Odisha Train Crash: ಒಡಿಶಾ ರೈಲು ಅಪಘಾತ; ಕಂಬಿಗಳ ಮೇಲೆ ಬಿದ್ದಿತ್ತು ಪ್ರೇಮಪತ್ರಗಳು PHOTOS
- Love Letters at Odisha Train Crash Site: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಜೂನ್ 2 ರಂದು ನಡೆದ ಭೀಕರ ರೈಲು ದುರಂತದಲ್ಲಿ 270ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಚರಣೆ ಬಳಿಕ ದುರಸ್ತಿ ಕಾರ್ಯ ನಡೆಯುತ್ತಿದ್ದು, ಈ ವೇಳೆ ಘಟನಾ ಸ್ಥಳದಲ್ಲಿ ಪ್ರೇಮಪತ್ರಗಳು, ಪ್ರೇಮಕವಿತೆಗಳು ಸಿಕ್ಕಿವೆ..

(1 / 5)
ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. 48 ಗಂಟೆಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಹಳಿಗಳನ್ನು ಸರಿಪಡಿಸುವ ದುರಸ್ತಿ ಕಾರ್ಯ ನಡೆಯುತ್ತಿದೆ. ಬಂಗಾಳಿ ಭಾಷೆಯಲ್ಲಿ ಪ್ರೇಮ ಕವಿಗಳು, ಪ್ರೇಮ ಪತ್ರಗಳನ್ನು ಬರೆದ ಹಾಳೆಗಳು ಚದುರಿ ಹೋಗಿದ್ದು, ಘಟನಾ ಸ್ಥಳದ ಕಂಬಿಗಳ ಮೇಲೆ ಸಿಕ್ಕಿವೆ.
(2 / 5)
"ಚದುರಿದ ಮೋಡಗಳು ಸಣ್ಣ ಮಳೆಗೆ ಕಾರಣವಾಗುತ್ತವೆ, ನಾವು ಕೇಳುವ ಸಣ್ಣ ಕಥೆಗಳಿಂದ ಪ್ರೀತಿ ಅರಳುತ್ತದೆ" - ಇದು ಬಂಗಾಳಿ ಭಾಷೆಯಲ್ಲಿ ಪ್ರಯಾಣಿಕನೊಬ್ಬ ಬರೆದ ಪ್ರೇಮ ಕವಿತೆ.
(3 / 5)
"ಪ್ರೀತಿಯಿಂದ ನನಗೆ ಎಲ್ಲಾ ಸಮಯದಲ್ಲೂ ನೀವು ಬೇಕು, ಎಲ್ಲಾ ಸಮಯದಲ್ಲೂ ನೀವು ನನ್ನ ಮನಸ್ಸಿನಲ್ಲಿ ಇರುತ್ತೀರಿ" ಎಂದು ಇನ್ನೊಂದು ಪ್ರೇಮಪತ್ರದಲ್ಲಿ ಬರೆಯಲಾಗಿದೆ. ಆದರೆ ಈ ಪ್ರೇಮಪತ್ರ, ಕವಿತೆಗಳನ್ನು ಬರೆದ ವ್ಯಕ್ತಿ ದುರಂತದಲ್ಲಿ ಪಾರಾಗಿ ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ.
(4 / 5)
ಇನ್ನೊಂದು ಬದಿಯಲ್ಲಿ ಆನೆ, ಮೀನು, ನವಿಲಿನ ಚಿತ್ರಗಳನ್ನು ಬಿಡಿಸಿರುವ ಹಾಳೆಗಳೂ ಸಿಕ್ಕಿವೆ. ಬಹುಷಃ ಇದು ಮಕ್ಕಳು ಬಿಡಿಸಿದ ಚಿತ್ರಗಳಾಗಿರಬಹುದು.
ಇತರ ಗ್ಯಾಲರಿಗಳು