ಕನ್ನಡ ಸುದ್ದಿ  /  Photo Gallery  /  Nutritionist Shares Tips To Manage Food Allergies

Food Allergies: ಆಹಾರದ ಅಲರ್ಜಿ ನಿರ್ಲಕ್ಷಿಸಬೇಡಿ; ಪೌಷ್ಟಿಕತಜ್ಞರ ಈ ಸಲಹೆ ಒಮ್ಮೆ ಓದಿ

ನಮ್ಮ ದೇಹಕ್ಕೆ ವಿಷಾಹಾರಗಳು ಆಗಾಗ ಸೇರುತ್ತದೆ. ಇದು ಉದ್ದೇಶಪೂರಕ ಅಲ್ಲದಿದ್ದರೂ, ನಮಗೆ ತಿಳಿಯದಂತೆ ನಾವು ಸೇವಿಸುವ ಆಹಾರದೊಳಗೆ ಅವಿತಿರುತ್ತದೆ. ಹೀಗಾಗಿ ಪ್ರತಿ 6 ತಿಂಗಳಿಗೊಮ್ಮೆ ದೇಹಕ್ಕೆ ಸೇರಿರುವ ಆಹಾರವನ್ನು ನಿರ್ವಿಷಗೊಳಿಸುವುದು ಅತ್ಯಗತ್ಯ. ರಾಸಾಯನಿಕಗಳು, ಔಷಧಗಳು, ಮಾಲಿನ್ಯಕಾರಕಗಳು ಮತ್ತು ಕೀಟನಾಶಕಗಳಂತಹ ವಿಷಗಳು ಸಾಮಾನ್ಯವಾಗಿ ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಆಹಾರದಿಂದ ಆಗುವ ಅಲರ್ಜಿಯನ್ನು ಕಡಿಮೆ ಮಾಡಲು ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. 

ದೇಹಕ್ಕೆ ಆಹಾರದ ಅಲರ್ಜಿ ತುಂಬಾ ಸಾಮಾನ್ಯ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಇರುವ ಕೆಲವು ಅಂಶಗಳು ಅಥವಾ ಕಲ್ಮಶಗಳು ನಮಗೆ ಅಲರ್ಜಿ ಉಂಟುಮಾಡಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ, ಈ ಸಮಸ್ಯೆಗೆ ಕೆಲವೊಂದು ಪರಿಹಾರ ಕ್ರಮಗಳನ್ನು ತಿಳಿಸಿದ್ದಾರೆ. ಆಹಾರದಲ್ಲಿನ ಗ್ಲುಟನ್, ಲ್ಯಾಕ್ಟೋಸ್ ಮತ್ತು ಕೆಲವು ಪ್ರೋಟೀನ್‌ಗಳಂತಹ ಅಂಶಗಳಿಂದ ಅಥವಾ ಆಹಾರದಲ್ಲಿನ ಮಾಲಿನ್ಯಕಾರಕಗಳಿಂದ ಆಹಾರ ಅಲರ್ಜಿ ಉಂಟಾಗುತ್ತದೆ. ಉದಾಹರಣೆಗೆ, ಕೆಲವು ಪ್ರಿಸರ್ವೇಟಿವ್‌ಗಳು ಮತ್ತು ಕೀಟನಾಶಕಗಳು ಅಲರ್ಜಿನ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಮಾಲಿನ್ಯಕಾರಕಗಳು ಆಹಾರವನ್ನು ಸಂಗ್ರಹಿಸುವಾಗ ಅಥವಾ ಸಂಸ್ಕರಿಸುವಾಗ ಅವುಗಳೊಂದಿಗೆ ಸೇರಿಕೊಳ್ಳಬಹುದು ಎಂದು ಹೇಳಿದ್ದಾರೆ.
icon

(1 / 8)

ದೇಹಕ್ಕೆ ಆಹಾರದ ಅಲರ್ಜಿ ತುಂಬಾ ಸಾಮಾನ್ಯ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಇರುವ ಕೆಲವು ಅಂಶಗಳು ಅಥವಾ ಕಲ್ಮಶಗಳು ನಮಗೆ ಅಲರ್ಜಿ ಉಂಟುಮಾಡಬಹುದು. ಈ ಬಗ್ಗೆ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ, ಈ ಸಮಸ್ಯೆಗೆ ಕೆಲವೊಂದು ಪರಿಹಾರ ಕ್ರಮಗಳನ್ನು ತಿಳಿಸಿದ್ದಾರೆ. ಆಹಾರದಲ್ಲಿನ ಗ್ಲುಟನ್, ಲ್ಯಾಕ್ಟೋಸ್ ಮತ್ತು ಕೆಲವು ಪ್ರೋಟೀನ್‌ಗಳಂತಹ ಅಂಶಗಳಿಂದ ಅಥವಾ ಆಹಾರದಲ್ಲಿನ ಮಾಲಿನ್ಯಕಾರಕಗಳಿಂದ ಆಹಾರ ಅಲರ್ಜಿ ಉಂಟಾಗುತ್ತದೆ. ಉದಾಹರಣೆಗೆ, ಕೆಲವು ಪ್ರಿಸರ್ವೇಟಿವ್‌ಗಳು ಮತ್ತು ಕೀಟನಾಶಕಗಳು ಅಲರ್ಜಿನ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಮಾಲಿನ್ಯಕಾರಕಗಳು ಆಹಾರವನ್ನು ಸಂಗ್ರಹಿಸುವಾಗ ಅಥವಾ ಸಂಸ್ಕರಿಸುವಾಗ ಅವುಗಳೊಂದಿಗೆ ಸೇರಿಕೊಳ್ಳಬಹುದು ಎಂದು ಹೇಳಿದ್ದಾರೆ.(Unsplash)

