Mallu Jamkhandi: ನನ್ನಾಕಿ ಬಳಿಕ ಮತ್ತೊಂದು ಹೊಸ ಸಿನಿಮಾ ಮೂಲಕ ಆಗಮಿಸಿದ ಉತ್ತರ ಕರ್ನಾಟಕದ ಯೂಟ್ಯೂಬರ್‌ ಮಲ್ಲು ಜಮಖಂಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Mallu Jamkhandi: ನನ್ನಾಕಿ ಬಳಿಕ ಮತ್ತೊಂದು ಹೊಸ ಸಿನಿಮಾ ಮೂಲಕ ಆಗಮಿಸಿದ ಉತ್ತರ ಕರ್ನಾಟಕದ ಯೂಟ್ಯೂಬರ್‌ ಮಲ್ಲು ಜಮಖಂಡಿ

Mallu Jamkhandi: ನನ್ನಾಕಿ ಬಳಿಕ ಮತ್ತೊಂದು ಹೊಸ ಸಿನಿಮಾ ಮೂಲಕ ಆಗಮಿಸಿದ ಉತ್ತರ ಕರ್ನಾಟಕದ ಯೂಟ್ಯೂಬರ್‌ ಮಲ್ಲು ಜಮಖಂಡಿ

  • ಉತ್ತರ ಕರ್ನಾಟಕದಲ್ಲಿ ಕಿರು ಹಾಸ್ಯ ವಿಡಿಯೋಗಳ ಮೂಲಕವೇ ಗಮನ ಸೆಳೆದವರು ಮಲ್ಲು ಜಮಖಂಡಿ. ಯೂಟ್ಯೂಬ್‌ನಲ್ಲಿ 25 ಲಕ್ಷ ಸನಿಹ ಸಬ್‌ಸ್ಕ್ರೈಬರ್ಸ್‌ ಹೊಂದಿರುವ ಮಲ್ಲು ಜಮಖಂಡಿ, ಕಳೆದ ವರ್ಷ ನನ್ನಾಕಿ ಎಂಬ ಸಿನಿಮಾದ ಮೂಲಕ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈಗ ಇನ್ನೊಂದು ಹೊಸ ಸಿನಿಮಾದೊಂದಿಗೆ ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಶೀರ್ಷಿಕೆಯೂ ರಿವೀಲ್‌ ಆಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಕಾಮಿಡಿ ವಿಡಿಯೋಗಳ ಮೂಲಕವೇ ಕರ್ನಾಟಕದ ಗಮನ ಸೆಳೆದಿದ್ದಾರೆ ಮಲ್ಲು ಜಮಖಂಡಿ ಮತ್ತವರ ತಂಡ. 
icon

(1 / 9)

(Instagram\ Mallu Jamakhandi)

ಉತ್ತರ ಕರ್ನಾಟಕದ ಭಾಷಾ ಸೊಗಡಿನಲ್ಲಿಯೇ ಅಲ್ಲಿನ ಸಣ್ಣ ಸಣ್ಣ ಕಥೆಗಳಿಗೆ ಹಾಸ್ಯದ ಲೇಪನ ಮಾಡಿ, ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡುವ ಮೂಲಕ ಲಕ್ಷಾಂತರ ಸಬ್‌ಸ್ಕ್ರೈಬರ್ಸ್‌ ಗಳಿಸಿದ್ದಾರೆ. 
icon

(2 / 9)

ಕಾಮಿಡಿ ಕಿರುಚಿತ್ರಗಳಷ್ಟೇ ಅಲ್ಲದೆ, ಕನ್ನಡದ ಸಿನಿಮಾಗಳ ಪ್ರಮೋಷನ್‌ನಲ್ಲಿಯೂ ಈ ತಂಡ ಬಿಜಿಯಾಗಿದೆ. ಕಳೆದ ಎರಡು ವರ್ಷಗಳಿಂದ ಹೊಸ ಸಿನಿಮಾ ತಂಡಗಳ ಜತೆ ಸೇರಿ ಪ್ರಚಾರ ಮಾಡುತ್ತಿದೆ. 
icon

(3 / 9)

ಸಿನಿಮಾ ತಂಡಗಳ ಜತೆಗಿನ ಸಂಪರ್ಕ ಮುಂದುವರಿಯುತ್ತಿದ್ದಂತೆ, ಮನದೊಳಗಿದ್ದ ಆಸೆಯೊಂದನ್ನೂ ಮಲ್ಲು ಜಮಖಂಡಿ ಕಳೆದ ವರ್ಷ ಈಡೇರಿಸಿಕೊಂಡಿದ್ದರು. 
icon

(4 / 9)

ನನ್ನಾಕಿ ಅನ್ನೋ ಸಿನಿಮಾ ಮಾಡಿ, ಉತ್ತರ ಕರ್ನಾಟಕ ಭಾಗದ ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಮಾಡಿದ್ದರು. ಈ ಮೊದಲ ಪ್ರಯತ್ನಕ್ಕೆ ಮೆಚ್ಚುಗೆಯೂ ಸಿಕ್ಕಿತ್ತು.
icon

(5 / 9)

ಇದೀಗ ಸದ್ದಿಲ್ಲದೆ ಇನ್ನೊಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಇತ್ತೀಚೆಗಷ್ಟೇ ಆ ಸಿನಿಮಾದ ಶೀರ್ಷಿಕೆ ಅನಾವರಣವೂ ಆಗಿದೆ. ಆ ಚಿತ್ರಕ್ಕೆ ವಿದ್ಯಾಗಣೇಶ ಎಂದು ಹೆಸರಿಡಲಾಗಿದೆ.
icon

(6 / 9)

ಕತೆ ಚಿತ್ರಕತೆ ಬರೆದು ಉಮೇಶ್ಚಂದ್ರ ಎಂಬುವವರು ವಿದ್ಯಾಗಣೇಶ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಚೇತನ್‌ ಆರ್‌ ಈ ಸಿನಿಮಾದ ನಿರ್ಮಾಪಕರು. ಶೇಖರ್‌ ಚಂದ್ರು ಸಹ ನಿರ್ಮಾಪಕರು. 
icon

(7 / 9)

ಉತ್ತರ ಕರ್ನಾಟಕ ಭಾಗದಲ್ಲಿಯೇ ಬಹುತೇಕ ಶೂಟಿಂಗ್‌ ಸಹ ಮುಗಿದಿದ್ದು, ಇನ್ನೇನು ಶೀಘ್ರದಲ್ಲಿ ಈ ಸಿನಿಮಾ ತೆರೆಗೆ ತರುವ ಪ್ಲಾನ್‌ ಚಿತ್ರತಂಡದ್ದು. 
icon

(8 / 9)

ವಿದ್ಯಾಗಣೇಶ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್
icon

(9 / 9)

ವಿದ್ಯಾಗಣೇಶ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್

ಇತರ ಗ್ಯಾಲರಿಗಳು