ಕಂಗುವಾ, ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸೇರಿದಂತೆ ಮುಂಬರುವ ಆಕ್ಷನ್ ಸಿನಿಮಾಗಳ ಲಿಸ್ಟ್ ಇಲ್ಲಿದೆ
ಪ್ರತಿ ಶುಕ್ರವಾರ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತವೆ. ತಮ್ಮ ಮೆಚ್ಚಿನ ಸ್ಟಾರ್‌ಗಳ ಹೊಸ ಸಿನಿಮಾ ನೋಡಲು ಅಭಿಮಾನಿಗಳು ಕೂಡಾ ಕಾತರದಿಂದ ಕಾಯುತ್ತಾರೆ.
(1 / 7)
ಅಕ್ಟೋಬರ್‌ನಲ್ಲಿ ಕೂಡಾ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಅವುಗಳಲ್ಲಿ ಬಹುತೇಕ ಆಕ್ಷನ್ ಸಿನಿಮಾಗಳಿವೆ. ಮುಂಬರುವ ಆಕ್ಷನ್ ಚಿತ್ರಗಳ ಪಟ್ಟಿ ಇಲ್ಲಿದೆ.
(2 / 7)
ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದೇಶಭಕ್ತಿಯಿಂದ ಕೂಡಿದ ಈ ಚಿತ್ರದಲ್ಲಿ ನೀವು ಸಖತ್ ಆಕ್ಷನ್ ನಿರೀಕ್ಷಿಸಬಹುದು. ಸಿನಿಮಾ ಅಕ್ಟೋಬರ್ 11 ರಂದು ತೆರೆ ಕಾಣಲಿದೆ.
(3 / 7)
ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ವೆಟ್ಟೈಯನ್' ಚಿತ್ರ ಅಕ್ಟೋಬರ್ 10 ರಂದು ತೆರೆ ಕಾಣಲಿದೆ. ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಅಭಿಮಾನಿಗಳು ಮತ್ತೊಮ್ಮೆ ರಜನಿಕಾಂತ್ ಅವರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.
(4 / 7)
ಆಲಿಯಾ ಭಟ್ ಅವರನ್ನು 'ಧಾಕಡ್' ಶೈಲಿಯಲ್ಲಿ ನೋಡಲು ಬಾಲಿವುಡ್ ಸಿನಿಮಾಭಿಮಾನಿಗಳು ಸಿದ್ಧರಾಿಗುತ್ತಿದ್ದಾರೆ. 'ಜಿಗ್ರಾ' ಚಿತ್ರ ಅಕ್ಟೋಬರ್ 11 ರಂದು ಬಿಡುಗಡೆಯಾಗುತ್ತಿದೆ.
(5 / 7)
ಹಿಮೇಶ್ ರೇಶಮಿಯಾ ಮತ್ತೊಮ್ಮೆ ಆಕ್ಷನ್ ಹೀರೋ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಸಿನಿಮಾ 'ಬದಾಸ್ ರವಿ ಕುಮಾರ್' ಸಹ ಅಕ್ಟೋಬರ್ 11 ರಂದು ತೆರೆ ಕಾಣುತ್ತಿದೆ.
(6 / 7)
ಸೂರ್ಯ ಅಭಿನಯದ 'ಕಂಗುವ' ಚಿತ್ರ ಥಿಯೇಟರ್‌ಗೆ ಪ್ರವೇಶಿಸಲು ಸಿದ್ಧವಾಗಿದೆ, ಅವರ ಪೋಸ್ಟರ್ ಮತ್ತು ಟೀಸರ್ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಈ ಚಿತ್ರ ನವೆಂಬರ್‌ನಲ್ಲಿ ತೆರೆ ಕಾಣಲಿದೆ. ಮೊದಲು ಈ ಸಿನಿಮಾ ಅಕ್ಟೋಬರ್‌ನಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿತ್ತು. ಅದರೆ ವೆಟ್ಟಾಯನ್ ಕಾರಣದಿಂದ ಸಿನಿಮಾ ರಿಲೀಸ್ ಮುಂದೂಡಲಾಗಿದೆ.
ಇತರ ಗ್ಯಾಲರಿಗಳು