ಭಾರತ ಸರಣಿಗೆ ಸೋಲಿಗೆ ಐಪಿಎಲ್ ಕಾರಣವೇ? ನ್ಯೂಜಿಲೆಂಡ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಸ್ಪಿನ್ನರ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಭಾರತ ಸರಣಿಗೆ ಸೋಲಿಗೆ ಐಪಿಎಲ್ ಕಾರಣವೇ? ನ್ಯೂಜಿಲೆಂಡ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಸ್ಪಿನ್ನರ್

ಭಾರತ ಸರಣಿಗೆ ಸೋಲಿಗೆ ಐಪಿಎಲ್ ಕಾರಣವೇ? ನ್ಯೂಜಿಲೆಂಡ್ ಗೆಲುವಿನ ರಹಸ್ಯ ಬಿಚ್ಚಿಟ್ಟ ಸ್ಪಿನ್ನರ್

  • Glenn Phillips: ಪುಣೆ ಟೆಸ್ಟ್​​ನಲ್ಲಿ ಭಾರತ ತಂಡದ ವಿರುದ್ಧ ನ್ಯೂಜಿಲೆಂಡ್ 113 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಆದರೆ ಈ ಗೆಲುವಿಗೆ ಕಾರಣ ಏನೆಂದು ಕಿವೀಸ್ ತಂಡದ ಸ್ಪಿನ್ ಆಲ್​ರೌಂಡರ್​ ಗ್ಲೆನ್ ಫಿಲಿಪ್ಸ್ ಅವರು ಬಹಿರಂಗಪಡಿಸಿದ್ದಾರೆ.

ಪುಣೆ ಟೆಸ್ಟ್​​​ನಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಒಂದು ಪಂದ್ಯಕ್ಕೂ ಮುನ್ನವೇ 2-0 ಅಂತರದಲ್ಲಿ ಸರಣಿ ಕೈ ವಶ ಮಾಡಿಕೊಂಡಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ 113 ರನ್​ಗಳ ಗೆಲುವಿಗೆ ಐಪಿಎಲ್​​ಗೆ ಕಾರಣವೇ? ಹೀಗೊಂದು ಪ್ರಶ್ನೆ ಉದ್ಭವಿಸಿದೆ. ಪುಣೆ ಟೆಸ್ಟ್​​ನಲ್ಲಿ ಎರಡು ಇನ್ನಿಂಗ್ಸ್​​ಗಳಿಂದ 13 ವಿಕೆಟ್ ಉರುಳಿಸಿದ ಕಿವೀಸ್ ಸ್ಪಿನ್ನರ್​ ಗ್ಲೆನ್ ಫಿಲಿಪ್ಸ್​, ಇದಕ್ಕೆ ಉತ್ತರ ಕೊಟ್ಟಿದ್ದಾರೆ.
icon

(1 / 5)

ಪುಣೆ ಟೆಸ್ಟ್​​​ನಲ್ಲಿ ಭಾರತ ಕ್ರಿಕೆಟ್ ತಂಡದ ವಿರುದ್ಧ ನ್ಯೂಜಿಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಒಂದು ಪಂದ್ಯಕ್ಕೂ ಮುನ್ನವೇ 2-0 ಅಂತರದಲ್ಲಿ ಸರಣಿ ಕೈ ವಶ ಮಾಡಿಕೊಂಡಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಕಿವೀಸ್ 113 ರನ್​ಗಳ ಗೆಲುವಿಗೆ ಐಪಿಎಲ್​​ಗೆ ಕಾರಣವೇ? ಹೀಗೊಂದು ಪ್ರಶ್ನೆ ಉದ್ಭವಿಸಿದೆ. ಪುಣೆ ಟೆಸ್ಟ್​​ನಲ್ಲಿ ಎರಡು ಇನ್ನಿಂಗ್ಸ್​​ಗಳಿಂದ 13 ವಿಕೆಟ್ ಉರುಳಿಸಿದ ಕಿವೀಸ್ ಸ್ಪಿನ್ನರ್​ ಗ್ಲೆನ್ ಫಿಲಿಪ್ಸ್​, ಇದಕ್ಕೆ ಉತ್ತರ ಕೊಟ್ಟಿದ್ದಾರೆ.(PTI)

