ಕನ್ನಡ ಸುದ್ದಿ  /  Photo Gallery  /  One Rank One Pension Arrears Settlement Issue An Important Directive From Supreme Court

Supreme Court: ಒಂದು ಹುದ್ದೆ, ಒಂದು ಪಿಂಚಣಿ ಬಾಕಿ ಇತ್ಯರ್ಥ ವಿಚಾರ; ಸುಪ್ರೀಂ ಕೋರ್ಟ್‌ನಿಂದ ಮಹತ್ವದ ನಿರ್ದೇಶನ

'ಒಂದು ಹುದ್ದೆ, ಒಂದು ಪಿಂಚಣಿ' ನೀತಿಯ ಅಡಿಯಲ್ಲಿ ನಿವೃತ್ತ ಅರ್ಹ ಸೇನಾ ಸಿಬ್ಬಂದಿಗೆ ಪಿಂಚಣಿ ಬಾಕಿ ಪಾವತಿ ಕುರಿತು ವಿವರವಾದ ಮಾರ್ಗಸೂಚಿಯನ್ನ ನೀಡುವಂತೆ ರಕ್ಷಣಾ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಜೊತೆಗೆ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಪ್ರತಿಭಟನಾಕಾರರಿಗೆ ಕೋರ್ಟ್ ಎಚ್ಚರಿಕೆ ನೀಡಿದೆ.

'ಒಂದು ಹುದ್ದೆ, ಒಂದು ಪಿಂಚಣಿ' ಪ್ರಕಾರ, ಸೋಮವಾರದೊಳಗೆ ಅರ್ಹ ನಿವೃತ್ತ ಸೈನಿಕರ ಬಾಕಿ ಪಾವತಿ ಪ್ರಕ್ರಿಯೆ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ಎಷ್ಟು ಬಾಕಿ ಇದೆ ಎಂದು ಕೇಳಿದೆ. ಅಲ್ಲದೆ, ಕೇಂದ್ರದ ಪರವಾಗಿ ಕೋರ್ಟ್ ಗೆ ಹಾಜರಾದ ಅಟಾರ್ನಿ ಜನರಲ್‌ಗೆ ಸಿಜೆಐ ಡಿ.ವೈ.ಚಂದ್ರಚೂಡ್ ಸೂಚಿಸಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತರು ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಎಚ್ಚರಿಸಿದೆ.
icon

(1 / 5)

'ಒಂದು ಹುದ್ದೆ, ಒಂದು ಪಿಂಚಣಿ' ಪ್ರಕಾರ, ಸೋಮವಾರದೊಳಗೆ ಅರ್ಹ ನಿವೃತ್ತ ಸೈನಿಕರ ಬಾಕಿ ಪಾವತಿ ಪ್ರಕ್ರಿಯೆ ಬಗ್ಗೆ ಸುಪ್ರೀಂ ಕೋರ್ಟ್ ಇನ್ನೂ ಎಷ್ಟು ಬಾಕಿ ಇದೆ ಎಂದು ಕೇಳಿದೆ. ಅಲ್ಲದೆ, ಕೇಂದ್ರದ ಪರವಾಗಿ ಕೋರ್ಟ್ ಗೆ ಹಾಜರಾದ ಅಟಾರ್ನಿ ಜನರಲ್‌ಗೆ ಸಿಜೆಐ ಡಿ.ವೈ.ಚಂದ್ರಚೂಡ್ ಸೂಚಿಸಿದ್ದಾರೆ. ಅಲ್ಲದೆ ಪ್ರತಿಭಟನಾ ನಿರತರು ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಎಚ್ಚರಿಸಿದೆ.(PTI)

ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, 75 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಸೈನಿಕರಿಗೆ ಮತ್ತು ಹುತಾತ್ಮ ಅಥವಾ ಮೃತ ಸೈನಿಕರ ಪತ್ನಿಯರಿಗೆ ಆದ್ಯತೆ ನೀಡಬಹುದು ಎಂದು ಹೇಳಿದೆ. ‘ಒಂದು ಹುದ್ದೆ, ಒಂದು ಪಿಂಚಣಿ’ಯ ಬಾಕಿಯನ್ನು ಈ ವರ್ಷದ ಮಾರ್ಚ್‌ನೊಳಗೆ ಕೇಂದ್ರವು ಪಾವತಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಂತರ ರಕ್ಷಣಾ ಸಚಿವಾಲಯ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿ ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ ಮಾಡುವುದಾಗಿ ಹೇಳಿದೆ. ಈ ಅಧಿಸೂಚನೆಯಿಂದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
icon

(2 / 5)

ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, 75 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಸೈನಿಕರಿಗೆ ಮತ್ತು ಹುತಾತ್ಮ ಅಥವಾ ಮೃತ ಸೈನಿಕರ ಪತ್ನಿಯರಿಗೆ ಆದ್ಯತೆ ನೀಡಬಹುದು ಎಂದು ಹೇಳಿದೆ. ‘ಒಂದು ಹುದ್ದೆ, ಒಂದು ಪಿಂಚಣಿ’ಯ ಬಾಕಿಯನ್ನು ಈ ವರ್ಷದ ಮಾರ್ಚ್‌ನೊಳಗೆ ಕೇಂದ್ರವು ಪಾವತಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಂತರ ರಕ್ಷಣಾ ಸಚಿವಾಲಯ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿ ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ ಮಾಡುವುದಾಗಿ ಹೇಳಿದೆ. ಈ ಅಧಿಸೂಚನೆಯಿಂದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.(HT_PRINT)

ಪರಿಷ್ಕೃತ 'ಒಂದು ಹುದ್ದೆ, ಒಂದು ಪಿಂಚಣಿ' ನೀತಿಯು 2019ರ ಜುಲೈ 1 ರಿಂದ ಜಾರಿಗೆ ಬಂದಿದೆ. ಇದರಿಂದ ನಿವೃತ್ತ ಸೇನಾ ಸಿಬ್ಬಂದಿಗೆ ಭಾರಿ ಮೊತ್ತದ ಬಾಕಿ ಹಣ ಸಿಗಲಿದೆ. 25.13 ಲಕ್ಷ ಪಿಂಚಣಿದಾರರು ಈ ನೀತಿಯಿಂದ ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ, ಮೃತ ಸೈನಿಕರ ಪತ್ನಿಯರು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ. 
icon

(3 / 5)

ಪರಿಷ್ಕೃತ 'ಒಂದು ಹುದ್ದೆ, ಒಂದು ಪಿಂಚಣಿ' ನೀತಿಯು 2019ರ ಜುಲೈ 1 ರಿಂದ ಜಾರಿಗೆ ಬಂದಿದೆ. ಇದರಿಂದ ನಿವೃತ್ತ ಸೇನಾ ಸಿಬ್ಬಂದಿಗೆ ಭಾರಿ ಮೊತ್ತದ ಬಾಕಿ ಹಣ ಸಿಗಲಿದೆ. 25.13 ಲಕ್ಷ ಪಿಂಚಣಿದಾರರು ಈ ನೀತಿಯಿಂದ ಪ್ರಯೋಜನ ಪಡೆಯುತ್ತಾರೆ. ಇದಲ್ಲದೆ, ಮೃತ ಸೈನಿಕರ ಪತ್ನಿಯರು ಸಹ ಇದರ ವ್ಯಾಪ್ತಿಗೆ ಒಳಪಡುತ್ತಾರೆ. (PTI)

2019 ರಿಂದ 2022 ರವರೆಗೆ ಪರಿಷ್ಕೃತ 'ಒಂದು ಹುದ್ದೆ, ಒಂದು ಪಿಂಚಣಿ' ಯೋಜನೆಗೆ ಕೇಂದ್ರವು 23,600 ಕೋಟಿ ಖರ್ಚು ಮಾಡಲಿದೆ. ಅಂದರೆ, ನಿವೃತ್ತ ಸೇನಾ ಸಿಬ್ಬಂದಿಯ ಪಿಂಚಣಿಗಾಗಿ ಸರ್ಕಾರ ಹೆಚ್ಚುವರಿಯಾಗಿ 8 ಸಾವಿರದ 450 ಕೋಟಿ ಖರ್ಚು ಮಾಡಲಿದೆ. ಇದುಶೇ. 31 ರಷ್ಟು ತುಟ್ಟಿಭತ್ಯೆ ಅಥವಾ ಸೇನಾ ಸಿಬ್ಬಂದಿಯ ಡಿಆರ್ ಅನ್ನು ಒಳಗೊಂಡಿರುತ್ತದೆ.
icon

