Sun Saturn conjunction: 2025ರಲ್ಲಿ ಸೂರ್ಯ–ಶನಿಯ ಸಂಯೋಗ; ಈ 3 ರಾಶಿಯವರ ಬಾಳಿನಲ್ಲಿ ಅನಿರೀಕ್ಷಿತ ತಿರುವು, ಹಣಕಾಸಿನ ಲಾಭ
- Sun-Saturn conjunction: ಗ್ರಹಗಳ ಸ್ಥಾನಪಲ್ಲಟ ಮಾತ್ರವಲ್ಲ, ಸಂಯೋಜನೆಗೂ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. 2025ರಲ್ಲಿ ಗ್ರಹಗಳ ಅಧಿಪತಿ ಸೂರ್ಯ ಹಾಗೂ ಶನಿಯು ಕುಂಭ ರಾಶಿಯಲ್ಲಿ ಸಂಧಿಸಲಿದ್ದಾರೆ. ಇದರಿಂದ ಈ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ.
- Sun-Saturn conjunction: ಗ್ರಹಗಳ ಸ್ಥಾನಪಲ್ಲಟ ಮಾತ್ರವಲ್ಲ, ಸಂಯೋಜನೆಗೂ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವವಿದೆ. 2025ರಲ್ಲಿ ಗ್ರಹಗಳ ಅಧಿಪತಿ ಸೂರ್ಯ ಹಾಗೂ ಶನಿಯು ಕುಂಭ ರಾಶಿಯಲ್ಲಿ ಸಂಧಿಸಲಿದ್ದಾರೆ. ಇದರಿಂದ ಈ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ.
(1 / 7)
2025ರಲ್ಲಿ ಕುಂಭ ರಾಶಿಯಲ್ಲಿ ಸೂರ್ಯ ಮತ್ತು ಶನಿಯ ಸಂಯೋಗವಾಗಲಿದೆ. ಇವೆರಡರ ಸಂಯೋಜನೆಯು ಅಪರೂಪವಾಗಿದ್ದು, ಇದರಿಂದ ವಿಶೇಷ ಯೋಗಗಳು ಉಂಟಾಗಲಿವೆ. ಸರಿಯಾದ ಸಮಯದಲ್ಲಿ ಸೂರ್ಯನೊಂದಿಗೆ ಶನಿಯ ಸಂಯೋಗವನ್ನು ವಿಶೇಷ ಘಟನೆ ಎಂದು ಜ್ಯೋತಿಷ್ಯ ಪರಿಗಣಿಸುತ್ತದೆ.
(2 / 7)
2025ರ ಜನವರಿ ಆರಂಭದಲ್ಲಿ ಸೂರ್ಯನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಆ ಸಮಯದಲ್ಲಿ ಶನಿಯು ಕುಂಭ ರಾಶಿಯಲ್ಲಿದ್ದು, ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಸಂಧಿಸಲಿವೆ. ಈ ಅಪರೂಪದ ವಿದ್ಯಮಾನವು ಕೆಲವು ರಾಶಿಯವರಿಗೆ ಅದೃಷ್ಟವನ್ನು ಉಂಟು ಮಾಡಲಿದೆ. 2025ರ ಮಾರ್ಚ್ 29 ರಂದು ಶನಿಯು ಕುಂಭ ರಾಶಿಯಿಂದ ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ.
(3 / 7)
ಶನಿ ಮತ್ತು ಸೂರ್ಯನ ಸಂಯೋಜನೆಯು ಮೇಷ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ಆದಾಯ ಹೆಚ್ಚಾಗುತ್ತದೆ. ನಿಮ್ಮ ಜೀವನ ಸಂತೋಷದಿಂದ ಕೂಡಿರುತ್ತದೆ. ಹೊಸ ಆದಾಯದ ಬಾಗಿಲು ತೆರೆಯುತ್ತದೆ. ಉದ್ಯೋಗವನ್ನು ಬದಲಾಯಿಸಲು ಬಯಸುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಒಟ್ಟಾರೆ ಈ ದಿನಗಳು ನಿಮಗೆ ಅದೃಷ್ಟವನ್ನು ತರುವ ದಿನಗಳಾಗಲಿದೆ.
(4 / 7)
ಸೂರ್ಯ–ಶನಿಯ ಸಂಯೋಗವು ಮಕರ ರಾಶಿಯವರಿಗೆ ಒಳಿತು ಮಾಡಲಿದೆ. ಮುಂಬರುವ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಅನಿರೀಕ್ಷಿತ, ಧನಾತ್ಮಕ ಬದಲಾವಣೆಗಳು ಎದುರಾಗಲಿವೆ. ಕೆಲವರ ಪ್ರೀತಿಗೆ ಮದುವೆಯ ಮುದ್ರೆ ಬೀಳುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭವನ್ನು ಹೆಚ್ಚಿಸಲು ನೀವು ಕೈಗೊಂಡ ಅನೇಕ ಯೋಜನೆಗಳು ಯಶಸ್ವಿಯಾಗುತ್ತವೆ.
(5 / 7)
ಸೂರ್ಯ ಹಾಗೂ ಶನಿ ಕುಂಭರಾಶಿಯಲ್ಲಿ ಒಂದಾಗುವುದು ವೃಷಭ ರಾಶಿಯವರಿಗೆ ಬಹಳಷ್ಟು ಧನಾತ್ಮಕ ಬದಲಾವಣೆಗಳನ್ನು ತರುತ್ತದೆ. ಉದ್ಯೋಗಿಗಳಿಗೆ ವರ್ಗಾವಣೆ, ಬಡ್ತಿ ಸಾಧ್ಯತೆ. ಹಿರಿಯರಿಗೆ ಇದು ಉತ್ತಮವಾದ ಅವಧಿಯಾಗಿದೆ. ತಮ್ಮ ಪ್ರತಿಭೆಗಳೊಂದಿಗೆ ಅವರು ಕುಟುಂಬದ ಸಂಪೂರ್ಣ ಬೆಂಬಲದೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಾರೆ.
(6 / 7)
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು