ರೋಹಿತ್, ಕೊಹ್ಲಿ, ಶಮಿ ಅಲ್ಲವೇ ಅಲ್ಲ; ಈತ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಎಂದ ಗಂಭೀರ್
- ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಯಾರು ಎಂಬುದನ್ನು ಗೌತಮ್ ಗಂಭೀರ್ ಹೆಸರಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹೆಸರನ್ನು ನಿರ್ಲಕ್ಷಿಸಿದ್ದಾರೆ.
- ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ದೊಡ್ಡ ಗೇಮ್ ಚೇಂಜರ್ ಯಾರು ಎಂಬುದನ್ನು ಗೌತಮ್ ಗಂಭೀರ್ ಹೆಸರಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಮೊಹಮ್ಮದ್ ಶಮಿ ಹೆಸರನ್ನು ನಿರ್ಲಕ್ಷಿಸಿದ್ದಾರೆ.
(1 / 11)
ಪ್ರಸಕ್ತ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ದೊಡ್ಡ ಗೇಮ್ ಚೇಂಜರ್ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.(Seshadri Sukumar)
(2 / 11)
ಟೂರ್ನಿಯಲ್ಲಿ ಭಾರತ ನೀಡಿರುವ ಪ್ರದರ್ಶನ ಗಮನಿಸಿದರೆ ಗೇಮ್ ಚೇಂಜರ್ ಆಯ್ಕೆ ಸುಲಭವಲ್ಲ. ಆದರೆ, ಗಂಭೀರ್ ಮಾತ್ರ ಅಯ್ಯರ್ಗೆ ವೋಟು ಹಾಕಿದ್ದಾರೆ.(ANI)
(3 / 11)
ಆ ಮೂಲಕ ರೋಹಿತ್ ಶರ್ಮಾ (550 ರನ್), ವಿರಾಟ್ ಕೊಹ್ಲಿ (711 ರನ್) ಹಾಗೂ ಮೊಹಮ್ಮದ್ ಶಮಿ (23 ವಿಕೆಟ್) ಅವರ ಹೆಸರನ್ನು ನಿರ್ಲಕ್ಷಿಸಿದ್ದಾರೆ.
(4 / 11)
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿರುವ ಗಂಭೀರ್, ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ನಲ್ಲಿ 70 ಎಸೆತಗಳಲ್ಲೇ 105 ರನ್ ಗಳಿಸಿದ ಅಯ್ಯರ್ ಗೇಮ್ ಚೇಂಜರ್ ಎಂದಿದ್ದಾರೆ.(PTI)
(5 / 11)
ಆಸ್ಟ್ರೇಲಿಯಾ ಎದುರಿನ ಫೈನಲ್ ಪಂದ್ಯದಲ್ಲೂ ಭಾರತ ಟ್ರೋಫಿ ಗೆಲ್ಲಲು ಶ್ರೇಯಸ್ ಅಯ್ಯರ್ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.(PTI)
(6 / 11)
ಫೈನಲ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್ ವೆಲ್ ಹಾಗೂ ಆ್ಯಡಂ ಜಂಪಾ ಬೌಲಿಂಗ್ ಅನ್ನು ಶ್ರೇಯಸ್ ಅಯ್ಯರ್ ದಿಟ್ಟವಾಗಿ ಎದುರಿಸಲಿದ್ದಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.(ANI)
(7 / 11)
ಗಾಯದ ಸಮಸ್ಯೆಯಿಂದ ಅಯ್ಯರ್ ತಮ್ಮ ಸ್ಥಾನಕ್ಕಾಗಿ ಹೋರಾಟ ನಡೆಸಿದ್ದರು. ಆದರೀಗ ಅವರ ಸುಭದ್ರವಾಗಿದೆ. ಸೆಮಿಫೈನಲ್ನಲ್ಲಿ 67 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದು, ಅತ್ಯುತ್ತಮ ಇನಿಂಗ್ಸ್ ಆಗಿದೆ ಎಂದರು.(ANI)
(8 / 11)
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅಯ್ಯರ್ ಆಡಿದ 10 ಪಂದ್ಯಗಳಲ್ಲಿ 113 ಸ್ಟ್ರೆಕ್ರೇಟ್ನಲ್ಲಿ 526 ರನ್ ಕಲೆ ಹಾಕಿದ್ದಾರೆ. ಕಳೆದ 4 ಪಂದ್ಯಗಳಿಂದ ರನ್ ಹೊಳೆ ಹರಿಸಿರುವ ಅಯ್ಯರ್, ಕ್ರಮವಾಗಿ 82, 77, 128* ಹಾಗೂ 105 ರನ್ ಸಿಡಿಸಿದ್ದಾರೆ.(ANI)
(9 / 11)
ವಿಶ್ವಕಪ್ ಇತಿಹಾಸದಲ್ಲಿ 4ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಈ ಕ್ರಮಾಂಕದಲ್ಲಿ 500 ರನ್ಗಳ ಗಡಿ ದಾಟಿದ ಮೊದಲ ಆಟಗಾರ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ.(ANI)
(10 / 11)
ವಿಶ್ವಕಪ್ನಲ್ಲಿ ಸತತ ಎರಡು ಸಿಡಿಸಿದ ಅಯ್ಯರ್, ಭಾರತದ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ರೋಹಿತ್ 2019ರ ವಿಶ್ವಕಪ್ನಲ್ಲಿ ಸತತ 2 ಶತಕ ಸಿಡಿಸಿದ್ದರು.(PTI)
ಇತರ ಗ್ಯಾಲರಿಗಳು