(4 / 5)

2019 ರಿಂದ 2022 ರವರೆಗೆ ಪರಿಷ್ಕೃತ 'ಒಂದು ಹುದ್ದೆ, ಒಂದು ಪಿಂಚಣಿ' ಯೋಜನೆಗೆ ಕೇಂದ್ರವು 23,600 ಕೋಟಿ ಖರ್ಚು ಮಾಡಲಿದೆ. ಅಂದರೆ, ನಿವೃತ್ತ ಸೇನಾ ಸಿಬ್ಬಂದಿಯ ಪಿಂಚಣಿಗಾಗಿ ಸರ್ಕಾರ ಹೆಚ್ಚುವರಿಯಾಗಿ 8 ಸಾವಿರದ 450 ಕೋಟಿ ಖರ್ಚು ಮಾಡಲಿದೆ. ಇದುಶೇ. 31 ರಷ್ಟು ತುಟ್ಟಿಭತ್ಯೆ ಅಥವಾ ಸೇನಾ ಸಿಬ್ಬಂದಿಯ ಡಿಆರ್ ಅನ್ನು ಒಳಗೊಂಡಿರುತ್ತದೆ.(PTI)

ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಸರಾಸರಿ ಆಧಾರದ ಮೇಲೆ ಪಿಂಚಣಿಯನ್ನು ನಿರ್ಧರಿಸಲಾಗುತ್ತದೆ. ಪರಿಣಾಮವಾಗಿ, ವಿವಿಧ ಸಮಯಗಳಲ್ಲಿ ಒಂದೇ ಹುದ್ದೆಯನ್ನು ಹೊಂದಿರುವ ನಿವೃತ್ತ ಸೈನಿಕರು ಒಂದೇ ಪ್ರಮಾಣದ ಪಿಂಚಣಿ ಪಡೆಯುತ್ತಾರೆ. ಅಂದರೆ 1990ರಲ್ಲಿ ಒಬ್ಬ ಬ್ರಿಗೇಡಿಯರ್ ನಿವೃತ್ತರಾದರೆ, 2014ರಲ್ಲಿ ಮತ್ತೊಬ್ಬ ಬ್ರಿಗೇಡಿಯರ್ ನಿವೃತ್ತರಾಗಿದ್ದರೆ ಇಬ್ಬರಿಗೂ ಒಂದೇ ರೀತಿಯ ಪಿಂಚಣಿ ಸಿಗಲಿದೆ.
icon

(5 / 5)

ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಸರಾಸರಿ ಆಧಾರದ ಮೇಲೆ ಪಿಂಚಣಿಯನ್ನು ನಿರ್ಧರಿಸಲಾಗುತ್ತದೆ. ಪರಿಣಾಮವಾಗಿ, ವಿವಿಧ ಸಮಯಗಳಲ್ಲಿ ಒಂದೇ ಹುದ್ದೆಯನ್ನು ಹೊಂದಿರುವ ನಿವೃತ್ತ ಸೈನಿಕರು ಒಂದೇ ಪ್ರಮಾಣದ ಪಿಂಚಣಿ ಪಡೆಯುತ್ತಾರೆ. ಅಂದರೆ 1990ರಲ್ಲಿ ಒಬ್ಬ ಬ್ರಿಗೇಡಿಯರ್ ನಿವೃತ್ತರಾದರೆ, 2014ರಲ್ಲಿ ಮತ್ತೊಬ್ಬ ಬ್ರಿಗೇಡಿಯರ್ ನಿವೃತ್ತರಾಗಿದ್ದರೆ ಇಬ್ಬರಿಗೂ ಒಂದೇ ರೀತಿಯ ಪಿಂಚಣಿ ಸಿಗಲಿದೆ.(PTI)


ಇತರ ಗ್ಯಾಲರಿಗಳು