ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಓವರ್​​​ನಲ್ಲಿ 6 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದ ನೇಪಾಳದ ದೀಪೇಂದ್ರ ಟಿ20 ರ್‍ಯಾಂಕಿಂಗ್​ನಲ್ಲಿ ಭರ್ಜರಿ ಏರಿಕೆ

ಓವರ್​​​ನಲ್ಲಿ 6 ಸಿಕ್ಸರ್​ ಸಿಡಿಸಿ ದಾಖಲೆ ಬರೆದಿದ್ದ ನೇಪಾಳದ ದೀಪೇಂದ್ರ ಟಿ20 ರ್‍ಯಾಂಕಿಂಗ್​ನಲ್ಲಿ ಭರ್ಜರಿ ಏರಿಕೆ

  • T20 Ranking : ಕತಾರ್​​​ನ ಕಮ್ರಾನ್ ಖಾನ್ ಅವರ ಕೊನೆಯ ಓವರ್​​ನ ಆರು ಎಸೆತಗಳಿಗೆ 6 ಸಿಕ್ಸರ್​ ಬಾರಿಸಿ ದಾಖಲೆ ಬರೆದಿದ್ದ ದೀಪೇಂದ್ರ ಸಿಂಗ್ ಐರಿ, ಟಿ20 ರ್ಯಾಂಕಿಂಗ್​ನಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. 

ನೇಪಾಳದ ಆಲ್​ರೌಂಡರ್​ ದೀಪೇಂದ್ರ ಸಿಂಗ್ ಐರಿ ಇತ್ತೀಚೆಗೆ ಬಿಡುಗಡೆಯಾದ ಐಸಿಸಿ ಪುರುಷರ ಟಿ20 ಆಟಗಾರರ ಶ್ರೇಯಾಂಕದಲ್ಲಿ ಗಮನಾರ್ಹ ಜಿಗಿತವನ್ನು ಸಾಧಿಸಿದ್ದಾರೆ. ಕತಾರ್ ವಿರುದ್ಧದ ಎಸಿಸಿ ಪುರುಷರ ಟಿ20 ಪ್ರೀಮಿಯರ್ ಕಪ್ ಪಂದ್ಯದಲ್ಲಿ ಒಂದು ಓವರ್​​ನಲ್ಲಿ ಆರು ಸಿಕ್ಸರ್​​ಗಳನ್ನು ಬಾರಿಸಿದ್ದಕ್ಕೆ ಸಿಂಗ್​ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದರು. ಪ್ರಸ್ತುತ ಶ್ರೇಯಾಂಕದಲ್ಲಿ ದೀಪೇಂದ್ರ 11ನೇ ಸ್ಥಾನದಲ್ಲಿದ್ದಾರೆ.
icon

(1 / 5)

ಕಮ್ರಾನ್ ಖಾನ್ ಅವರ ಕೊನೆಯ ಓವರ್​​​ನಲ್ಲಿ ದೀಪೇಂದ್ರ ಸಿಂಗ್ ಐರಿ ಅವರು 6 ಸಿಕ್ಸರ್​ಗಳನ್ನು ಬಾರಿಸಿದರು. ಅವರು ಕೇವಲ 30 ಎಸೆತಗಳಲ್ಲಿ ಅಜೇಯ 64 ರನ್ ಗಳಿಸಿದರು. ಈ ಪಂದ್ಯವನ್ನು ನೇಪಾಳ 32 ರನ್ ಗಳಿಂದ ಗೆದ್ದುಕೊಂಡಿತು. ಟಿ20 ಬ್ಯಾಟ್ಸ್​​ಮನ್​​ಗಳ ರ್ಯಾಂಕಿಂಗ್​​ನಲ್ಲಿ 16 ಸ್ಥಾನ ಜಿಗಿದು 61ನೇ ಸ್ಥಾನಕ್ಕೇರಿದ್ದಾರೆ. ಟಿ20 ಆಲ್​ರೌಂಡರ್​​ ರ್ಯಾಂಕಿಂಗ್​ನಲ್ಲಿ ದೀಪೇಂದ್ರ 14 ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ಪಡೆದಿದ್ದಾರೆ.
icon

(2 / 5)

ಐರಿ ತಂಡದ ಸಹ ಆಟಗಾರ ಆಸಿಫ್ ಶೇಖ್ ಕೂಡ ಶ್ರೇಯಾಂಕದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. 22 ವರ್ಷದ ಆರಂಭಿಕ ಆಟಗಾರ ಪಂದ್ಯಾವಳಿಯಲ್ಲಿ ಸ್ಥಿರ ಪ್ರದರ್ಶನದಿಂದಾಗಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ 36 ಸ್ಥಾನಗಳ ಏರಿಕೆ ಕಂಡು 75ನೇ ಸ್ಥಾನಕ್ಕೆ ತಲುಪಿದ್ದಾರೆ. ಇದರಲ್ಲಿ ಮಲೇಷ್ಯಾ, ಕತಾರ್ ಮತ್ತು ಹಾಂಗ್ ಕಾಂಗ್ ವಿರುದ್ಧ ಕ್ರಮವಾಗಿ 32, 52 ಮತ್ತು 40 ರನ್ ಸಿಡಿಸಿದ್ದರು.
icon

(3 / 5)

ನೇಪಾಳದ ಮತ್ತೊಬ್ಬ ಯುವ ಆಟಗಾರ ಕುಸಾಲ್ ಮಲ್ಲಾ ಟಿ20 ಆಲ್​ರೌಂಡರ್​ ರ್ಯಾಂಕಿಂಗ್​​ನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಕತಾರ್ ವಿರುದ್ಧ 35 ರನ್ ಮತ್ತು ಒಂದು ವಿಕೆಟ್ ಕೊಡುಗೆ ನೀಡಿದ 20 ವರ್ಷದ ಆಟಗಾರ ಐದು ಸ್ಥಾನ ಮೇಲಕ್ಕೇರಿ 27ನೇ ಸ್ಥಾನದಲ್ಲಿದ್ದಾರೆ.
icon

(4 / 5)

ಟಿ20 ಬ್ಯಾಟಿಂಗ್ ರ್ಯಾಂಕಿಂಗ್​​ನಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಬೌಲಿಂಗ್ ರ್ಯಾಂಕಿಂಗ್​​ನಲ್ಲಿ ಇಂಗ್ಲೆಂಡ್​ನ ಆದಿಲ್ ರಶೀದ್ ಅಗ್ರಸ್ಥಾನದಲ್ಲಿದ್ದಾರೆ. ಆಲ್​ರೌಂಡರ್​ ಶ್ರೇಯಾಂಕದಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ನಂ.1 ಸ್ಥಾನದಲ್ಲಿದ್ದಾರೆ.
icon

(5 / 5)

IPL_Entry_Point

ಇತರ ಗ್ಯಾಲರಿಗಳು