2025 ಸಂಭ್ರಮಾಚರಣೆ: ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದೀರಾ? ನಿಮ್ಮ ಖುಷಿ ದುಪ್ಪಟ್ಟಾಗಲು ಇಲ್ಲಿವೆ ಕೆಲವೊಂದು ಸಲಹೆಗಳು
- ಹೊಸ ವರ್ಷ: 2025 ಹೊಸ ವರ್ಷಕ್ಕೆ ಕೆಲವೇ ಗಂಟೆಗಳು ಉಳಿದಿವೆ. ಇಂದು ವರ್ಷದ ಕೊನೆಯ ದಿನ. 2024ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಎದುರುನೋಡುತ್ತಿದ್ದಾರೆ. ಎಲ್ಲರೂ ಹೊಸ ವರ್ಷದ ಸಂಭ್ರಮಾಚರನೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದಾರೆ. ನಿಮಗಾಗಿ ಕೆಲವೊಂದು ಟಿಪ್ಸ್.
- ಹೊಸ ವರ್ಷ: 2025 ಹೊಸ ವರ್ಷಕ್ಕೆ ಕೆಲವೇ ಗಂಟೆಗಳು ಉಳಿದಿವೆ. ಇಂದು ವರ್ಷದ ಕೊನೆಯ ದಿನ. 2024ಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಜನರು ಎದುರುನೋಡುತ್ತಿದ್ದಾರೆ. ಎಲ್ಲರೂ ಹೊಸ ವರ್ಷದ ಸಂಭ್ರಮಾಚರನೆಯಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದಾರೆ. ನಿಮಗಾಗಿ ಕೆಲವೊಂದು ಟಿಪ್ಸ್.
(1 / 8)
ಹೊಸ ವರ್ಷ ಎಂದರೆ ಪಟಾಕಿ, ಆಹಾರ ಮತ್ತು ಸಂತೋಷ, ಸಂಭ್ರಮಾಚರಣೆ. ಕೆಲವೆಡೆ ಹೊಸ ವರ್ಷದ ದಿನ ಕೆಲವು ಆಟಗಳನ್ನು ಆಡುತ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ.
(2 / 8)
ಗ್ಲೋ-ಇನ್-ದಿ-ಡಾರ್ಕ್ ಆಚರಣೆಯ ಥ್ರಿಲ್ ಅನ್ನು ಆನಂದಿಸಲು ತಡರಾತ್ರಿಯವರೆಗೂ ಪಾರ್ಟಿ ಮಾಡಿ. ನಿಮ್ಮ ಮನೆಯಲ್ಲಿ ನಿಯಾನ್ ಅಲಂಕಾರಗಳು, ಫ್ಲೋರೊಸೆಂಟ್ ದೀಪಗಳು ಮತ್ತು ಗ್ಲಿಟರ್ ಸ್ಟಿಕ್‌ಗಳನ್ನು ಬಳಸಿ. ಮನಸ್ಥಿತಿಯನ್ನು ಸುಧಾರಿಸಲು, ರುಚಿಕರವಾದ ತಿಂಡಿಗಳು ಮತ್ತು ಪಾನೀಯಗಳನ್ನು ಸೇವಿಸುವಾಗ ನಿಮ್ಮ ನೆಚ್ಚಿನ ಹಾಡುಗಳಿಗೆ ನೃತ್ಯ ಮಾಡಿ.
(3 / 8)
ನಿಮಗೆ ಇಷ್ಟವಾದ ಅತಿಥಿಗಳನ್ನು ಮನೆಗೆ ಆಹ್ವಾನಿಸಿ ಮತ್ತು ಅವರೊಂದಿಗೆ ಆಹಾರವನ್ನು ಹಂಚಿಕೊಳ್ಳಿ. ಆದರೆ ಹೊಸ ವರ್ಷದ ಪಾರ್ಟಿಯನ್ನು ಹಾಳು ಮಾಡುವ ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿರಿ. ಇದರಿಂದ ನೀವು ಆರೋಗ್ಯವಾಗಿರಬಹುದು. ಹೊಸ ವರ್ಷದ ಖುಷಿಯನ್ನು ಎಂಜಾಯ್ ಮಾಡಬಹುದು.
(4 / 8)
ಹೊಸ ವರ್ಷದ ಆಚರಣೆಯಲ್ಲಿ ಡ್ರಿಂಕ್ಸ್‌ಗೆ ಕೂಡಾ ಆದ್ಯತೆ ಇರುತ್ತದೆ. ಆದರೆ ನೀವು ಇದೇ ಸಮಯ ಎಂದುಕೊಂಡು ಹೆಚ್ಚಾಗಿ ಮನೆಗೆ ತರಬೇಡಿ, ಅದರ ಬದಲು ಮನೆಯಲ್ಲೇ ರುಚಿಕರವಾದ ಡ್ರಿಂಕ್ಸ್ ತಯಾರಿಸಿಲು ಪ್ರಯತ್ನಿಸಿ, ಮಕ್ಕಳಿಗೂ ಇಷ್ಟವಾಗುವಂತೆ ತಯಾರಿಸಿ.
(5 / 8)
ಕೆಲವರು ಯಾವ ಪಾರ್ಟಿಗಳಲ್ಲಿ ಭಾಗವಹಿಸದೆ, ಹೊಸ ವರ್ಷ ದೇವಸ್ಥಾನಕ್ಕೆ ಹೋಗಲು ಬಯಸುತ್ತಾರೆ. ನೀವೂ ಕೂಡಾ ಇದೇ ರೀತಿ ಅಂದುಕೊಂಡಿದ್ದಲ್ಲಿ ಮನೆಯ ಹತ್ತಿರದಲ್ಲೇ ಇರುವ ದೇವಸ್ಥಾನಗಳಿಗೆ ಕುಟುಂಬ ಸಹಿತ ಹೋಗಿಬನ್ನಿ.
(6 / 8)
ಒಂದು ವೇಳೆ ನಿಮಗೆ ಮೋಜು ಮಸ್ತಿಗಳಲ್ಲಿ ಭಾಗವಹಿಸಲು ಇಷ್ಟವಿಲ್ಲದಿದ್ದರೆ ನಿಮ್ಮ ಆತ್ಮೀಯರೊಂದಿಗೆ ಸಿನಿಮಾಗೆ ಹೋಗಿ ಬನ್ನಿ, ಮನೆಗೆ ವಾಪಸ್ ಬರುವಾಗ ಒಂದೊಳ್ಳೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿ, ಮನೆಯವರಿಗೂ ಏನಾದರೂ ತೆಗೆದುಕೊಂಡು ಬನ್ನಿ.
(7 / 8)
ನೀವೇ ಮನೆಯಲ್ಲಿ ಏನಾದರೂ ಸಿಹಿ ಅಥವಾ ಹೊಸ ತಿಂಡಿಯನ್ನು ಟ್ರೈ ಮಾಡಿ ನಿಮ್ಮ ಮನೆಯವರಿಗೆ ಬಡಿಸಿ ಅವರನ್ನು ಇಂಪ್ರೆಸ್ ಮಾಡಿ, ಸಾಧ್ಯವಾದರೆ ಕುಟುಂಬದ ಸದಸ್ಯರು ಹೊಸ ವರ್ಷದ ದಿನ ಮನೆಯಲ್ಲೇ ಇರುವಂತೆ ಮನವಿ ಮಾಡಿ, ಅವರೊಂದಿಗೆ ಕಾಲ ಕಳೆಯಿರಿ.
ಇತರ ಗ್ಯಾಲರಿಗಳು