Sanjay Raut: ಸಾವರ್ಕರ್, ಹಿಂದುತ್ವದ ಬಗ್ಗೆ ಯಾವುದೇ ರಾಜಿ ಸಾಧ್ಯವಿಲ್ಲ: ಕಾಂಗ್ರೆಸ್‌ಗೆ ಮೈತ್ರಿ ಉಪದೇಶ ಮಾಡಿದ ರಾವತ್!
- ಮುಂಬೈ: ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್ ಮತ್ತು ಹಿಂದುತ್ವ ಸಿದ್ಧಾಂತದ ವಿಷಯದಲ್ಲಿ ನಾವು ಯಾವುದೇ ರಾಜಿಗೆ ಸಿದ್ಧವಿಲ್ಲ ಎಂದು ಶಿವಸೇನೆ(ಉದ್ಧವ್ ಠಾಕ್ರೆ ಬಣ) ನಾಯಕ ಸಂಜಯ್ ರಾವತ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಸಂಜಯ್ ರಾವತ್ ಮಿತ್ರ ಪಕ್ಷ ಕಾಂಗ್ರೆಸ್‌ಗೆ ಮೈತ್ರಿಧರ್ಮದ ಉಪದೇಶ ಮಾಡಿದ್ದಾರೆ. ಈ ಕುರಿತಾದ ಮಾಹಿತಿ ಇಲ್ಲಿದೆ..

(1 / 5)
ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್ ಮಹಾರಾಷ್ಟ್ರ ಮತ್ತು ಭಾರತದ ಹೆಮ್ಮೆ. ಅವರ ಬಗ್ಗೆ ಯಾರೇ ಕೀಳಾಗಿ ಮಾತನಾಡಿದರೂ ನಾವು ಅದನ್ನು ವಿರೋಧಿಸುತ್ತೇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಾವರ್ಕರ್ ಅವರನ್ನು ಹೇಡಿ ಎಂದು ಕರೆದಿರುವುದನ್ನು ನಾವು ಒಪ್ಪಲು ಸಿದ್ಧವಿಲ್ಲ ಎಂದು ಸಂಜಯ್ ರಾವತ್ ಸ್ಪಷ್ಟಪಡಿಸಿದ್ದಾರೆ. (ಸಂಗ್ರಹ ಚಿತ್ರ)(PTI)
(2 / 5)
ಶಿವಸೇನೆ ಹಿಂದುತ್ವ ಸಿದ್ಧಾಂತದ ಆಧಾರದ ಮೇಲೆ ರಚಿತವಾದ ಪಕ್ಷ. ಹಿಂದುತ್ವ ಮತ್ತು ಶಿವಸೇನೆಯನ್ನು ಪರಸ್ಪರ ಬೇರ್ಪಡಿಸಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಮಿಯತ್ರ ಪಕ್ಷವಾಗಿರುವ ಕಾಂಗ್ರೆಸ್, ಮೈತ್ರಿಧರ್ಮವನ್ನು ಅನುಸರಿಸಿ, ನಮ್ಮ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಜಯ್ ರಾವತ್ ಆಗ್ರಹಿಸಿದ್ದಾರೆ.(ಸಂಗ್ರಹ ಚಿತ್ರ)(HT_PRINT)
(3 / 5)
ನಾವು ಸೈದ್ಧಾಂತಿಕ ಭಿನ್ನಾಭಿಪ್ರಾಯ ಹೊಂದಿರುವ ಪಕ್ಷದೊಂದಿಗೆ ಮೈತ್ರಿಯಲ್ಲಿದ್ದೇವೆ ಎಂಬುದು ನಮಗೆ ಗೊತ್ತಿದೆ. ಆದರೆ ಈ ಮೈತ್ರಿ ಸಾಮಾನ್ಯ ಕಾರ್ಯಸೂಚಿಯ ಮೇಲೆ ಕೆಲಸ ಮಾಡುತ್ತದೆ. ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಮೈತ್ರಿ ಮಾಡಿಕೊಂಡಿದ್ದೇವೆಯೇ ಹೊರತು, ಇದನ್ನೇ ನಮ್ಮ ದೌರ್ಬಲ್ಯ ಎಂದು ಯಾರೂ ಭಾವಿಸಬಾರದು ಎಂದು ಸಂಜಯ್ ರಾವತ್ ಕಾಂಗ್ರೆಸ್‌ಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದರು.(ಸಂಗ್ರಹ ಚಿತ್ರ)(PTI)
(4 / 5)
ಶಿವಸೇನೆಯಲ್ಲಿ ಯಾವುದೇ ಬಣ ಇಲ್ಲ ಎಂದು ಹೇಳಿರುವ ಸಂಜಯ್ ರಾವತ್, ರಾಜಕೀಯ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ರಚನೆಯಾಗಿರುವ ಈ ಬಣಗಳು ಶೀಘ್ರದಲ್ಲೇ ಒಂದಾಗಲಿವೆ ಎಂದು ಭರವಸೆ ವ್ಯಕ್ತಪಡಿಸಿದರು. ಮಹಾರಾಷ್ಟ್ರದ ಜನತೆ ಭಾಳ್ ಸಾಹೇಬ್ ಠಾಕ್ರೆ ಅವರ ಶಿವಸೇನೆಯನ್ನು ಮಾತ್ರ ಒಪ್ಪುತ್ತಾರೆಯೇ ಹೊರತು ಶಿಂಧೆ ಬಣವನ್ನಲ್ಲ ಎಂದು ಸಂಜಯ್ ರಾವತ್ ಮಾರ್ಮಿಕವಾಗಿ ಹೇಳಿದ್ದಾರೆ.(ಸಂಗ್ರಹ ಚಿತ್ರ)(PTI)
ಇತರ ಗ್ಯಾಲರಿಗಳು