New Year Rangoli: ಸುಂದರ ರಂಗೋಲಿ ಚಿತ್ತಾರದ ಮೂಲಕ ಹೊಸ ವರ್ಷವನ್ನ ಸ್ವಾಗತಿಸಬೇಕಾ, ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  New Year Rangoli: ಸುಂದರ ರಂಗೋಲಿ ಚಿತ್ತಾರದ ಮೂಲಕ ಹೊಸ ವರ್ಷವನ್ನ ಸ್ವಾಗತಿಸಬೇಕಾ, ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ

New Year Rangoli: ಸುಂದರ ರಂಗೋಲಿ ಚಿತ್ತಾರದ ಮೂಲಕ ಹೊಸ ವರ್ಷವನ್ನ ಸ್ವಾಗತಿಸಬೇಕಾ, ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ

Happy New Year Rangoli Designs: ಹೊಸ ವರ್ಷಕ್ಕೆ ಚೆಂದದ ರಂಗೋಲಿ ಹಾಕಬೇಕು, ಯಾವ ಡಿಸೈನ್ ಬಿಡಿಸೋದು ಅನ್ನೋ ಯೋಚನೆ ನಿಮಗಿದ್ದರೆ ಇಲ್ಲೊಮ್ಮೆ ಗಮನಿಸಿ. ಈ ಚಿತ್ತಾರಗಳು ನಿಮಗೆ ಖಂಡಿತ ಇಷ್ಟವಾಗುತ್ತೆ. 2025 ಅನ್ನು ಸ್ವಾಗತಿಸಲು ಈ ರಂಗೋಲಿ ಡಿಸೈನ್‌ಗಳನ್ನು ಆಯ್ಕೆ ಮಾಡಿಕೊಂಡು ಮನೆಯನ್ನು ಸಿಂಗರಿಸಿ.

ಹೊಸ ವರ್ಷ ಎಂದರೆ ಹೊಸತನ, ಸಂಭ್ರಮ. ಇದು ಹೊಸ ಆರಂಭವನ್ನು ಸೂಚಿಸುವ ದಿನವೂ ಹೌದು. ಹಳೆಯ ವರ್ಷದ ಕಹಿಯನ್ನೆಲ್ಲಾ ಮರೆತು ಈ ವರ್ಷ ಬದುಕಿನಲ್ಲಿ ಸಿಹಿಯೇ ತುಂಬಿರಲಿ ಎನ್ನುವ ಆಕಾಂಕ್ಷೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತೇವೆ. ಈ ಸಂದರ್ಭ ಮನೆ ಮುಂದೆ ಸುಂದರ ರಂಗೋಲಿ ಚಿತ್ತಾರ ಮೂಡಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಬೇಕು ಅಂತಿದ್ದರೆ ಈ ಡಿಸೈನ್‌ಗಳು ನಿಮಗೆ ಇಷ್ಟವಾಗಬಹುದು ನೋಡಿ. 
icon

(1 / 8)

ಕಾರ್ಟೂನ್ ರಂಗೋಲಿ:  ಕಾರ್ಟೂನ್‌ಗಳು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಇಷ್ಟವಾಗುತ್ತದೆ. ಈ ಹೊಸ ವರ್ಷಕ್ಕೆ ಕಾರ್ಟೂನ್ ರಂಗೋಲಿ ಬಿಡಿಸುವ ಮೂಲಕ ಮನೆಯ ಅಂದವನ್ನ ಹೆಚ್ಚಿಸಿಬಹುದು. ಮೊಲವೊಂದು ಬಲೂನ್‌ಗಳನ್ನು ಹಿಡಿದಿರುವ ರೀತಿಯ ಕಾರ್ಟೂನ್‌ ರಂಗೋಲಿ ಬಿಡಿಸಿ ಹೊಸ ವರ್ಷದ ಶುಭಾಶಯ 2025 ಎಂದು ಬರೆಯಬಹುದು. ಇದು ತುಂಬಾನೆ ಡಿಫ್ರೆಂಟ್ ಆಗಿ ಕಾಣಿಸುವುದು ಸುಳ್ಳಲ್ಲ. 
icon

(2 / 8)

