ಬದುಕಿನಲ್ಲಿ ಒಳಿತು ಕೋರಿ ಈ ನವರಾತ್ರಿ ವೇಳೆ ದೇವಿಯನ್ನು ಆರಾಧಿಸುತ್ತೀರಾದರೆ, ನೆರವಾದೀತು ನವದುರ್ಗೆಯರ ಈ 9 ಪ್ರಾರ್ಥನಾ ಮಂತ್ರ
ಬದುಕಿನಲ್ಲಿ ಒಳಿತಾಗಲಿ, ಪ್ರಗತಿ ಉಂಟಾಗಲಿ ಎಂದು ದೇವರನ್ನು ಬೇಡದವರು ವಿರಳ. ನವರಾತ್ರಿ ಸಮೀಪದಲ್ಲಿದ್ದು, ದೇವಿಯ ಆರಾಧನೆಗೆ ತಯಾರಿ ನಡೆದಿದೆ. ಬದುಕಿನಲ್ಲಿ ಒಳಿತು ಕೋರಿ ಈ ನವರಾತ್ರಿಯ ವೇಳೆ ದೇವಿಯನ್ನು ಆರಾಧಿಸುತ್ತೀರಾದರೆ, ನವದುರ್ಗೆಯರ ಈ 9 ಪ್ರಾರ್ಥನಾ ಮಂತ್ರಗಳು ನಿಮ್ಮ ನೆರವಿಗೆ ಬಂದೀತು. ಆ ಮಂತ್ರಗಳು ಇಲ್ಲಿವೆ.
(1 / 10)
ನವರಾತ್ರಿಯಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ. ಶೈಲಪುತ್ರೀ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರೀ, ಮಹಾಗೌರಿ, ಸಿದ್ಧಿಧಾತ್ರೀ ಎಂಬ 9 ರೂಪಗಳಲ್ಲಿ ಆರಾಧಿಸಲಾಗುತ್ತದೆ. ಎಲ್ಲರಿಗೂ ಪೂಜೆ ಮಾಡಿಸುವ ಶಕ್ತಿ ಇರಲಾರದು. ದೇವಿಯನ್ನು ಒಲುಮೆ ಪಡೆಯಲು ಮನದುಂಬಿ ಪ್ರಾರ್ಥನೆ ಮಾಡಿದರೆ ಸಾಕು. ಆಯಾ ಸ್ವರೂಪದ ದೇವಿಯ ಪ್ರಾರ್ಥನಾ ಮಂತ್ರವನ್ನು ಶಕ್ತ್ಯಾನುಸಾರ ಪಠಿಸಿದರೆ ಸಾಕು. ಆ ಮಂತ್ರಗಳ ವಿವರ ಈ ಫೋಟೋ ಗ್ಯಾಲರಿಯಲ್ಲಿದೆ.
(2 / 10)
ಶೈಲಪುತ್ರೀ ದೇವಿಯ ಪ್ರಾರ್ಥನಾ ಮಂತ್ರ: ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತ ಶೇಖರಾಂ |ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಂ ||
(3 / 10)
ಬ್ರಹ್ಮಚಾರಿಣೀ ದೇವಿಯ ಪ್ರಾರ್ಥನಾ ಮಂತ್ರ: ದಧಾನಾ ಕರಪದ್ಮಾಭ್ಯಾಂ ಅಕ್ಷಮಾಲಾ ಕಮಂಡಲೂ |ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||
(4 / 10)
ಚಂದ್ರಘಂಟಾ ದೇವಿಯ ಪ್ರಾರ್ಥನಾ ಮಂತ್ರ: ಪಿಂಡ ಜಪ್ರವರಾರೂಢಾ ಚಂಡ ಕೋಪಾಸ್ತ್ರಕೈರ್ಯುತಾ |ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
(5 / 10)
ಕೂಷ್ಮಾಂಡಾ ದೇವಿಯ ಪ್ರಾರ್ಥನಾ ಮಂತ್ರ: ಸುರಾ ಸಂಪೂರ್ಣ ಕಲಶಂ ರುಧಿರಾಪ್ಲುತಮೇವ ಚ |ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
(6 / 10)
ಸ್ಕಂದಮಾತಾ ದೇವಿಯ ಪ್ರಾರ್ಥನಾ ಮಂತ್ರ: ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
(7 / 10)
ಕಾತ್ಯಾಯನೀ ದೇವಿಯ ಪ್ರಾರ್ಥನಾ ಮಂತ್ರ: ಚಂದ್ರ ಹಾಸೋಜ್ಜ್ವಲಕರಾ ಶಾರ್ದೂಲ ವರವಾಹನಾ |ಕಾತ್ಯಾಯನೀ ಶುಭಂ ದದ್ಯಾದ್ದೇವೀ ದಾನವಘಾತಿನೀ ||
(8 / 10)
ಕಾಳರಾತ್ರೀ ದೇವಿಯ ಪ್ರಾರ್ಥನಾ ಮಂತ್ರಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತ ಶರೀರಿಣೀ ||ವಾಮಪಾದೋಲ್ಲಸಲ್ಲೋ ಹಲತಾ ಕಂಟಕ ಭೂಷಣಾ |ವರ್ಧನ ಮೂರ್ಧ್ವಜಾ ಕೃಷ್ಣಾ ಕಾಳರಾತ್ರಿ ಭಯಂಕರೀ ||
(9 / 10)
ಮಹಾಗೌರಿಯ ಪ್ರಾರ್ಥನಾ ಮಂತ್ರ: ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |ಮಹಾಗೌರೀ ಶುಭಂ ದದ್ಯಾನ್ಮಹಾದೇವ ಪ್ರಮೋದದಾ ||
ಇತರ ಗ್ಯಾಲರಿಗಳು