Bagalkot Holi 2025: ಬಾಗಲಕೋಟೆಯಲ್ಲಿ ಹೋಳಿ ಹಬ್ಬದ ಸಡಗರವೋ ಸಡಗರ; ಸತತ ನಾಲ್ಕು ದಿನಗಳ ರಂಗು ರಂಗಿನ ಕ್ಷಣಗಳು ಹೀಗಿವೆ
- Bagalkot Holi 2025: ಬಾಗಲಕೋಟೆ ಹೋಳಿ ಹಬ್ಬಕ್ಕೆ ತನ್ನದೇಯಾದ ಇತಿಹಾಸ ಮತ್ತು ಪರಂಪರೆ ಇದೆ. ಇಡೀ ದೇಶದಲ್ಲಿಯೇ ಹತ್ತು ದಿನಗಳ ಕಾಲ ಹೋಳಿ ಹಬ್ಬ ಆಚರಿಸುವ ಕಲ್ಕತ್ತಾ ಬಿಟ್ಟರೆ ಐದು ದಿನಗಳ ಕಾಲ ನಡೆಯುವ ಬಾಗಲಕೋಟೆ ಹೋಳಿ ಹಬ್ಬ ರಾಷ್ಟ್ರೀಯ ಹಬ್ಬವಾಗಿ ಈಗ ಗುರುತಿಸಿಕೊಂಡಿದೆ

(1 / 11)
ಹೋಳಿ ಹಬ್ಬ ಎಂದರೆ ಅದು ಬಣ್ಣಗಳ ಹಬ್ಬವೇ. ಅದರಲ್ಲೂ ಜನರು ಸೇರಿ ಖುಷಿಯಿಂದ ಆಚರಿಸುವ ಹೋಳಿ ಸಡಗರ ಕರ್ನಾಟಕದಲ್ಲಿ ಜೋರಾಗಿಯೇ ಇದೆ.
(incredible Bagalkot)(2 / 11)
ಬಾಗಲಕೋಟೆಯಲ್ಲಿ ವಿವಿಧ ಪ್ರದೇಶದವರು ಬಣ್ಣದ ಬಂಡಿಯನ್ನು ನಿರ್ಮಿಸಿ ಪ್ರಮುಖ ರಸ್ತೆಯಲ್ಲಿ ಬಣ್ಣ ಆಡುವುದು ಇಲ್ಲಿನ ವಿಶೇಷ.
(3 / 11)
ಈ ಬಾರಿ ಬಾಗಲಕೋಟೆಯ ಹೋಳಿ ಹಬ್ಬದ ಸಡಗರಕ್ಕೆ ಡಿ ಬಾಸ್ ದರ್ಶನ್ ಕೂಡ ಆಗಮಿಸಿದ್ದರು. ಅದು ಅಭಿಮಾನಿಗಳು ಹಿಡಿದ ಫೋಟೋ ರೂಪದಲ್ಲಿ.
(5 / 11)
ಬಾಗಲಕೋಟೆಯ ಖಿಲ್ಲಾ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಹೋಳಿ ನಡೆಯುತ್ತದೆ. ಎಲ್ಲಾ ಜಂಜಾಟಗಳನ್ನು ಮರೆದು ಮೂರ್ನಾಲ್ಕು ದಿನ ಯುವಕರು ಹೋಳಿ ಆಡುತ್ತಾರೆ.
(6 / 11)
ಬಾಗಲಕೋಟೆಯ ಬಸವೇಶ್ವರ ವೃತ್ತದ ಬಳಿ ಹೋಳಿ ಹಬ್ಬದ ಬಂಡಿಗಳ ಸಮಾಗಮ ನಿರಂತರ ಬಣ್ಣ ಉಗ್ಗಿ ಕುಣಿದು ಕುಪ್ಪಳಿಸುವ ವಾತಾವರಣ ನೋಡುವುದೇ ಚಂದ.
(8 / 11)
ಅದರಲ್ಲೂ ಬಣ್ಣ ಬಂಡಿಗಳೇ ಬಾಗಲಕೋಟೆ ವಿಶೇಷ. ಬಗೆ ಬಗೆಯ ಬಣ್ಣಗಳಿಂದ ಬಂಡಿಗಳನ್ನು ಕಟ್ಟಿ ಮೆರವಣಿಗೆಯಲ್ಲಿ ಬರುವ ಯುವಕರು ಹೋಳಿ ಆಡಿ ಖುಷಿ ಪಡುತ್ತಾರೆ.
(10 / 11)
ಬಣ್ಣದ ಬಂಡಿಗಳು ಸಾಲುಪಟ್ಟಿ ಹೋಗುವಾಗ ಅಲ್ಲಲ್ಲಿ ಯುವಕರ ಮೇಲೆ ಬಣ್ಣವನ್ನು ಎರಚುವುದು, ಅವರೂ ಬಣ್ಣ ಎರಚಿ ಖುಷಿ ಪಡುವುದು ಬಾಗಲಕೋಟೆಯಲ್ಲಿ ಕಂಡು ಬರುತ್ತದೆ.
ಇತರ ಗ್ಯಾಲರಿಗಳು