ಕನ್ನಡ ಸುದ್ದಿ  /  Photo Gallery  /  No Proposal To Conduct Neet Ug Exam Twice A Year Government Clarifies

NEET UG: ವಿದ್ಯಾರ್ಥಿಗಳೇ ಗಮನಿಸಿ.. ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ನೀಟ್‌ ಯುಜಿ ಪರೀಕ್ಷೆ? ಸರ್ಕಾರ ಹೇಳಿದ್ದೇನು?

  • ಭಾರತದಲ್ಲಿನ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಪದವಿಪೂರ್ವ ಮಟ್ಟದಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-UG) ಆಯೋಜಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಈ ಪರೀಕ್ಷೆಯನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು, 12ನೇ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ನೀಟ್‌ ಯುಜಿ ರೀಕ್ಷೆಗೆ ಹಾಜರಾಗುತ್ತಾರೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ವೈದ್ಯಕೀಯ ಪ್ರವೇಶಕ್ಕೆ ಪ್ರಯತ್ನಿಸಲು ಇನ್ನೊಂದು ವರ್ಷ ಕಾಯಬೇಕು.

ಇತ್ತೀಚೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಚಂದ್ ಬಿಂದ್ ಅವರು, ವೈದ್ಯಕೀಯ ಪದವಿ ಹಂತದ ಪ್ರವೇಶಕ್ಕಾಗಿ ಆಯೋಜಿಸಲಾಗುವ ನೀಟ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದೇ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್, ನೀಟ್‌ ಯುಜಿ ಪರೀಕ್ಷೆ ಕುರಿತು ಪ್ರಮುಖ ನವೀಕರಣವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. (ಸಾಂದರ್ಭಿಕ ಚಿತ್ರ)
icon

(1 / 5)

ಇತ್ತೀಚೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ರಮೇಶ್ ಚಂದ್ ಬಿಂದ್ ಅವರು, ವೈದ್ಯಕೀಯ ಪದವಿ ಹಂತದ ಪ್ರವೇಶಕ್ಕಾಗಿ ಆಯೋಜಿಸಲಾಗುವ ನೀಟ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದೇ ಎಂದು ಪ್ರಶ್ನೆ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್, ನೀಟ್‌ ಯುಜಿ ಪರೀಕ್ಷೆ ಕುರಿತು ಪ್ರಮುಖ ನವೀಕರಣವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದರು. (ಸಾಂದರ್ಭಿಕ ಚಿತ್ರ)(HT_PRINT)

ಕೇಂದ್ರ ಸರ್ಕಾರವು ಪದವಿಪೂರ್ವ ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ನಡೆಸುವ ಯಾವುದೇ ಯೋಜನೆಯನ್ನು ಪ್ರಸ್ತುತ ಹೊಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್ ಸಂಸತ್ತಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ವರ್ಷದಲ್ಲಿ ಎರಡು ಬಾರಿ ನೆಟ್ ಯುಜಿ ಪರೀಕ್ಷೆ ನಡೆಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿವೆ ಎಂದು ಕೇಂದ್ರ ಸಚಿವರು ಹೇಳಿದರು. (ಸಾಂದರ್ಭಿಕ ಚಿತ್ರ)
icon

(2 / 5)

ಕೇಂದ್ರ ಸರ್ಕಾರವು ಪದವಿಪೂರ್ವ ಪ್ರವೇಶಕ್ಕಾಗಿ ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಅರ್ಹತಾ ಪರೀಕ್ಷೆಯನ್ನು ನಡೆಸುವ ಯಾವುದೇ ಯೋಜನೆಯನ್ನು ಪ್ರಸ್ತುತ ಹೊಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಭಾರತಿ ಪ್ರಬನ್ ಪವಾರ್ ಸಂಸತ್ತಿಗೆ ತಿಳಿಸಿದರು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅವಕಾಶ ನೀಡಲು ವರ್ಷದಲ್ಲಿ ಎರಡು ಬಾರಿ ನೆಟ್ ಯುಜಿ ಪರೀಕ್ಷೆ ನಡೆಸುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತಿಳಿಸಿವೆ ಎಂದು ಕೇಂದ್ರ ಸಚಿವರು ಹೇಳಿದರು. (ಸಾಂದರ್ಭಿಕ ಚಿತ್ರ)(HT)