ರಂಗೋಲಿ ಬಿಡುಸುವುದು ಒಂದು ಕಲೆ. ಎಲ್ಲರಿಗೂ ಸುಂದರವಾದ ರಂಗೋಲಿ ಬಿಡಿಸಲು ಬರುವುದಿಲ್ಲ. ನೀವು ರಂಗೋಲಿ ಚಿತ್ತಾರದಲ್ಲಿ ವಿಶೇಷವಾದ ಏನಾದರೂ ಮಾಡಬೇಕು ಅಂದುಕೊಳ್ಳುತ್ತಿದ್ದರೆ ಬೆಂಕಿಕಡ್ಡಿ ಅಥವಾ ಇಯರ್ ಬಡ್‌ ಹಾಗೂ ಚಮಚ ಬಳಸಿ ಈ ಚಿತ್ತಾರವನ್ನು ಮೂಡಿಸಬಹುದು. ಹೂವಿನ ವಿನ್ಯಾಸದ ಈ ರಂಗೋಲಿ ಮಧ್ಯದಲ್ಲಿ ಹೊಸ ವರ್ಷದ ಶುಭಾಶಯ ಎಂದು ಬರೆದು 2025 ಅನ್ನು ಸ್ವಾಗತಿಸಬಹುದು. 
icon

(3 / 8)

ಸಂಕೀರ್ಣ ರಂಗೋಲಿಗಳು ಬಿಡಿಸುವುದು ಕಷ್ಟ, ಆದರೆ ಬಿಡಿಸಿದ ಮೇಲೆ ಮನೆಯ ಮುಂಬಾಗಿಲಿನ ಅಂದವೇ ಬದಲಾಗುತ್ತದೆ. ಈ 2025ರ ಹೊಸವರ್ಷಕ್ಕೆ ನೀವು ಈ ರಂಗೋಲಿಯನ್ನು ಟ್ರೈ ಮಾಡಬಹುದು. ಈ ರಂಗೋಲಿ ಚಿತ್ತಾರವು ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ. ವರ್ಷಾಂತ್ಯದ ದಿನ ರಾತ್ರಿಯೇ ನೀವು ರಂಗೋಲಿ ಬಿಡಿಸಿ ಇಡಬಹುದು. 
icon

(4 / 8)

ಹೊಸ ವರ್ಷದ ಸಂದರ್ಭ ಜನರು ಮನೆ  ಬಾಗಿಲು ಮತ್ತು ಅಂಗಳದಲ್ಲಿ ಸುಂದರವಾದ ರಂಗೋಲಿ ವಿನ್ಯಾಸಗಳನ್ನು ಬಿಡಿಸಿ, ಅದರ ಮೇಲೆ ಹೊಸ ವರ್ಷದ ಶುಭಾಶಯಗಳನ್ನು ಬರೆಯುತ್ತಾರೆ. ನಿಮ್ಮ ಮನೆಯ ಮುಖ್ಯ ದ್ವಾರದ ಬಳಿ ಇಂತಹ ರಂಗೋಲಿ ವಿನ್ಯಾಸವನ್ನು ಮಾಡುವ ಮೂಲಕ ನಿಮ್ಮ ಮನೆಯ ಅಂದವನ್ನು ಹೆಚ್ಚಿಸಬಹುದು. ರಂಗೋಲಿ ಕೆಳ ಭಾಗದಲ್ಲಿ ಹೊಸ ವರ್ಷದ ಶುಭಾಶಯ 2025 ರಂದು ಬರೆಯಬಹುದು. 
icon

(5 / 8)

ಸಿಂಪಲ್ ಆಗಿದ್ರು ತುಂಬಾ ಸುಂದರವಾಗಿ ಕಾಣುವ ರಂಗೋಲಿ ಬಿಡಿಸಬೇಕು ಅಂತಿದ್ರೆ ನೀವು ಈ ಚಿತ್ತಾರ ಮೂಡಿಸಬಹುದು. ಈ ರಂಗೋಲಿ ಹೊಸ ವರ್ಷಕ್ಕೆ ಹೇಳಿ ಮಾಡಿಸಿದಂತಿದೆ. ಇದು ಡಿಫ್ರೆಂಟ್ ಆಗಿ ಕಾಣಿಸುವುದು ಸುಳ್ಳಲ್ಲ. 2025 ಅನ್ನು ಈ ರಂಗೋಲಿ ಮೂಲಕ ಸ್ವಾಗತಿಸಿ. 
icon

(6 / 8)

ಸುಂದರವಾಗಿ ಗರಿ ಬಿಚ್ಚಿ ನಿಂತ ನವಿಲು, ಮಧ್ಯದಲ್ಲಿ ಹೊಸ ವರ್ಷ ಶುಭಾಶಯ ಎಂದು ಬರೆದ ಬರಹ ಎಡಭಾಗದಲ್ಲಿ ಗರಿಯ ಚಿತ್ತಾರದ ಈ ರಂಗೋಲಿಯು ಹೊಸ ವರ್ಷಕ್ಕೆ ಹೇಳಿ ಮಾಡಿಸಿದಂತಿದೆ.  
icon

(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಇತರ ಗ್ಯಾಲರಿಗಳು