New Year 2025: ಹೊಸ ವರ್ಷದ ಸಂಭ್ರಮಾಚರಣೆಗೆ ಪ್ರವಾಸಕ್ಕೆ ಹೊರಟಿದ್ದೀರಾ, ಕರ್ನಾಟಕದ ಈ ಪ್ರದೇಶಗಳಲ್ಲೆಲ್ಲಾ ನಿಷೇಧವಿದೆ ಗಮನಿಸಿ
- ಹೊಸ ವರ್ಷಾರಣೆಗೆ ಬೆಂಗಳೂರಿನ ನಂದಿಬೆಟ್ಟ, ಮೈಸೂರಿನ ಚಾಮುಂಡಿಬೆಟ್ಟ, ಚಿಕ್ಕಮಗಳೂರು ಮುಳ್ಳಯ್ಯನಗಿರಿ, ಬಂಡೀಪುರ ಸಹಿತ ಹಲವು ಕಡೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅದರ ಮಾಹಿತಿ ಇಲ್ಲಿದೆ.
- ಹೊಸ ವರ್ಷಾರಣೆಗೆ ಬೆಂಗಳೂರಿನ ನಂದಿಬೆಟ್ಟ, ಮೈಸೂರಿನ ಚಾಮುಂಡಿಬೆಟ್ಟ, ಚಿಕ್ಕಮಗಳೂರು ಮುಳ್ಳಯ್ಯನಗಿರಿ, ಬಂಡೀಪುರ ಸಹಿತ ಹಲವು ಕಡೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಅದರ ಮಾಹಿತಿ ಇಲ್ಲಿದೆ.
(1 / 7)
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಕಾವೇರಿ ತೀರದ ಬಲಮುರಿ ಹಾಗೂ ಎಡಮುರಿಗೂ ಮಂಗಳವಾರದಂದು ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಇಲ್ಲಿಯೂ ನಿಷೇಧವನ್ನು ಹೇರಲಾಗಿದೆ.
(2 / 7)
ಬೆಂಗಳೂರು ಹೊರ ವಲಯದಲ್ಲಿರುವ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಬೆಟ್ಟ ಪ್ರವೇಶಕ್ಕೆ ಯಾರಿಗೂ ಅವಕಾಶ ಇರುವುದಿಲ್ಲ. ಡಿ.31ರ ಬೆಳಿಗ್ಗೆ 6 ಗಂಟೆಯಿಂದ ಜನವರಿ 1 ಸಂಜೆ 7 ಗಂಟೆಯವರೆಗೆ ನಿರ್ಬಂಧ ಹೇರಲಾಗಿದೆ. ಬೆಟ್ಟಕ್ಕೆ ಪ್ರವೇಶ ನೀಡುವ ಗೇಟ್‌ಗಳನ್ನು ಬಂದ್ ಮಾಡಲಾಗುತ್ತದೆ.
(3 / 7)
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ. ಡಿ.31 ಮತ್ತು 2025ರ ಜ.1 ರಂದು ಬಂಡೀಪುರ ಅರಣ್ಯ ಇಲಾಖೆ ವಸತಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಆದರೆ ಎಂದಿನಂತೆ ಸಫಾರಿ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ.
(4 / 7)
ಬೆಂಗಳೂರು ಭಾಗದಿಂದ ಹೆಚ್ಚು ಪ್ರವಾಸಿಗರು ಬರುವ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಾವೇರಿ ತೀರದಲ್ಲಿರುವ ಮುತ್ತತ್ತಿ ಪ್ರವಾಸಿ ತಾಣದಲ್ಲೂ ನಿಷೇಧವನ್ನು ಒಂದು ದಿನದ ಮಟ್ಟಿಗೆ ಮಂಡ್ಯ ಪೊಲೀಸ್ ಇಲಾಖೆಯಿಂದ ಜಾರಿಗೊಳಿಸಲಾಗಿದೆ.
(5 / 7)
ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ಪ್ರಮುಖ ಪ್ರವಾಸಿ ತಾಣಗಳಿಗೆ 2024ರ ಡಿಸೆಂಬರ್ 31ರ ಸಂಜೆ 6 ರಿಂದ 2025 ರ ಜನವರಿ 1 ಬೆಳಿಗ್ಗೆ 6ಗಂಟೆವರೆಗೆ ನಿರ್ಬಂಧ ವಿಧಿಸಲಾಗಿದೆ. ರೇವ್ ಪಾರ್ಟಿ, ಡ್ರಗ್ಸ್ ಪಾರ್ಟಿ ಆಚರಿಸದಂತೆ ಕಟ್ಟೆಚ್ಚರ ವಹಿಸಲಾಗಿದೆ. ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಪ್ರವಾಸಿ ತಾಣದ ಪ್ರದೇಶದಲ್ಲಿ ನಿಯೋಜಿಸಲಾಗುತ್ತದೆ ಎಂದು ಚಿಕ್ಕಮಗಳೂರು ಜಿಲ್ಲಾ ಎಸ್ ಪಿ ವಿಕ್ರಮ್ ಆಮ್ಟೆ ಹೇಳಿದ್ದಾರೆ.
(6 / 7)
ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಹಿನ್ನೀರಿನಲ್ಲೂ ಮಂಗಳವಾರ ಸಂಜೆ ನಂತರ ಸಾರ್ವಜನಿಕರ ಪ್ರವೇಶ ಬಂದ್ ಮಾಡಲಾಗಿದೆ. ಇಲ್ಲಿ ಅಕ್ರಮವಾಗಿ ಪ್ರವೇಶಿಸಿ ಯಾವುದೇ ಚಟುವಟಿಕೆ ನಡೆಸಿದವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇತರ ಗ್ಯಾಲರಿಗಳು