ಕೊನೆಯ ಒಂದೂವರೆ ಓವರ್​​ನಲ್ಲಿ ಟಿಮ್ ಡೇವಿಡ್ ಸುನಾಮಿ; ಸೋಲುವ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರಣರೋಚಕ ಗೆಲುವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕೊನೆಯ ಒಂದೂವರೆ ಓವರ್​​ನಲ್ಲಿ ಟಿಮ್ ಡೇವಿಡ್ ಸುನಾಮಿ; ಸೋಲುವ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರಣರೋಚಕ ಗೆಲುವು

ಕೊನೆಯ ಒಂದೂವರೆ ಓವರ್​​ನಲ್ಲಿ ಟಿಮ್ ಡೇವಿಡ್ ಸುನಾಮಿ; ಸೋಲುವ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ರಣರೋಚಕ ಗೆಲುವು

  • NZ vs AUS 1st T20I: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ರೋಚಕ ಗೆಲುವು ಗೆಲುವು ದಾಖಲಿಸಿದೆ. ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿದ ಆಸೀಸ್ ಗೆದ್ದು ಸರಣಿಯಲ್ಲಿ ಮುನ್ನಡೆ ಪಡೆದಿದೆ.

ಕೊನೆಯ 9 ಎಸೆತಗಳಲ್ಲಿ ಗೆಲುವಿಗೆ ಬೇಕಿದ್ದದ್ದು 32 ರನ್. ಮತ್ತೊಂದೆಡೆ ಆಸ್ಟ್ರೇಲಿಯಾ ತಂಡಕ್ಕೆ ತೀವ್ರ ಒತ್ತಡ. ಆದರೆ ಅಂತಿಮ ಒಂದೂವರೆ ಓವರ್​​ನಲ್ಲಿ ರನ್ ಸುನಾಮಿ ಎಬ್ಬಿಸಿದ ಟಿಮ್ ಡೇವಿಡ್, ಸೋಲುವ ಪಂದ್ಯದಲ್ಲಿ ಆಸ್ಟ್ರೇಲಿಯಾಗೆ ಗೆಲುವು ತಂದುಕೊಟ್ಟರು. ಡೇವಿಡ್ 10 ಎಸೆತಗಳಲ್ಲಿ 32 ರನ್ ಗಳಿಸಿ ವಿಧ್ವಂಸ ಸೃಷ್ಟಿಸಿದರು. ನ್ಯೂಜಿಲೆಂಡ್ ಕಿವಿ ಹಿಂಡಿದ ಆಸೀಸ್ 6 ವಿಕೆಟ್​ ಭರ್ಜರಿ ಜಯ ಸಾಧಿಸಿತು.
icon

(1 / 7)

ಕೊನೆಯ 9 ಎಸೆತಗಳಲ್ಲಿ ಟಿಮ್ ಡೇವಿಡ್ ಆರ್ಭಟ ಹೇಗಿತ್ತು ಎಂಬುದನ್ನು ನೋಡಿ. 19ನೇ ಓವರ್​ನ ಕೊನೆಯ 3 ಎಸೆತಗಳಲ್ಲಿ ಒಂದು ಬೌಂಡರಿ, 2 ಸಿಕ್ಸರ್ ಸಿಡಿಸಿದ ಆಸೀಸ್ ಆಟಗಾರ, ಕೊನೆಯ ಓವರ್​ನಲ್ಲಿ ಕೊನೆಯ ಓವರ್‌ನಲ್ಲಿ ರನ್ ಚಚ್ಚಿದರು. 20ನೇ ಓವರ್‌ನ ಮೊದಲ ಎಸೆತ ವೈಡ್, ಮೊದಲ 3 ಎಸೆತಗಳಲ್ಲಿ 4 ರನ್ ಬಂದವು. ಕೊನೆಯ 3 ಎಸೆತಗಳಲ್ಲಿ 12 ರನ್‌ ಅಗತ್ಯವಿತ್ತು.
icon

(2 / 7)

ಡೇವಿಡ್ 4ನೇ ಎಸೆತದಲ್ಲಿ ಸಿಕ್ಸರ್, ಐದನೇ ಎಸೆತದಲ್ಲಿ 2 ರನ್ ಮತ್ತು ಕೊನೆಯ ಎಸೆತದಲ್ಲಿ ಬೌಂಡರಿ ಗಳಿಸಿ ಮ್ಯಾಚ್ ವಿನ್ನಿಂಗ್ ಹೀರೋ ಆದರು. ಟಿಮ್ ಡೇವಿಡ್ ಜೊತೆಗೆ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ 44 ಎಸೆತಗಳಲ್ಲಿ 72 ರನ್ ಗಳಿಸಿ ಅಜೇಯರಾಗಿ ಉಳಿದರು. ಆ ಮೂಲಕ ಗೆಲುವಿನ ರೂವಾರಿಯಾದರು.
icon