ಪ್ರತಿ 6 ತಿಂಗಳಿಗೊಮ್ಮೆ ದೇಹವನ್ನು ನಿರ್ವಿಷಗೊಳಿಸುವುದರಿಂದ ದೇಹವು ಸ್ವಚ್ಛವಾಗುತ್ತದೆ. ರಾಸಾಯನಿಕಗಳು, ಔಷಧಗಳು, ಮಾಲಿನ್ಯಕಾರಕಗಳು ಮತ್ತು ಕೀಟನಾಶಕಗಳಂತಹ ವಿಷಗಳು ಸಾಮಾನ್ಯವಾಗಿ ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಅಂತಹ ವಿಷವನ್ನು ತೆಗೆದುಹಾಕಲು ಇದು ಅವಶ್ಯಕವಾಗಿದೆ.
icon

(2 / 8)

ಪ್ರತಿ 6 ತಿಂಗಳಿಗೊಮ್ಮೆ ದೇಹವನ್ನು ನಿರ್ವಿಷಗೊಳಿಸುವುದರಿಂದ ದೇಹವು ಸ್ವಚ್ಛವಾಗುತ್ತದೆ. ರಾಸಾಯನಿಕಗಳು, ಔಷಧಗಳು, ಮಾಲಿನ್ಯಕಾರಕಗಳು ಮತ್ತು ಕೀಟನಾಶಕಗಳಂತಹ ವಿಷಗಳು ಸಾಮಾನ್ಯವಾಗಿ ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಅಂತಹ ವಿಷವನ್ನು ತೆಗೆದುಹಾಕಲು ಇದು ಅವಶ್ಯಕವಾಗಿದೆ.(Unsplash)

ನಮಗೆ ತಿಳಿದಿರುವ ಆಹಾರ ಪದಾರ್ಥಗಳಿಂದಲೇ ಹೆಚ್ಚಿನ ಬಾರಿ ನಮಗೆ ಅಲರ್ಜಿ ಉಂಟಾಗುತ್ತವೆ. ಆ ವಸ್ತುಗಳನ್ನು ನಿಮ್ಮ ಆಹಾರದ ಪಟ್ಟಿಯಿಂದ ತೆಗೆದುಹಾಕುವುದು ಉತ್ತಮ.
icon

(3 / 8)

ನಮಗೆ ತಿಳಿದಿರುವ ಆಹಾರ ಪದಾರ್ಥಗಳಿಂದಲೇ ಹೆಚ್ಚಿನ ಬಾರಿ ನಮಗೆ ಅಲರ್ಜಿ ಉಂಟಾಗುತ್ತವೆ. ಆ ವಸ್ತುಗಳನ್ನು ನಿಮ್ಮ ಆಹಾರದ ಪಟ್ಟಿಯಿಂದ ತೆಗೆದುಹಾಕುವುದು ಉತ್ತಮ.(Unsplash)

ನಾವು ಮನೆಯಿಂದ ಹೊರಗಡೆ ರೆಸ್ಟೊರೆಂಟ್‌ ಅಥವಾ ಬೇರೆ ಸ್ಥಳದಲ್ಲಿ ಆಹಾರ ಸೇವಿಸುವಾಗ ನಮಗೆ ಅಲರ್ಜಿಯಾಗಬಹುದು. ಅಂತಹ ಆಹಾರ ಪದಾರ್ಥಗಳ ಬಗ್ಗೆ ಆಹಾರವನ್ನು ಬಡಿಸುವ ವ್ಯಕ್ತಿಗೆ ತಿಳಿಸುವುದು ಮುಖ್ಯ. ಆ ಮೂಲಕ ಇಂತಹ ಆಹಾರ ಪದಾರ್ಥಗಳನ್ನು ನಮಗೆ ಬಡಿಸದಂತೆ ಎಚ್ಚರಿಕೆ ವಹಿಸಬಹುದು.
icon

(4 / 8)

