯಗಳ ಅರಣ್ಯ ಇಲಾಖೆಗಳು, ಹುಲಿ ಯೋಜನೆ ನಿರ್ದೇಶಕರು, ಹುಲಿ ಸಂರಕ್ಷಿತ ಪ್ರದೇಶಗಳ ಮುಖ್ಯಸ್ಥರು ತಯಾರಿಯನ್ನು ಆರಂಭಿಸಬೇಕು. ಮುಂದಿನ ವರ್ಷ ವ್ಯವಸ್ಥಿತವಾಗಿ ಗಣತಿ ನಡೆಸಬೇಕು ಎನ್ನುವ ಸೂಚನೆಗಳನ್ನು ನೀಡಲಾಯಿತು.
icon

(5 / 7)

ಕರ್ನಾಟಕದ ಹುಲಿ ಯೋಜನೆ ಕ್ಷೇತ್ರ ನಿರ್ದೇಶಕರಾಗಿರುವ ಡಾ.ಪಿ.ರಮೇಶ್‌ಕುಮಾರ್‌, ಭದ್ರಾ ಹುಲಿ ಯೋಜನೆ ನಿರ್ದೇಶಕ ಪುಲಕಿತ್‌ ಮೀನಾ ಸಹಿತ ಹಲವು ರಾಜ್ಯಗಳ ಅಧಿಕಾರಿಗಳು ಎನ್‌ಟಿಸಿಎ ಕಾರ್ಯಕ್ರಮದಲ್ಲಿ ಭಾಗಿಯಾದರು.
icon

(6 / 7)

ಭಾರತದಾದ್ಯಂತ ಈಗಾಗಲೇ ಐದು ಆವೃತ್ತಿಗಳಲ್ಲಿ ಹುಲಿ ಗಣತಿ ನಡೆದು ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ. 2022ರ ಗಣತಿಯಲ್ಲಿ 3,167 ಹುಲಿಗಳಿರುವುದು ಪತ್ತೆಯಾಗಿತ್ತು. ಈಗ ಆರನೇ ಆವೃತ್ತಿ ಹುಲಿ ಗಣತಿಯಲ್ಲೂ ಹುಲಿ ಸಂಖ್ಯೆ ಏರಿಕೆ ಕಾಣಬಹುದು,
icon

(7 / 7)

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.

ಇತರ ಗ್ಯಾಲರಿಗಳು