ಭಾರತದ ನೆಲದಲ್ಲಿ ಕಿವೀಸ್ ಸರಣಿ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧವೇ ಸರಣಿ ಸೋತಿದ್ದ ನ್ಯೂಜಿಲೆಂಡ್, ಭಾರತ ತಂಡವನ್ನು ಸೋಲಿಸಿ ಅಚ್ಚರಿ ಮೂಡಿಸಿದೆ. ತವರಿನಲ್ಲಿ ಪರಾಕ್ರಮ ಮೆರೆಯುತ್ತಿದ್ದ ಭಾರತಕ್ಕೆ ಚಳ್ಳೆಹಣ್ಣು ತಿನಿಸಿದೆ. ಪುಣೆ ಟೆಸ್ಟ್​​​ನಲ್ಲಿ ನಿಧಾನಗತಿಯ ಪಿಚ್​​​ನಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್​​ಗಳ ಬಲೆಗೆ ಸಿಲುಕಿದ ರೋಹಿತ್ ಪಡೆ​ ವಿಲ ವಿಲ ಒದ್ದಾಡಿತು.
icon

(2 / 5)

ಭಾರತದ ನೆಲದಲ್ಲಿ ಕಿವೀಸ್ ಸರಣಿ ಗೆಲ್ಲುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಏಕೆಂದರೆ ಇದಕ್ಕೂ ಮುನ್ನ ಶ್ರೀಲಂಕಾ ವಿರುದ್ಧವೇ ಸರಣಿ ಸೋತಿದ್ದ ನ್ಯೂಜಿಲೆಂಡ್, ಭಾರತ ತಂಡವನ್ನು ಸೋಲಿಸಿ ಅಚ್ಚರಿ ಮೂಡಿಸಿದೆ. ತವರಿನಲ್ಲಿ ಪರಾಕ್ರಮ ಮೆರೆಯುತ್ತಿದ್ದ ಭಾರತಕ್ಕೆ ಚಳ್ಳೆಹಣ್ಣು ತಿನಿಸಿದೆ. ಪುಣೆ ಟೆಸ್ಟ್​​​ನಲ್ಲಿ ನಿಧಾನಗತಿಯ ಪಿಚ್​​​ನಲ್ಲಿ ನ್ಯೂಜಿಲೆಂಡ್ ಸ್ಪಿನ್ನರ್​​ಗಳ ಬಲೆಗೆ ಸಿಲುಕಿದ ರೋಹಿತ್ ಪಡೆ​ ವಿಲ ವಿಲ ಒದ್ದಾಡಿತು.(AP)

ಭಾರತ ತಂಡದ ಸ್ಪಿನ್ನರ್​​ಗಳು ವಿಕೆಟ್ ಪಡೆದರೂ ನ್ಯೂಜಿಲೆಂಡ್​​ನ ಸ್ಯಾಂಟ್ನರ್ 2 ಇನ್ನಿಂಗ್ಸ್ ಸೇರಿ ಅತಿ ಹೆಚ್ಚು 13 ವಿಕೆಟ್​​ಗಳನ್ನು ಪಡೆದು ಗಮನ ಸೆಳೆದರು. ಅಲ್ಲದೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇವರಿಗೆ ಸಾಥ್ ನೀಡಿದ ಗ್ಲೇನ್ ಫಿಲಿಪ್ಸ್ ಮೂರು ವಿಕೆಟ್ ಪಡೆದು ಮಿಂಚಿದ್ದು, ಸರಣಿ ಗೆಲುವಿಗೆ ಕಾರಣ ಏನೆಂದು ಬಹಿರಂಗಪಡಿಸಿದ್ದಾರೆ. ಸರಣಿ ಗೆಲುವಿಗೆ ಐಪಿಎಲ್​ ಕೂಡ ಕಾರಣ ಎಂದು ಹೇಳಿದ್ದಾರೆ. ಏಕೆಂದರೆ ಪಿಚ್​ ಅರಿಯಲು ಐಪಿಎಲ್ ನೆರವಾಗಿದೆ. ಪ್ರತಿ ವರ್ಷ ಭಾರತದ ಕಂಡಿಷನ್​​ಗಳಲ್ಲಿ ಆಡುವುದರಿಂದ ಪಿಚ್​ ಮರ್ಮ ಅರಿಯಲು ಮತ್ತು ಸರಣಿಗಳಲ್ಲಿ ಪಿಚ್​ಗೆ ಹೊಂದಿಕೊಳ್ಳುವುದು ಸುಲಭವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
icon

