ಒಬ್ಬರಲ್ಲ, ಇಬ್ಬರಲ್ಲ, 40+ ವಯಸ್ಸಿನ ಈ 9 ನಟಿಯರಿನ್ನೂ ವಿವಾಹ ಬಂಧನಕ್ಕೆ ಸಿಲುಕಿಲ್ಲ; ರಾಧಿಕಾ ಗಾಂಧಿಯಿಂದ ದಿವ್ಯಾ ಸ್ಪಂದನಾ ತನಕ
- ಕನ್ನಡದ ಹಲವು ನಟಿಯರು ವಿವಾಹವಾಗಿಲ್ಲ. ಕೆಲವು ನಟಿಯರ ವಯಸ್ಸು 40 ದಾಟಿದರೂ ಇವರು ವಿವಾಹ ಬಂಧನಕ್ಕೆ ಒಳಗಾಗಲು ಮನಸ್ಸು ಮಾಡಿಲ್ಲ. ಮದುವೆ ಯಾಕೆ ಸಿಂಗಲ್ ಆಗಿರೋಣ ಎಂದು ಕೆಲವರು ಅಂದುಕೊಂಡಿರಬಹುದು. ಯಾವುದೋ ಕಹಿ ನೆನಪಿನ ಕಾರಣದಿಂದ ಕೆಲವರು ಮದುವೆಯಾಗದೆ ಉಳಿದಿರಬಹುದು.
- ಕನ್ನಡದ ಹಲವು ನಟಿಯರು ವಿವಾಹವಾಗಿಲ್ಲ. ಕೆಲವು ನಟಿಯರ ವಯಸ್ಸು 40 ದಾಟಿದರೂ ಇವರು ವಿವಾಹ ಬಂಧನಕ್ಕೆ ಒಳಗಾಗಲು ಮನಸ್ಸು ಮಾಡಿಲ್ಲ. ಮದುವೆ ಯಾಕೆ ಸಿಂಗಲ್ ಆಗಿರೋಣ ಎಂದು ಕೆಲವರು ಅಂದುಕೊಂಡಿರಬಹುದು. ಯಾವುದೋ ಕಹಿ ನೆನಪಿನ ಕಾರಣದಿಂದ ಕೆಲವರು ಮದುವೆಯಾಗದೆ ಉಳಿದಿರಬಹುದು.
(1 / 10)
ಕನ್ನಡದ ಹಲವು ನಟಿಯರು ವಿವಾಹವಾಗಿಲ್ಲ. ಕೆಲವು ನಟಿಯರ ವಯಸ್ಸು 40 ದಾಟಿದರೂ ಇವರು ವಿವಾಹ ಬಂಧನಕ್ಕೆ ಒಳಗಾಗಲು ಮನಸ್ಸು ಮಾಡಿಲ್ಲ. ಮದುವೆ ಯಾಕೆ ಸಿಂಗಲ್ ಆಗಿರೋಣ ಎಂದು ಕೆಲವರು ಅಂದುಕೊಂಡಿರಬಹುದು. ಯಾವುದೋ ಕಹಿ ನೆನಪಿನ ಕಾರಣದಿಂದ ಕೆಲವರು ಮದುವೆಯಾಗದೆ ಉಳಿದಿರಬಹುದು. ಆರ್.ಟಿ. ರಮಾ, ವಿಜಯಲಕ್ಷ್ಮಿ, ಭಾವನಾ ರಾಮಣ್ಣ, ರಮ್ಯಾ ಸೇರಿದಂತೆ ಇನ್ನೂ ವಿವಾಹವಾಗದೆ ಇರುವ 40+ ವಯಸ್ಸಿನ ಈ 9 ನಟಿಯರ ವಿವರ ಪಡೆಯೋಣ.
(2 / 10)
ದಿವ್ಯಾ ಸ್ಪಂದನಾ (ರಮ್ಯಾ): ಮೋಹಕತಾರೆ ರಮ್ಯಾ ಕೂಡ ಅವಿವಾಹಿತೆಯಾಗಿಯೇ ಉಳಿದಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಹಲವರ ಜತೆ ಈಕೆಯ ಹೆಸರು ತಳಕು ಹಾಕಿಕೊಂಡಿತ್ತು. ಆದರೆ, ಯಾವುದೇ ಕಾಂಟ್ರವರ್ಸಿಗೂ ತಲೆಕೆಡಿಸಿಕೊಳ್ಳದೆ ಮದುವೆಯಾಗದೆಯೇ ಉಳಿದಿದ್ದಾರೆ.
