ಸಂಖ್ಯಾಶಾಸ್ತ್ರ: ಆರೋಗ್ಯ ಚೆನ್ನಾಗಿರುತ್ತೆ; 1 ರಿಂದ 9 ರಾಡಿಕ್ಸ್ ಸಂಖ್ಯೆಯವರು ಏ 22 ಮಂಗಳವಾರದ ಭವಿಷ್ಯ ತಿಳಿಯಿರಿ
- ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವೂ ಭವಿಷ್ಯ, ಮನೋಧರ್ಮ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಏಪ್ರಿಲ್ 22ರ ಮಂಗಳವಾರ ನಿಮ್ಮ ಭವಿಷ್ಯವನ್ನು ತಿಳಿಯಿರಿ.
- ಜ್ಯೋತಿಷ್ಯದಂತೆ, ಸಂಖ್ಯಾಶಾಸ್ತ್ರವೂ ಭವಿಷ್ಯ, ಮನೋಧರ್ಮ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿಸಿಕೊಡುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಏಪ್ರಿಲ್ 22ರ ಮಂಗಳವಾರ ನಿಮ್ಮ ಭವಿಷ್ಯವನ್ನು ತಿಳಿಯಿರಿ.
(1 / 11)
ಸಂಖ್ಯಾಶಾಸ್ತ್ರದ ಪ್ರಕಾರ, ನಿಮ್ಮ ಸಂಖ್ಯೆಗಳನ್ನು ಕಂಡುಹಿಡಿಯಲು, ನೀವು ನಿಮ್ಮ ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಯುನಿಟ್ ಅಂಕಿಗೆ ಸೇರಿಸಿದರೆ, ಆ ನಂತರ ಬರುವ ಸಂಖ್ಯೆ ನಿಮ್ಮ ಅದೃಷ್ಟ ಸಂಖ್ಯೆಯಾಗುತ್ತದೆ. ಉದಾಹರಣೆಗೆ, ತಿಂಗಳ 8, 17 ಮತ್ತು 16 ನೇ ತಾರೀಖಿನಂದು ಜನಿಸಿದವರು ರಾಡಿಕ್ಸ್ ಸಂಖ್ಯೆ 8 ಹೊಂದಿರುತ್ತಾರೆ. ಏಪ್ರಿಲ್ 22 ರ ದಿನ ಹೇಗಿರುತ್ತದೆ ಎಂದು ತಿಳಿಯಿರಿ.
(2 / 11)
ಸಂಖ್ಯೆ 1: ಕೆಲವು ದಿನಗಳ ರಜೆಯನ್ನು ಪ್ಲಾನ್ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ಉಲ್ಲಾಸದಿಂದ ಇರುತ್ತೀರಿ. ಕೆಲವರು ಆಸ್ತಿಯಲ್ಲಿ ಹೂಡಿಕೆ ಮಾಡಬಹುದು, ಆದರೆ ತಜ್ಞರಿಂದ ಸಲಹೆ ಪಡೆಯಲು ಮರೆಯಬೇಡಿ. ಆರೋಗ್ಯವೂ ಇಂದು ಚೆನ್ನಾಗಿರುತ್ತದೆ.
(3 / 11)
ಸಂಖ್ಯೆ 2: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನ ಅಗತ್ಯ. ಕಷ್ಟಸುಖವನ್ನು ಹಂಚಿಕೊಳ್ಳುವ ವ್ಯಕ್ತಿಯನ್ನು ಭೇಟಿಯಾಗುತ್ತೀರಿ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.
(4 / 11)
ಸಂಖ್ಯೆ 3: ಯಾವುದಾದರೂ ಕೆಲಸವನ್ನು ತುಂಬಾ ನಿಷ್ಠೆಯಿಂದ ಮಾಡಿ ಮುಗಿಸುತ್ತೀರಿ. ಕೆಲವರು ಕೆಲಸದ ವಿಷಯದಲ್ಲಿ ಪ್ರಶಂಸೆ ಪಡೆಯುತ್ತಾರೆ. ಹಿಂದಿನ ಹೂಡಿಕೆಗಳಿಂದ ಉತ್ತಮ ಲಾಭವನ್ನು ಪಡೆಯಬಹುದು. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.