(3 / 5)

ಭಾರತ ತಂಡದ ಸ್ಪಿನ್ನರ್​​ಗಳು ವಿಕೆಟ್ ಪಡೆದರೂ ನ್ಯೂಜಿಲೆಂಡ್​​ನ ಸ್ಯಾಂಟ್ನರ್ 2 ಇನ್ನಿಂಗ್ಸ್ ಸೇರಿ ಅತಿ ಹೆಚ್ಚು 13 ವಿಕೆಟ್​​ಗಳನ್ನು ಪಡೆದು ಗಮನ ಸೆಳೆದರು. ಅಲ್ಲದೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಇವರಿಗೆ ಸಾಥ್ ನೀಡಿದ ಗ್ಲೇನ್ ಫಿಲಿಪ್ಸ್ ಮೂರು ವಿಕೆಟ್ ಪಡೆದು ಮಿಂಚಿದ್ದು, ಸರಣಿ ಗೆಲುವಿಗೆ ಕಾರಣ ಏನೆಂದು ಬಹಿರಂಗಪಡಿಸಿದ್ದಾರೆ. ಸರಣಿ ಗೆಲುವಿಗೆ ಐಪಿಎಲ್​ ಕೂಡ ಕಾರಣ ಎಂದು ಹೇಳಿದ್ದಾರೆ. ಏಕೆಂದರೆ ಪಿಚ್​ ಅರಿಯಲು ಐಪಿಎಲ್ ನೆರವಾಗಿದೆ. ಪ್ರತಿ ವರ್ಷ ಭಾರತದ ಕಂಡಿಷನ್​​ಗಳಲ್ಲಿ ಆಡುವುದರಿಂದ ಪಿಚ್​ ಮರ್ಮ ಅರಿಯಲು ಮತ್ತು ಸರಣಿಗಳಲ್ಲಿ ಪಿಚ್​ಗೆ ಹೊಂದಿಕೊಳ್ಳುವುದು ಸುಲಭವಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.(PTI)

ಭಾರತಕ್ಕೆ ಬಂದು ಭಾರತ ತಂಡದ ವಿರುದ್ಧ ಆಡುವುದು ಯಾವಾಗಲೂ ಕಷ್ಟ. ಆದ್ದರಿಂದ ಈ ವಿಜಯದ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾವು ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ಆಡಲು ಬಯಸಿದ್ದೆವು. ಅದರಂತೆ ಯಶಸ್ಸು ಸಾಧಿಸಿದ್ದೇವೆ ಎಂದು ಗ್ಲೆನ್ ಫಿಲಿಪ್ಸ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಸೋತ ನಂತರ ಕಿವೀಸ್​​ ನಾಯಕತ್ವದಿಂದ ಟಿಮ್ ಸೌಥಿ ಕೆಳಗಿಳಿದಿದ್ದರು. ಟಾಮ್ ಲಾಥಮ್ ಅವರು ಭಾರತದ ಪ್ರವಾಸಕ್ಕೆ ಉಸ್ತುವಾರಿ ವಹಿಸಿದ್ದರು. ಇದೀಗ ಅವರು ಭಾರತದ ವಿರುದ್ಧ ಐತಿಹಾಸಿಕ ಸರಣಿಯನ್ನು ಗೆದ್ದು ದಾಖಲೆ ಬರೆದಿದ್ದಾರೆ. 
icon