ಏತನ್ಮಧ್ಯೆ, ಈ ವರ್ಷದ ನೀಟ್‌ ಯುಜಿ ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಮಾರ್ಚ್ 6ರಿಂದ ಪ್ರಾರಂಭವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಪ್ರಸ್ತುತ ಪದವಿ ಮಟ್ಟದಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ದೇಶದಲ್ಲಿ 660 ವೈದ್ಯಕೀಯ ಕಾಲೇಜುಗಳಿವೆ. 2014ರಲ್ಲಿ ಆ ಸಂಖ್ಯೆ 387 ಆಗಿತ್ತು. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಶೇ. 71ರಷ್ಟು ಹೆಚ್ಚಾಗಿದೆ. ಏತನ್ಮಧ್ಯೆ, ಸ್ನಾತಕೋತ್ತರ ಪದವಿಯ ಸೀಟುಗಳ ಸಂಖ್ಯೆಯೂ ಸುಮಾರು ಶೇ. 110ರಷ್ಟು ಪ್ರಸ್ತುತ ದೇಶದಲ್ಲಿ ಪದವಿ ಹಂತದಲ್ಲಿ 63,335 ಸೀಟುಗಳಿವೆ. (ಸಾಂದರ್ಭಿಕ ಚಿತ್ರ
icon

(3 / 5)

ಏತನ್ಮಧ್ಯೆ, ಈ ವರ್ಷದ ನೀಟ್‌ ಯುಜಿ ಪರೀಕ್ಷೆಯ ನೋಂದಣಿ ಪ್ರಕ್ರಿಯೆಯು ಮಾರ್ಚ್ 6ರಿಂದ ಪ್ರಾರಂಭವಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ, ಪ್ರಸ್ತುತ ಪದವಿ ಮಟ್ಟದಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ದೇಶದಲ್ಲಿ 660 ವೈದ್ಯಕೀಯ ಕಾಲೇಜುಗಳಿವೆ. 2014ರಲ್ಲಿ ಆ ಸಂಖ್ಯೆ 387 ಆಗಿತ್ತು. ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ ಶೇ. 71ರಷ್ಟು ಹೆಚ್ಚಾಗಿದೆ. ಏತನ್ಮಧ್ಯೆ, ಸ್ನಾತಕೋತ್ತರ ಪದವಿಯ ಸೀಟುಗಳ ಸಂಖ್ಯೆಯೂ ಸುಮಾರು ಶೇ. 110ರಷ್ಟು ಪ್ರಸ್ತುತ ದೇಶದಲ್ಲಿ ಪದವಿ ಹಂತದಲ್ಲಿ 63,335 ಸೀಟುಗಳಿವೆ. (ಸಾಂದರ್ಭಿಕ ಚಿತ್ರ(HT_PRINT)

ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ ಸುಮಾರು ಶೇ. 97ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಇತ್ತೀಚೆಗೆ ಸಂಸತ್ತಿಗೆ ತಿಳಿಸಿದರು. ಅಧಿಕೃತ ಮಾಹಿತಿಯ ಪ್ರಕಾರ, 2014ರಲ್ಲಿ ದೇಶದಲ್ಲಿ ಪದವಿಪೂರ್ವ ಮಟ್ಟದಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಸೀಟುಗಳ ಸಂಖ್ಯೆ 51,358 ಆಗಿತ್ತು. ಸದ್ಯ ಸೀಟುಗಳ ಸಂಖ್ಯೆ 1 ಲಕ್ಷದ 1 ಸಾವಿರದ 43ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ 52,778 ಸೀಟುಗಳಿವೆ. ಮತ್ತೊಂದೆಡೆ, ಖಾಸಗಿ ವೈದ್ಯಕೀಯ ಕಾಲೇಜುಗಳು 48,265 ಸೀಟುಗಳನ್ನು ಹೊಂದಿವೆ. (ಸಾಂದರ್ಭಿಕ ಚಿತ್ರ)
icon

(4 / 5)

ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ ಸುಮಾರು ಶೇ. 97ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಇತ್ತೀಚೆಗೆ ಸಂಸತ್ತಿಗೆ ತಿಳಿಸಿದರು. ಅಧಿಕೃತ ಮಾಹಿತಿಯ ಪ್ರಕಾರ, 2014ರಲ್ಲಿ ದೇಶದಲ್ಲಿ ಪದವಿಪೂರ್ವ ಮಟ್ಟದಲ್ಲಿ ವೈದ್ಯಕೀಯ ಅಧ್ಯಯನಕ್ಕಾಗಿ ಸೀಟುಗಳ ಸಂಖ್ಯೆ 51,358 ಆಗಿತ್ತು. ಸದ್ಯ ಸೀಟುಗಳ ಸಂಖ್ಯೆ 1 ಲಕ್ಷದ 1 ಸಾವಿರದ 43ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸರ್ಕಾರಿ ಕಾಲೇಜುಗಳಲ್ಲಿ 52,778 ಸೀಟುಗಳಿವೆ. ಮತ್ತೊಂದೆಡೆ, ಖಾಸಗಿ ವೈದ್ಯಕೀಯ ಕಾಲೇಜುಗಳು 48,265 ಸೀಟುಗಳನ್ನು ಹೊಂದಿವೆ. (ಸಾಂದರ್ಭಿಕ ಚಿತ್ರ)(HT)

ಸರ್ಕಾರದ ಅಂಕಿಅಂಶಗಳ ಪ್ರಕಾರ, ತಮಿಳುನಾಡು ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಸೀಟುಗಳನ್ನು ಹೊಂದಿದೆ. ಆ ರಾಜ್ಯದ ಸೀಟುಗಳ ಸಂಖ್ಯೆ 11,225. ಕರ್ನಾಟಕ 11,020 ಸ್ಥಾನಗಳೊಂದಿಗೆ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ. ನಂತರದ ಪಟ್ಟಿಯಲ್ಲಿ ಮಹಾರಾಷ್ಟ್ರ (10,295), ಉತ್ತರ ಪ್ರದೇಶ (9,253), ತೆಲಂಗಾಣ (7,415), ಗುಜರಾತ್ (6,600), ಆಂಧ್ರಪ್ರದೇಶ (5,365), ರಾಜಸ್ಥಾನ (5,075) ಇವೆ. ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಒಂಬತ್ತನೇ ಸ್ಥಾನದಲ್ಲಿದೆ. ಈ ರಾಜ್ಯದ ವೈದ್ಯಕೀಯ ಸೀಟುಗಳ ಸಂಖ್ಯೆ 4,825. (ಸಾಂದರ್ಭಿಕ ಚಿತ್ರ)
icon

(5 / 5)

ಸರ್ಕಾರದ ಅಂಕಿಅಂಶಗಳ ಪ್ರಕಾರ, ತಮಿಳುನಾಡು ದೇಶದಲ್ಲೇ ಅತಿ ಹೆಚ್ಚು ವೈದ್ಯಕೀಯ ಸೀಟುಗಳನ್ನು ಹೊಂದಿದೆ. ಆ ರಾಜ್ಯದ ಸೀಟುಗಳ ಸಂಖ್ಯೆ 11,225. ಕರ್ನಾಟಕ 11,020 ಸ್ಥಾನಗಳೊಂದಿಗೆ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ. ನಂತರದ ಪಟ್ಟಿಯಲ್ಲಿ ಮಹಾರಾಷ್ಟ್ರ (10,295), ಉತ್ತರ ಪ್ರದೇಶ (9,253), ತೆಲಂಗಾಣ (7,415), ಗುಜರಾತ್ (6,600), ಆಂಧ್ರಪ್ರದೇಶ (5,365), ರಾಜಸ್ಥಾನ (5,075) ಇವೆ. ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಒಂಬತ್ತನೇ ಸ್ಥಾನದಲ್ಲಿದೆ. ಈ ರಾಜ್ಯದ ವೈದ್ಯಕೀಯ ಸೀಟುಗಳ ಸಂಖ್ಯೆ 4,825. (ಸಾಂದರ್ಭಿಕ ಚಿತ್ರ)(HT)


IPL_Entry_Point

ಇತರ ಗ್ಯಾಲರಿಗಳು