(5 / 11)
ಸಂಖ್ಯೆ 4: ವೃತ್ತಿಜೀವನದ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ. ಕೆಲಸವನ್ನು ಪೂರ್ಣಗೊಳಿಸಲು ಹಿರಿಯರು ಅಥವಾ ಸಹೋದ್ಯೋಗಿಗಳಿಂದ ಸಲಹೆ ಪಡೆಯಲು ಹಿಂಜರಿಯಬೇಡಿ. ಪ್ರೀತಿಯ ವಿಷಯಗಳಲ್ಲಿ, ಯಾರಾದರೂ ನಿಮ್ಮಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸಬಹುದು, ಆದರೆ ನೀವು ಸರಿ ಎಂದು ಭಾವಿಸುವುದನ್ನು ಮಾಡುತ್ತೀರಿ.
(6 / 11)
ಸಂಖ್ಯೆ 5: ಉತ್ಸಾಹದಿಂದ ತುಂಬಿದ ದಿನವಾಗಿರುತ್ತದೆ. ಆರೋಗ್ಯವು ನಿಮಗೆ ಯಾವುದೇ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ಕೆಲವರ ಪೋಷಕರು ತಮ್ಮ ನಿರ್ಧಾರಗಳನ್ನು ಮಕ್ಕಳು ಗೌರವಿಸಬೇಕೆಂದು ನಿರೀಕ್ಷಿಸುತ್ತಾರೆ. ನವ ದಂಪತಿಗೆ ದಿನವು ಶುಭವಾಗಲಿದೆ.
(7 / 11)
ಸಂಖ್ಯೆ 6: ಕೆಲವರು ತಮ್ಮ ಕುಟುಂಬದೊಂದಿಗೆ ಸಣ್ಣ ಪ್ರವಾಸಕ್ಕೆ ಹೋಗಬಹುದು. ನಿಮ್ಮನ್ನ ಆರೋಗ್ಯವಾಗಿಡಲು ಹೆಚ್ಚಿನ ಪ್ರಯತ್ನ ಮಾಡಬೇಕಾಗುತ್ತದೆ. ಹಣ ಗಳಿಸಲು ಅನೇಕ ಉತ್ತಮ ಅವಕಾಶಗಳು ಸಿಗಬಹುದು. ವಿದ್ಯಾರ್ಥಿಗಳ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ.
(8 / 11)
ಸಂಖ್ಯೆ 7: ಕೆಲವು ಸಂಬಂಧಿಕರು ಅಥವಾ ಆಪ್ತರನ್ನು ಭೇಟಿಯಾಗಬಹುದು. ವಿದ್ಯಾರ್ಥಿಗಳು ಶಿಕ್ಷಣದ ವಿಷಯಗಳಲ್ಲಿ ಹೆಚ್ಚು ಶ್ರಮಿಸಬೇಕು. ಸ್ನೇಹಿತ ನಿಮ್ಮಿಂದ ಸಹಾಯ ಕೇಳಬಹುದು. ಕೆಲವು ಕಾರ್ಯಗಳಿಂದಾಗಿ ಹಣ ಖರ್ಚಾಗಬಹುದು.
(9 / 11)
ಸಂಖ್ಯೆ 8: ಪ್ರೇಮ ಜೀವನವು ಸಂಪೂರ್ಣವಾಗಿ ಸಂತೋಷವನ್ನು ಕೊಡುತ್ತದೆ. ಕೆಲಸದಲ್ಲಿ ಶ್ರದ್ಧೆಯನ್ನು ಸಾಬೀತುಪಡಿಸಲು ಹೊಸ ವೃತ್ತಿಪರ ನಿಯೋಜನೆಗಳನ್ನು ಪರಿಗಣಿಸಿ. ಆರ್ಥಿಕವಾಗಿ ಅದೃಷ್ಟವಂತರು ಮತ್ತು ಪ್ರಮುಖ ವೈದ್ಯಕೀಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ. ಜೀವನ ಸುಧಾರಣೆಗೆ ಗಮನ ನೀಡಬೇಕು.
(10 / 11)
ಸಂಖ್ಯೆ 9: ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಉತ್ತಮವಾಗಿರುತ್ತದೆ. ಪ್ರಣಯದ ದೃಷ್ಟಿಯಿಂದಲೂ ಶುಭ ದಿನವೆಂದು ಪರಿಗಣಿಸಲಾಗಿದೆ. ಹೊರಗೆ ಊಟ ಮಾಡುವುದನ್ನು ತಪ್ಪಿಸಿ. ಕಚೇರಿಯಲ್ಲಿ ಹೆಚ್ಚು ಸಮಯ ಕಳೆಯಿರಿ. ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ.
(11 / 11)
ಗಮನಿಸಿ: ಸಂಖ್ಯಾಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ಸಂಖ್ಯಾ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಸಂಖ್ಯಾಶಾಸ್ತ್ರ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ
ಇತರ ಗ್ಯಾಲರಿಗಳು