(4 / 5)

ಭಾರತಕ್ಕೆ ಬಂದು ಭಾರತ ತಂಡದ ವಿರುದ್ಧ ಆಡುವುದು ಯಾವಾಗಲೂ ಕಷ್ಟ. ಆದ್ದರಿಂದ ಈ ವಿಜಯದ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನಾವು ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ಆಡಲು ಬಯಸಿದ್ದೆವು. ಅದರಂತೆ ಯಶಸ್ಸು ಸಾಧಿಸಿದ್ದೇವೆ ಎಂದು ಗ್ಲೆನ್ ಫಿಲಿಪ್ಸ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ ಸೋತ ನಂತರ ಕಿವೀಸ್​​ ನಾಯಕತ್ವದಿಂದ ಟಿಮ್ ಸೌಥಿ ಕೆಳಗಿಳಿದಿದ್ದರು. ಟಾಮ್ ಲಾಥಮ್ ಅವರು ಭಾರತದ ಪ್ರವಾಸಕ್ಕೆ ಉಸ್ತುವಾರಿ ವಹಿಸಿದ್ದರು. ಇದೀಗ ಅವರು ಭಾರತದ ವಿರುದ್ಧ ಐತಿಹಾಸಿಕ ಸರಣಿಯನ್ನು ಗೆದ್ದು ದಾಖಲೆ ಬರೆದಿದ್ದಾರೆ. (Surjeet Yadav)

ಐಪಿಎಲ್ ಆಡದಿದ್ದರೆ ಇಲ್ಲಿನ ಪಿಚ್​ಗಳು ಮತ್ತು ಕಂಡಿಷನ್ ಬಗ್ಗೆ ಅರಿವು ಇರುತ್ತಿರಲಿಲ್ಲ. ಇದೇ ಕಾರಣ ಅನೇಕ ಸರಣಿಗಳನ್ನು ಕಳೆದುಕೊಂಡಿದ್ದೇವೆ. ಆದರೆ ಐಪಿಎಲ್​​ನಿಂದಾಗಿ ಭಾರತದ ಪರಿಸ್ಥಿತಿ ಅರಿಯಲು ಸಾಧ್ಯವಾಯಿತು. ಮಿಚೆಲ್ ಸ್ಯಾಂಟ್ನರ್​ ಭಯಂಕರವಾಗಿ ಬೌಲಿಂಗ್ ಮಾಡಿದರು. ಈ ಗೆಲುವನ್ನು ಹೋಟೆಲ್​ನಲ್ಲಿ ಸಂಭ್ರಮಿಸಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
icon

(5 / 5)

ಐಪಿಎಲ್ ಆಡದಿದ್ದರೆ ಇಲ್ಲಿನ ಪಿಚ್​ಗಳು ಮತ್ತು ಕಂಡಿಷನ್ ಬಗ್ಗೆ ಅರಿವು ಇರುತ್ತಿರಲಿಲ್ಲ. ಇದೇ ಕಾರಣ ಅನೇಕ ಸರಣಿಗಳನ್ನು ಕಳೆದುಕೊಂಡಿದ್ದೇವೆ. ಆದರೆ ಐಪಿಎಲ್​​ನಿಂದಾಗಿ ಭಾರತದ ಪರಿಸ್ಥಿತಿ ಅರಿಯಲು ಸಾಧ್ಯವಾಯಿತು. ಮಿಚೆಲ್ ಸ್ಯಾಂಟ್ನರ್​ ಭಯಂಕರವಾಗಿ ಬೌಲಿಂಗ್ ಮಾಡಿದರು. ಈ ಗೆಲುವನ್ನು ಹೋಟೆಲ್​ನಲ್ಲಿ ಸಂಭ್ರಮಿಸಲಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.(PTI)


ಇತರ ಗ್ಯಾಲರಿಗಳು