Nishant Dev: ಮೆಕ್ಸಿಕೊ ಬಾಕ್ಸರ್ ಪಂಚ್ಗೆ ಪದಕದ ಆಸೆ ಕೈಬಿಟ್ಟ ನಿಶಾಂತ್ ದೇವ್; ಕ್ವಾರ್ಟರ್ಫೈನಲ್ನಲ್ಲಿ ಸೋಲು
- Paris Olympics 2024: ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಮೆಕ್ಸಿಕೊ ಬಾಕ್ಸರ್ ಮಾರ್ಕೊ ವರ್ಡೆ ವಿರುದ್ಧ ಭಾರತದ ನಿಶಾಂತ್ ದೇವ್ ಸೋತು ಹೊರಬಿದ್ದಿದ್ದಾರೆ.
- Paris Olympics 2024: ಪುರುಷರ 71 ಕೆಜಿ ವಿಭಾಗದ ಕ್ವಾರ್ಟರ್ಫೈನಲ್ನಲ್ಲಿ ಮೆಕ್ಸಿಕೊ ಬಾಕ್ಸರ್ ಮಾರ್ಕೊ ವರ್ಡೆ ವಿರುದ್ಧ ಭಾರತದ ನಿಶಾಂತ್ ದೇವ್ ಸೋತು ಹೊರಬಿದ್ದಿದ್ದಾರೆ.
(1 / 7)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ 71 ಕೆಜಿ ವಿಭಾಗದಲ್ಲಿ ಮೆಕ್ಸಿಕೊದ ಮಾರ್ಕೊ ವರ್ಡೆ ವಿರುದ್ಧ ಭಾರತದ ನಿಶಾಂತ್ ದೇವ್ ಅವರು 4-1ರ ಅಂತರದಿಂದ ಸೋತು ಹೊರಬಿದ್ದಿದ್ದಾರೆ. ಎರಡನೇ ಶ್ರೇಯಾಂಕಿತ ಹಾಗೂ ಪ್ಯಾನ್ ಅಮೆರಿಕನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮಾರ್ಕೊ ಎದುರು 22 ವರ್ಷದ ನಿಶಾಂತ್ ಕಠಿಣ ಹೋರಾಟ ನಡೆಸಬೇಕಾಯಿತು.
(2 / 7)
ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಈಕ್ವೆಡಾರ್ನ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಅವರನ್ನು 3-2 ಅಂಕಗಳಿಂದ ಸೋಲಿಸಿದ್ದ ನಿಶಾಂತ್, ಈಗ ಕ್ವಾರ್ಟರ್ಫೈನಲ್ನಲ್ಲಿ ಸೋಲಿಗೆ ಶರಣಾಗುವುದರ ಮೂಲಕ ಪದಕದ ಕನಸು ಭಗ್ನಗೊಂಡಿದೆ.
(3 / 7)
ಇನ್ನು ಪ್ರೀ ಕ್ವಾರ್ಟರ್ ಫೈನಲ್ನಲ್ಲಿ ಮೊಜಾಂಬಿಕ್ನ ಟಿಯಾಗೊ ಮುಕ್ಸಂಗಾ 5-0 ಅಂತರದಿಂದ ಸೋಲಿಸಿದ್ದ ಮಾರ್ಕೊ ವರ್ಡೆ, ಈಗ ಸೆಮಿಫೈನಲ್ ಪ್ರವೇಶಿಸಿ ಪದಕ ಖಚಿತಪಡಿಸಿಕೊಂಡಿದ್ದಾರೆ.
(4 / 7)
ಕ್ವಾರ್ಟರ್ ಫೈನಲ್ನ ಮೊದಲ ಸುತ್ತಿನಲ್ಲಿ ಆಕ್ರಮಣಕಾರಿ ಹೋರಾಟಕ್ಕೆ ಮುಂದಾದರು. ಆದರೆ ಮಾರ್ಕೊ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಹೀಗಾಗಿ ಮೊದಲ ಸುತ್ತಿನಲ್ಲಿ ನಿಶಾಂತ್ ಮುನ್ನಡೆ ಸಾಧಿಸಿದರು.
(5 / 7)
2ನೇ ಸುತ್ತಿನಲ್ಲಿ ಭಾರತದ ಸ್ಟಾರ್ ಆಟಗಾರ ಆರಂಭದಿಂದಲೂ ಮೆಕ್ಸಿಕನ್ ಎದುರಾಳಿಯ ಮೇಲೆ ಒತ್ತಡ ಹೇರಿದರು. ಆದರೆ, ಅದು ಅಂಕವಾಗಿ ಮಾರ್ಪಡಲು ಸಾಧ್ಯವಾಗಿಲ್ಲ. ಮಾರ್ಕೊ ಅದ್ಭುತ ಪಂಚ್ ಮೂಲಕ ಗಮನ ಸೆಳೆದು ಅಂಕ ಪಡೆದರು. ಆಗ ಸ್ಕೋರ್ 1-1 ಸಮಬಲಗೊಂಡಿತು.
(6 / 7)
ಮಾರ್ಕೊ ಉಳಿದ ಮೂರು ಸುತ್ತುಗಳಲ್ಲೂ ಮೇಲುಗೈ ಸಾಧಿಸಿದರು. ನಿಶಾಂತ್ಗೆ ಯಾವುದೇ ಅವಕಾಶ ನೀಡದೆ ದಾಳಿ ನಡೆಸಿದರು. ಪರಿಣಾಮ 4-1 ರಿಂದ ಗೆದ್ದು ಬೀಗಿದರು. ಇದರೊಂದಿಗೆ ನಿಶಾಂತ್ ಒಲಿಂಪಿಕ್ ಪದಕವನ್ನು ಕಳೆದುಕೊಂಡರು.
ಇತರ ಗ್ಯಾಲರಿಗಳು