ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ, ಬೆಂಗಳೂರಿಗರ ಸಂಭ್ರಮ, ಸಡಗರ, ಸಾಮಾನ್ಯರ ನೋಟದಲ್ಲಿ ಕಾತರ, ಇಲ್ಲಿವೆ ಆಕರ್ಷಕ ಫೋಟೋಸ್
New Year 2025: ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ವಾಡಿಕೆಯಂತೆ ಬೆಂಗಳೂರಿಗರ ಸಂಭ್ರಮ, ಸಡಗರ ನಗರದ ಎಂಜಿ ರೆಸ್ತೆ, ಬ್ರಿಗೇಡ್ ರಸ್ತೆಗಳಲ್ಲಿ ಕಂಡುಬಂತು. ಇದೇ ವೇಳೆ, ಸಾಮಾನ್ಯರ ನೋಟದಲ್ಲಿ ಕಾತರವೂ ಇತ್ತು. ಇಲ್ಲಿವೆ ಆಕರ್ಷಕ ಫೋಟೋಸ್.
(1 / 11)
ಕಾಲಚಕ್ರ ಉರುಳಿದ್ದು, ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ಬೆಂಗಳೂರು ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿ ವಿವಿಧೆಡೆ ಬೆಂಗಳೂರಿಗರ ಸಂಭ್ರಮ, ಸಡಗರ ಗಮನಸೆಳೆದಿತ್ತು. ಇದೇ ವೇಳೆ, ಸಾಮಾನ್ಯರ ನೋಟದಲ್ಲಿದ್ದ ಕಾತರವೂ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇಲ್ಲಿವೆ ಆಕರ್ಷಕ ಫೋಟೋಸ್
(2 / 11)
ಬೆಂಗಳೂರು ನಗರದಲ್ಲಿ ನಿನ್ನೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಬೆಂಗಳೂರಿಗರು ಹೊಸ ವರ್ಷಾಚರಣೆಯ ಮೂಡ್‌ಗೆ ಜಾರಿದ್ದು ಕಂಡುಬಂತು. ಬ್ರಿಗೇಡ್ ರೋಡ್, ಎಂ.ಜಿ ರಸ್ತೆಯಲ್ಲಿ ಯುವಜನರು ಗುಂಪು ಗುಂಪಾಗಿ ಸೇರಿದ್ದರು. ತಾವು ಮೊದಲೇ ಕಾಯ್ದಿರಿಸಿದ್ದ ಹೋಟೆಲ್, ರೆಸ್ಟೋರೆಂಟ್, ಪಬ್‌ಗಳಿಗೆ ತೆರಳಿದ ಯುವಜನರ ಗುಂಪು ಸಂಭ್ರಮಾಚರಣೆಯಲ್ಲಿ ಮುಳುಗಿತು. ತಡರಾತ್ರಿವರೆಗೂ ಸಂಭ್ರಮ, ಸಡಗರ ಮುಂದುವರಿಯಿತು.
(AFP)(3 / 11)
ಬ್ರಿಗೇಡ್ ರಸ್ತೆಯ ಒಂದು ನೋಟ. ರೆಸಿಡೆನ್ಸಿ ರಸ್ತೆ,ಸೇಂಟ್‌ಮಾರ್ಕ್ ರಸ್ತೆ, ಕಬ್ಬನ್ ಪಾರ್ಕ್, ಟ್ರಿನಿಟಿ ಸರ್ಕಲ್,
ಇಂದಿರಾನಗರ ಕಡೆಗಳಲ್ಲಿ ಯುವ ಸಮೂಹ ಹೆಚ್ಚು ಜಮಾಯಿಸಿದ್ದರು. ಹೊಸ ವರ್ಷಾಚರಣೆ ನಿಮಿತ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಹೆಚ್ಚಿನ ನಿಗಾವಹಿಸಿದ್ದರು.
(4 / 11)
ರಾತ್ರಿ ಹನ್ನೆರಡು ಗಂಟೆ ತನಕವೂ ಡಿಜೆಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ, ಬ್ರಿಗೇಡ್ ರಸ್ತೆಯಲ್ಲಿ 2025 ಅನ್ನು ಬರಮಾಡಿಕೊಂಡದ್ದು ಹೀಗೆ.
(AFP)(5 / 11)
ಬೆಂಗಳೂರಿನಲ್ಲಿ ಯುವ ಸಮೂಹದ ಸಂಭ್ರಮ, ಸಡಗರದ ನಡುವೆ, ಬದುಕಿನ ಬಂಡಿ ಸಾಗಿಸುವುದಕ್ಕೆ ಬಣ್ಣದ ಬಲೂನು, ಪೀಪಿ ಹಿಡಿದು ಕಾತರದಿಂದ ಸಂಭ್ರಮ ನೋಡುತ್ತಿದ್ದ ಮಹಿಳೆ.
(AFP)(6 / 11)
ಬಣ್ಣ ಬಣ್ಣದ ಲೈಟುಗಳಿದ್ದ ಬಲೂನುಗಳು ಹೆಡ್‌ಗೇರ್‌ಗಳ ಮಾರಾಟ ಮಾಡುತ್ತಿದ್ದ ಮಹಿಳೆಯೊಬ್ಬರ ನೋಟವನ್ನು ಎಎಫ್‌ಪಿ ಛಾಯಾಗ್ರಾಹಕ ಇದ್ರೀಸ್ ಮೊಹಮ್ಮದ್ ಸೆರೆ ಹಿಡಿದುದು ಹೀಗೆ.
(AFP)(8 / 11)
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ಆಗಮಿಸುತ್ತಿದ್ದ ಯುವ ಸಮೂಹವನ್ನು ನಿಯಂತ್ರಿಸುತ್ತಿದ್ದ ರಕ್ಷಣಾ ಸಿಬ್ಬಂದಿ.
(AFP)(9 / 11)
ಹೊಸ ವರ್ಷ 2025 ಅನ್ನು ಸ್ವಾಗತಿಸಲು ಯುವ ಸಮೂಹಕ್ಕೆ ರಂಗ ರಂಗಿನ ಆಟಿಕೆಗಳನ್ನು ಮಾರಾಟ ಮಾಡುತ್ತಿದ್ದ ಮಹಿಳೆಯ ನೋಟದಲ್ಲಿ ಸೆರೆ ಸಿಕ್ಕ ಬದುಕಿನ ಕ್ಷಣ.
(AFP)(10 / 11)
ಬೆಂಗಳೂರು ಚಳಿಯ ನಡುವೆ ಹೊಸ ವರ್ಷದ ಸಂಭ್ರಮ, ಸಡಗರವನ್ನು ಕಣ್ತುಂಬಿಕೊಳ್ಳುತ್ತ, ಹೊಟ್ಟೆಪಾಡಿನ ಕಡೆಗೆ ಗಮನಕೊಟ್ಟ ಮಹಿಳೆ.
(AFP)ಇತರ ಗ್ಯಾಲರಿಗಳು