(3 / 7)

ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್-ಆಸ್ಟ್ರೇಲಿಯಾ ನಡುವಿನ ಮೊದಲ ಟಿ20ಐ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 215 ರನ್ ಗಳಿಸಿತು. ಫಿನ್ ಅಲೆನ್ 17 ಎಸೆತಗಳಲ್ಲಿ 32 ರನ್ ಗಳಿಸಿ ಔಟಾದರು. ಆ ನಂತರ ಡೆವೊನ್ ಕಾನ್ವೆ ಮತ್ತು ರಚಿನ್ ರವೀಂದ್ರ ಎರಡನೇ ವಿಕೆಟ್‌ಗೆ 64 ಎಸೆತಗಳಲ್ಲಿ 113 ರನ್‌ಗಳ ಜೊತೆಯಾಟ ನೀಡಿದರು.
icon

(4 / 7)

ರವೀಂದ್ರ 35 ಎಸೆತಗಳಲ್ಲಿ 68 ರನ್ ಗಳಿಸಿದರು. ಕಾನ್ವೆ 46 ಎಸೆತಗಳಲ್ಲಿ 63 ರನ್ ಗಳಿಸಿದರು. ಮೊದಲ 16 ಎಸೆತಗಳಲ್ಲಿ 14 ರನ್​ಗಳಿಸಿದ ರಚಿನ್, ಕೊನೆಯ 19 ಎಸೆತಗಳಲ್ಲಿ 54 ರನ್ ಗಳಿಸಿದ್ದಾರೆ. ಈ ಇಬ್ಬರ ಅದ್ಭುತ ಪ್ರದರ್ಶನದಿಂದ ಕಿವೀಸ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ನಿಗದಿತ 20 ಓವರ್‌ಗಳಲ್ಲಿ ನ್ಯೂಜಿಲೆಂಡ್ 3 ವಿಕೆಟ್‌ಗೆ 215 ರನ್ ಗಳಿಸಿತು. ಆಸೀಸ್​ ಪರ ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಮಿಚೆಲ್ ಮಾರ್ಷ್ ತಲಾ 1 ವಿಕೆಟ್ ಪಡೆದರು.
icon

(5 / 7)

ಇದಕ್ಕುತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿತು. ಮಿಚೆಲ್ ಮಾರ್ಷ್ 72, ಟ್ರಾವಿಸ್ ಹೆಡ್ 24, ಡೇವಿಡ್ ವಾರ್ನರ್ 32, ಗ್ಲೆನ್ ಮ್ಯಾಕ್ಸ್‌ವೆಲ್ 25 ರನ್, ಜೋಶ್ ಇಂಗ್ಲಿಷ್ 20 ಎಸೆತಗಳಲ್ಲಿ 20 ರನ್ ಗಳಿಸಿದರು. ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರು. ಆ್ಯಡಮ್ ಮಿಲ್ನೆ, ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು. 
icon

(6 / 7)

ಇದಕ್ಕುತ್ತರವಾಗಿ ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ಜಯಭೇರಿ ಬಾರಿಸಿತು. ಮಿಚೆಲ್ ಮಾರ್ಷ್ 72, ಟ್ರಾವಿಸ್ ಹೆಡ್ 24, ಡೇವಿಡ್ ವಾರ್ನರ್ 32, ಗ್ಲೆನ್ ಮ್ಯಾಕ್ಸ್‌ವೆಲ್ 25 ರನ್, ಜೋಶ್ ಇಂಗ್ಲಿಷ್ 20 ಎಸೆತಗಳಲ್ಲಿ 20 ರನ್ ಗಳಿಸಿದರು. ಕಿವೀಸ್ ಪರ ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಪಡೆದರು. ಆ್ಯಡಮ್ ಮಿಲ್ನೆ, ಲಾಕಿ ಫರ್ಗುಸನ್ ತಲಾ 1 ವಿಕೆಟ್ ಪಡೆದರು. (AFP)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಓದಿ.
icon

(7 / 7)

ಇತರ ಗ್ಯಾಲರಿಗಳು