(3 / 10)
ಜೆನ್ನಿಫರ್ ಕೊತ್ವಾಲ್: ಕನ್ನಡ ನಟಿ ಜೆನ್ನಿಫರ್ ಕೊತ್ವಾಲ್ ಕೂಡ 40 ವರ್ಷ ವಯಸ್ಸು ದಾಟಿದರೂ ಮದುವೆಯಾಗಿಲ್ಲ. ಇವರು ಸೂಪರ್‌ಹಿಟ್ ಜೋಗಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಬಂಧನ, ಲವಕುಶ, ಮಸ್ತಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
(4 / 10)
ಆರ್.ಟಿ. ರಮಾ: ಕನ್ನಡ ಧಾರಾವಾಹಿ "ಕನ್ನಡತಿ"ಯಲ್ಲಿ ನಟಿಸಿರುವ, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ನಸ್ರುದ್ಧೀನ್ ಸಹಪಾಠಿಯಾಗಿದ್ದ ಆರ್.ಟಿ. ರಮಾ ಮದುವೆಯಾಗಿಲ್ಲ. ಇವರು ಗೆಜ್ಜೆ ಪೂಜೆ, ಶರಪಂಜರ, ಗೌರಿ, ಜೇಡರ ಬಲೆ, ನನ್ನ ಕರ್ತವ್ಯ, ಮಹಾಸತಿ ಅನುಸೂಯ, ಮಿಸ್ ಲೀಲಾವತಿ, ನಾ ಮೆಚ್ಚಿದ ಹುಡುಗ, ಸತಿ ಸುಕನ್ಯಾ, ಮನ ಮೆಚ್ಚಿದ ಮಡದಿ, ಬಾಲು ಬೆಳಗಿತು, ಪುನರ್ಜನ್ಮ, ಕಪ್ಪು ಬಿಳುಪು, ಅನುಗ್ರಹ, ಮುಗಿಯದ ಕಥೆ, ಭಲೇ ಅದೃಷ್ಟವೋ ಅದೃಷ್ಟ, ಸೋತು ಗೆದ್ದವಳು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
(mysorenews)(5 / 10)
ವಿಜಯಲಕ್ಷ್ಮಿ: ನಾಗಮಂಡಲ ಸಿನಿಮಾದಲ್ಲಿ ನಟಿಸಿದ್ದ ವಿಜಯಲಕ್ಷ್ಮಿ ಕೂಡ ಮದುವೆಯಾಗಿಲ್ಲ. ಕನ್ನಡ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಅವರಿಗೂ ಸೃಜನ್ ಲೋಕೇಶ್‌ಗೂ ಎಂಗೇಜ್‌ಮೆಂಟ್ ಆಗಿತ್ತು. ಆದರೆ, ಎಂಗೇಜ್‌ಮೆಂಟ್ ನಂತರ ಇವರ ಸಂಬಂಧ ಮುಂದುವರೆಯಲಿಲ್ಲ.
(6 / 10)
ಭಾವನಾ ರಾಮಣ್ಣ: ಕನ್ನಡ ನಟಿ ಭಾವನಾ ರಾಮಣ್ಣ ಕೂಡ ಅವಿವಾಹಿತರಾಗಿಯೇ ಉಳಿದಿದ್ದಾರೆ. ಇವರು ವಿಷ್ಣುವರ್ಧನ್ ಮತ್ತು ಶ್ರೀನಗರ ಕಿಟ್ಟಿ ಮುಂತಾದ ನಟರ ಜತೆ ನಟಿಸಿದ್ದಾರೆ. ವಯಸ್ಸು 40 ದಾಟಿದರೂ ಇವರು ಮದುವೆಯಾಗಿಲ್ಲ.
(7 / 10)
ಪೂಜಾ ಲೋಕೇಶ್: ಸೀತಾ ರಾಮಾ ಸೀರಿಯಲ್‌ನಲ್ಲಿ ನಟಿಸಿರುವ ಪೂಜಾ ಕೂಡ ಅವಿವಾಹಿತರಾಗಿದ್ದಾರೆ. ಇವರು ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ನಟನೆಯೊಂದಿಗೆ ಫ್ಯಾಷನ್ ಡಿಸೈನರ್ ಆಗಿಯೂ ವೃತ್ತಿ ಜೀವನ ನಡೆಸುತ್ತಾರೆ.
(8 / 10)
ಸಿತಾರ: ಕನ್ನಡದಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಸಿತಾರ ಅವರು ಮದುವೆಯಾಗಿಲ್ಲ. ಇವರು ಡಾ. ವಿಷ್ಣುವರ್ಧನ್, ಶಶಿ ಕುಮಾರ್, ಅನಂತ್ ನಾಗ್ ಮುಂತಾದ ಕಲಾವಿದರ ಜತೆ ನಟಿಸಿದ್ದಾರೆ.
(9 / 10)
ರೇಖಾ ವೇದವ್ಯಾಸ್: ಚೆಲ್ಲಾಟ, ಹುಡುಗಾಟ, ಹುಚ್ಚ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ನಟಿ ರೇಖಾ ವೇದವ್ಯಾಸ್ ಕೂಡ ಅವಿವಾಹಿತೆಯಾಗಿ ಉಳಿದಿದ್ದಾರೆ.
ಇತರ ಗ್ಯಾಲರಿಗಳು