ನಾವು ಮನೆಯಿಂದ ಹೊರಗಡೆ ರೆಸ್ಟೊರೆಂಟ್‌ ಅಥವಾ ಬೇರೆ ಸ್ಥಳದಲ್ಲಿ ಆಹಾರ ಸೇವಿಸುವಾಗ ನಮಗೆ ಅಲರ್ಜಿಯಾಗಬಹುದು. ಅಂತಹ ಆಹಾರ ಪದಾರ್ಥಗಳ ಬಗ್ಗೆ ಆಹಾರವನ್ನು ಬಡಿಸುವ ವ್ಯಕ್ತಿಗೆ ತಿಳಿಸುವುದು ಮುಖ್ಯ. ಆ ಮೂಲಕ ಇಂತಹ ಆಹಾರ ಪದಾರ್ಥಗಳನ್ನು ನಮಗೆ ಬಡಿಸದಂತೆ ಎಚ್ಚರಿಕೆ ವಹಿಸಬಹುದು.(Unsplash)

ನಮಗೆ ಅಲರ್ಜಿ ಆಗಬಹುದಾದ ವಸ್ತುಗಳನ್ನು ಆಹಾರದಿಂದ ಹೊರಗಿಡಬೇಕು. ಆದಾಗ್ಯೂ, ಪರ್ಯಾಯ ಆಹಾರ ಪದಾರ್ಥಗಳಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಂಗ್ರಹಿಸುವುದರ ಮೇಲೆ ನಾವು ಗಮನಹರಿಸಬೇಕು.
icon

(5 / 8)

ನಮಗೆ ಅಲರ್ಜಿ ಆಗಬಹುದಾದ ವಸ್ತುಗಳನ್ನು ಆಹಾರದಿಂದ ಹೊರಗಿಡಬೇಕು. ಆದಾಗ್ಯೂ, ಪರ್ಯಾಯ ಆಹಾರ ಪದಾರ್ಥಗಳಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಂಗ್ರಹಿಸುವುದರ ಮೇಲೆ ನಾವು ಗಮನಹರಿಸಬೇಕು.(Unsplash)

ನಾವು ಪ್ರತಿಯೊಂದು ಆಹಾರದ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಬೇಕು. ಅಲರ್ಜಿಯನ್ನು ತಪ್ಪಿಸಲು ಆಹಾರದ ಅಂಶಗಳ ಬಗ್ಗೆ ತಿಳಿದಿರಬೇಕು.
icon

(6 / 8)

ನಾವು ಪ್ರತಿಯೊಂದು ಆಹಾರದ ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಬೇಕು. ಅಲರ್ಜಿಯನ್ನು ತಪ್ಪಿಸಲು ಆಹಾರದ ಅಂಶಗಳ ಬಗ್ಗೆ ತಿಳಿದಿರಬೇಕು.(Unsplash)

ಆಹಾರ ಅಲರ್ಜಿಯ ಆರಂಭಿಕ ಲಕ್ಷಣಗಳನ್ನು ಗುರುತಿಸಬೇಕು. ಅಲರ್ಜಿ ವಿರೋಧಿ ಔಷಧಿಗಳನ್ನು ಯಾವಾಗಲೂ ಜತೆಗೆ ಇಟ್ಟುಕೊಳ್ಳಬೇಕು.
icon

(7 / 8)

ಆಹಾರ ಅಲರ್ಜಿಯ ಆರಂಭಿಕ ಲಕ್ಷಣಗಳನ್ನು ಗುರುತಿಸಬೇಕು. ಅಲರ್ಜಿ ವಿರೋಧಿ ಔಷಧಿಗಳನ್ನು ಯಾವಾಗಲೂ ಜತೆಗೆ ಇಟ್ಟುಕೊಳ್ಳಬೇಕು.(Unsplash)

ನಮಗೆ ಒಂದು ವೇಳೆ ನಿರ್ದಿಷ್ಟ ಖಾದ್ಯದಿಂದ ಅಲರ್ಜಿ ಉಂಟಾದರೆ, ಆ ಖಾದ್ಯದೊಂದಿಗೆ ಬಳಸಿದ ಚಮಚವನ್ನು ಮತ್ತೆ ಬಳಸಬಾರದು, ಅದನ್ನು ಸ್ವಚ್ಛಗೊಳಿಸಬೇಕು. 
icon

(8 / 8)

ನಮಗೆ ಒಂದು ವೇಳೆ ನಿರ್ದಿಷ್ಟ ಖಾದ್ಯದಿಂದ ಅಲರ್ಜಿ ಉಂಟಾದರೆ, ಆ ಖಾದ್ಯದೊಂದಿಗೆ ಬಳಸಿದ ಚಮಚವನ್ನು ಮತ್ತೆ ಬಳಸಬಾರದು, ಅದನ್ನು ಸ್ವಚ್ಛಗೊಳಿಸಬೇಕು. (Unsplash)


IPL_Entry_Point

ಇತರ ಗ್ಯಾಲರಿಗಳು