Udupi Sri Krishna Math: ಇನ್ನು ಮುಂದೆ ಉಡುಪಿ ಶ್ರೀಕೃಷ್ಣ ಮಠದ ಸುತ್ತಲೂ ಮದುವೆ ಹಾಗೂ ಮದುವೆಗೆ ಮುನ್ನ ಜೋಡಿ ಫೋಟೋಶೂಟ್‌ಗಿಲ್ಲ ಅನುಮತಿ
- ಉಡುಪಿ ಶ್ರೀ ಕೃಷ್ಣ ಮಠವು ಧಾರ್ಮಿಕ ವಾತಾವರಣದಲ್ಲಿ ಕೆಲವರ ಅನುಚಿತ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇನ್ನು ಮುಂದಿನ ದಿನಗಳಲ್ಲಿ ದೇವಸ್ಥಾನ ಸುತ್ತ ಮದುವೆ ಹಾಗೂ ಮದುವೆಗೆ ಮುನ್ನ ಜೋಡಿ ಫೋಟೋಶೂಟ್ ನಿರ್ಭಂದಿಸಿದೆ.
- ಉಡುಪಿ ಶ್ರೀ ಕೃಷ್ಣ ಮಠವು ಧಾರ್ಮಿಕ ವಾತಾವರಣದಲ್ಲಿ ಕೆಲವರ ಅನುಚಿತ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇನ್ನು ಮುಂದಿನ ದಿನಗಳಲ್ಲಿ ದೇವಸ್ಥಾನ ಸುತ್ತ ಮದುವೆ ಹಾಗೂ ಮದುವೆಗೆ ಮುನ್ನ ಜೋಡಿ ಫೋಟೋಶೂಟ್ ನಿರ್ಭಂದಿಸಿದೆ.
(1 / 6)
ಉಡುಪಿ ಶ್ರೀ ಕೃಷ್ಣ ಮಠವು ಧಾರ್ಮಿಕ ವಾತಾವರಣದಲ್ಲಿ ಕೆಲವರ ಅನುಚಿತ ನಡವಳಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಜೋಡಿ ಫೋಟೋಶೂಟ್ ಮಾಡುವಂತಿಲ್ಲ ಎಂಬ ಸೂಚನೆ ನೀಡಿದೆ.
(Canva)(2 / 6)
ಅದರಲ್ಲೂ ಮುಖ್ಯವಾಗಿ ಉಡುಪಿ ರಥಬೀದಿಯಲ್ಲಿ ನಿಷೇಧ ಜಾರಿಯಾಗಿದೆ. ಶ್ರೀಕೃಷ್ಣ ಮಠ ಈ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದೆ.
(3 / 6)
ಶ್ರೀಕೃಷ್ಣಮಠ ಪಾರಂಪರಿಕ ಕಟ್ಟಡಗಳಿರುವ ತಾಣವಾಗಿರುವ ಕಾರಣ ಸಾಕಷ್ಟು ಜನ ಬಂದು ಈ ಸುಂದರ ತಾಣದಲ್ಲೇ ಫೋಟೋ ತೆಗೆಸಿಕೊಳ್ಳಬೇಕೆಂಬ ಬಯಕೆ ಹೊಂದಿರುತ್ತಾರೆ.
(4 / 6)
ಸ್ವಾಮೀಜಿಗಳ ಓಡಾಟಕ್ಕೆ ಮತ್ತು ಅಲ್ಲಿನ ಸಾರ್ವಜನಿಕರಿಗೆ ಮುಜುಗರ ಉಂಟಾಗುತ್ತಿದ್ದ ಕಾರಣಕ್ಕಾಗಿ ಈ ನಿರ್ಧಾರಕ್ಕೆ ಬರಲಾಗಿದೆ.
(Canva)(5 / 6)
ಅಷ್ಟ ಮಠಾಧೀಶರು ಓಡಾಡುವ ರಥಬೀದಿ. ನೂರಾರು ವರ್ಷಗಳಿಂದ ಯತಿಗಳು, ದಾಸರು ನಡೆದಾಡುವ ಪವಿತ್ರ ಜಾಗ. ಇದಕ್ಕೆ ಪಾವಿತ್ರ್ಯತೆ ಇದೆ. ಪ್ರತಿದಿನ ರಥಬೀದಿಯಲ್ಲಿ ದೇವರ ಉತ್ಸವ ನಡೆಯುತ್ತಿದೆ. ಇಂತಹ ಪವಿತ್ರ ಸ್ಥಳಗಳಲ್ಲಿ ಫೋಟೋಶೂಟ್, ಜೋಡಿಗಳ ಸರಸ ಸರಿಯಲ್ಲ. ಮುಜುಗರದ ಸನ್ನಿವೇಶ ತಪ್ಪಿಸಲು ಮಠ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ.
ಇತರ ಗ್ಯಾಲರಿಗಳು